ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯಲ್ಲಿ ಇತ್ತೀಚೆಗೆ ವನ್ಯ ಜೀವಿಗಳ ಕಾಟ ಹೆಚ್ಚಾಗಿದ್ದು, ರೈತರು ಇಟ್ಟಿರುವ ಬೆಳೆಗಳನ್ನು ರಾತ್ರಿ ವೇಳೆ ನಾಶಪಡಿಸುತ್ತಿದ್ದರು ಅರಣ್ಯ ಇಲಾಖೆಯವರು ಮೌನವಹಿಸಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ನಷ್ಟು ಅನುಭವಿಸುತ್ತಿರುವ ಕಾಲದಲ್ಲಿ ವನ್ಯ ಜೀವಿಗಳಿಂದ ಫಸಲನ್ನು ನಾಶಪಡಿಸುತ್ತಿರುವುದರಿಂದ ರೈತರು ಕಂಗಾಲಾಗುವAತಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಕೋಲಾರ ಜಿಲ್ಲೆ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಗಡಿಗೆ ಹೊಂದಿಕೊAಡಿದೆ. ಬಂಗಾರಪೇಟೆ ಮತ್ತು ಕೆ.ಜಿ.ಎಫ್.ಗಡಿಭಾಗಗಳಲ್ಲಿ ಆನೆಗಳ ಹಾವಳಿಯಿಂದ ಬೆಳೆಗಳು ನಾಸವಾಗುತ್ತಿವೆ. ಉಳಿದಂತೆ ಜಿಲ್ಲೆಯಲ್ಲಿ ಕಾಡುಹಂದಿ, ಜಿಂಕೆ ಸೇರಿದಂತೆ ಇತರೆ ವನ್ಯ ಜೀವಿಗಳ ಸಂತತಿ ಹೆಚ್ಚಾಗಿದ್ದು, ರಾತ್ರಿ ವೇಳೆ ರೈತರು ಮಾಡಿದ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ನವಿಲುಗಳು ಹೆಚ್ಚಾಗಿದ್ದು, ಬಿತ್ತನೆ ಬೀಜವನ್ನು ತಿನ್ನುವಂತೆ ಆಗಿವೆ, ಇದರ ಜೊತೆಗೆ ಕೋತಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಇಟ್ಟ ಎಲ್ಲಾ ಬೆಳೆಗಳ ಫಸಲನ್ನು ತಿನ್ನುವುದರ ಜೊತೆಗೆ ಫಸಲನ್ನು ತುಳಿದು ಹಾಳು ಮಾಡುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಜಿಲ್ಲೆಯ ಅರಣ್ಯ ಪ್ರದೇಶಗಳಿಂದ ವನ್ಯ ಜೀವಿಗಳು ಬಾರದಂತೆ ಅರಣ್ಯ ಇಲಾಖೆಯವರು ಅರಣ್ಯ ಸುತ್ತಲು ಫೆನ್ಸಿಂಗ್ ಮತ್ತು ಜಿ.ಸಿ.ಬಿ. ಮೂಲಕ ಚರಂಡಿಯನ್ನು ದೊಡ್ಡಮಟ್ಟದಲ್ಲಿ ನಿರ್ಮಿಸಿಸಿದ್ದಾರೆ. ಆದರೆ ಅಲ್ಲಲ್ಲಿ ಕಳಪೆ ಕಾಮಗಾರಿಯಿಂದಾಗಿ ಫೆನ್ಸಿಂಗ್ ಕಂಬಗಳು ಮುರಿದುಬಿದ್ದಿರುವ ಕಾರಣ ವನ್ಯ ಜೀವಿಗಳು ರೈತರ ತೋಟಗಳಿಗೆ ಲಗೆ ಇಡುವಂತೆ ಆಗಿದೆ.
ಕಾಡು ಹಂದಿಗಳು ಅರಣ್ಯ ಅಲ್ಲದೆ ಗ್ರಾಮೀಣ ಭಾಗದ ದೊಡ್ಡ ದೊಡ್ಡ ಪೊದೆಗಳಲ್ಲಿ ಸೇರಿಕೊಂಡಿರುವ ಕಾರಣ ರಾತ್ರಿ ವೇಳೆ ತೋಟಗಳಿಗೆ ನುಗ್ಗಿ ಎಲ್ಲಾ ಬೆಳೆಗಳನ್ನು ಹಾಳು ಮಾಡುತ್ತಿವೆ. ಇದರ ಜೊತೆಗೆ ಜಿಂಕೆಗಳು ಸಹ ಬೆಳೆಗಳನ್ನು ಮೇಯಲು ಬಂದು ನಾಶ ಮಾಡುತ್ತಿವೆ. ರೈತರು ವನ್ಯ ಜೀವಿಗಳು ಬಾರದಂತೆ ಕ್ರಮ ಕೈಗೊಂಡರೆ ಅರಣ್ಯ ಇಲಾಖೆಯವರು ರೈತರ ಮೇಲೆ ದಾಳಿ ಮಾಡುತ್ತಿದ್ದಾರೆ. ರೈತರ ಕಷ್ಟವನ್ನು ಯಾರೂ ಕೇಳುವವರು ಇಲ್ಲದಂತೆ ಆಗಿದೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ರಾಗಿ, ಅವರೆ, ತೊಗರಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇತ್ತೀಚೆಗೆ ಮಳೆ ಬೀಳುತ್ತಿರುವುದರಿಂದ ರಾಗಿ ಹೊಲಗಳು ಸಮೃದ್ಧವಾಗಿ ಬೆಳೆದುನಿಂತಿವೆ. ಹಂದಿಗಳು ಹೊಲಗಳಿಗೆ ನುಗ್ಗಿ ರಾಗಿ ಪೈರನ್ನು ನಾಶ ಮಾಡುತ್ತಿವೆ. ಇದರ ಜೊತೆಗೆ ಟೊಮೆಟೋ ಮತ್ತು ಹೂಕೋಸು, ಗಡ್ಡೆಕೋಸು ಮುಂತಾದ ತೋಟಗಾರಿಕೆ ಬೆಳೆಗಳಿಗೆ ಮುಗ್ಗುತ್ತಿವೆ. ಇಡೀ ರಾತ್ರಿ ಅವುಗಳಿಗಾಗಿ ರೈತರು ಕಾವಲು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಂದಿಗಳನ್ನು ಓಡಿಸಲು ಮುಂದಾದರೆ ಮನುಷ್ಯನ ವಿರುದ್ಧವೇ ತಿರುಗಿ ಬೀಳುವ ಪರಿಸ್ಥಿತಿ ಉಂಟಾಗಿದೆ.
ಇದರ ಜೊತೆಗೆ ಅರಣ್ಯ ಬಿಟ್ಟು ಗ್ರಾಮಗಳ ಕಡೆ ಮುಖ ಮಾಡಿರುವ ಕೋತಿಗಳು ಅರಣ್ಯಕ್ಕೆ ಹೋಗದೆ ಗ್ರಾಮಗಳಲ್ಲಿಯೇ ಬೀಡು ಬಿಟ್ಟು ರೈತರು ಬೆಳೆದಂತಹ ತರಕಾರಿ ಬೆಳೆಗಳನ್ನು ನಾಶ ಮಾಡುತ್ತಿವೆ. ವನ್ಯ ಜೀವಿಗಳನ್ನು ಹತೋಟಿಗೆ ತರಬೇಕಾದ ವನಪಾಲಕರು ಒತ್ತುವರಿ ಹೆಸರಿನಲ್ಲಿ ರೈತರ ಜಮೀನುಗಳನ್ನು ಮತ್ತು ಫಸಲನ್ನು ನಾಸ ಮಾಡುತ್ತಿದ್ದಾರೆ. ಒಂದು ಕಡೆ ವನ್ಯ ಜೀವಿಗಳಿಂದ ಫಸಲು ನಾಸವಾಗುತ್ತಿದ್ದರೆ ಮತ್ತೊಂದು ಕಡೆ ಒತ್ತುವರಿ ಹೆಸರಿನಲ್ಲಿ ಇಲಾಖೆಯವರು ರೈತರು ಬೆಳೆದ ಫಸಲನ್ನು ನಾಶ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಬಾಕ್ಸ್
ವನ್ಯ ಜೀವಿಗಳಿಂದ ಬೆಳೆ ನಾಶಕ್ಕೆ ಪರಿಹಾರ ನೀಡಬೇಕು. ಮತ್ತು ರೈತರ ಬೆಳೆಗಳಿಗೆ ಬೇಲಿ ಅಳವಡಿಸಿಕೊಳ್ಳಲು ಇಲಾಖೆಯಿಂದ ರಿಯಾಯಿತಿ ದರದಲ್ಲಿ ಅನುದಾನ ನೀಡಬೇಕು. ಹಾಗೂ ಹಂದಿಗಳ ಹಾವಳಿ, ಕೋತಿ, ಜಿಂಕೆಗಳ ಹಾವಳಿಯಿಂದ ಇಲಾಖೆಯವರು ನಿಯಂತ್ರಿಸಬೇಕೆAದು ರೈತರು ಒತ್ತಾಯಪಡಿಸಿದ್ದಾರೆ.
ಕೋಟ್
ಆನೆಗಳು ಬಾರದಂತೆ ಗಡಿ ಭಾಗದಲ್ಲಿ ತಂತಿ ಬೇಲಿಯನ್ನು ಅಳವಡಿಸಲಾಗಿದೆ. ರೈತರ ಬೆಳೆಗಳಿಗೆ ಸೋಲಾರ್ ತಂತಿ ಬೇಲಿಯನ್ನು ಅಳವಡಿಸಿಕೊಂಡರೆ ಅರಣ್ಯ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಧನಸಹಾಯ ಮಾಡಲಾಗುವುದು. ಅದಕ್ಕಾಗಿ ರೈತರು ಇಲಾಖೆಯಲ್ಲಿ ಅರ್ಜಿ ನೀಡಬೇಕು. ಬೆಳೆ ನಾಶ ಮಾಡಿದ್ದರೆ ಇಲಾಖೆಗೆ ಅರ್ಜಿ ನೀಡಿದರೆ ಅಧಿಕಾರಿಗಳು ಪರಿಶೀಲಿಸಿ ಅದಕ್ಕೂ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು. ಜಿಂಕೆಗಳು ಬೇಲಿಯನ್ನು ಹಾರಿಕೊಂಡು ಬರುತ್ತಿವೆ. ಅದಕ್ಕೆ ಯಾವ ಕ್ರಮ ಕೈಗೊಳ್ಳಬೇಕೆಂದು ಯೋಚಿಸಲಾಗುವುದು. ಅರಣ್ಯಕ್ಕೆ ಅಳವಡಿಸಿರುವ ತಂತಿ ಬೇಲಿ ಮತ್ತು ಚರಂಡಿ ಕಳಪೆಯಿಂದ ಕೂಡಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ಸರೀನಾ ಸಿಕ್ಕಲಿಂಗ್, ಅರಣ್ಯ ಸಂರಕ್ಷಣಾಧಿಕಾರಿ, ಕೋಲಾರ.
ಚಿತ್ರ ೨೬ ಕೆ.ಎಲ್.ಆರ್. ೦೨ : ಹಂದಿಗಳ ಹಾವಳಿಯಿಂದ ಜೋಳದ ಬೆಳೆ ನಾಶವಾಗಿರುವುದು.
ಚಿತ್ರ ೨೬ ಕೆ.ಎಲ್.ಆರ್. ೦೨ಎ : ಸರೀನಾ ಸಿಕ್ಕಲಿಂಗ್, ಅರಣ್ಯ ಸಂರಕ್ಷಣಾಧಿಕಾರಿ, ಕೋಲಾರ.