ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಶನಿವಾರ ಸಂಜೆ ಸುರಿದ ಭಾರೀ ಮಳೆಯಿಂದ ಕೋಲಾರ ನಗರದ ಅಂತರಗAಗೆ ರಸ್ತೆ ಜಲಾವೃತಗೊಂಡಿತ್ತು.
ನಗರದ ಬಹುತೇಕ ಬಡಾವಣೆಗಳಲ್ಲಿ ಚರಂಡಿ ಮತ್ತು ರಾಜಕಾಲುವೆಗಳ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಗಳ ಮೇಲೆ ಹರಿಯುವಂತೆ ಆಗಿದೆ. ಶನಿವಾರ ಸಂಜೆ ಸುರಿದ ಮಳೆಗೆ ಅಂತರಗAಗೆ ರಸ್ತೆಯ ಕುವೆಂಪು ಪಾರ್ಕ್ ಹಾಗೂ ಪತ್ರಕರ್ತರ ಭವನ ಮುಂಭಾಗ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಮಳೆ ನಿಂತರೂ ನೀರು ಹೋಗಲು ಕಾಲುವೆ ವ್ಯವಸ್ಥೆ ಇಲ್ಲದ ಕಾರಣ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರು ನೀರಿನಲ್ಲಿಯೇ ಓಡಾಡುವಂತಹ ಪರಿಸ್ಥತಿ ಉಂಟಾಗಿತ್ತು.
ಕೋಲಾರ ನಗರದ ಬಹುತೇಕ ರಸ್ತೆಗಳು ನೀರಿನಲ್ಲಿ ಮುಳುಗುವಂತೆ ಆಗಿತ್ತು. ಅನೇಕ ರಸ್ತೆಗಳ ಬದಿಗಳಲ್ಲಿ ಕಾಲುವೆಗಳು ಇಲ್ಲದೆ ಇರುವುದರಿಂದ ಮಳೆನೀರು ರಸ್ತೆಗಳ ಮೇಲೆಯೇ ಹರಿಯುವಂತೆ ಆಗಿದೆ. ರಸ್ತೆಗಳ ಅಕ್ಕಪಕ್ಕದಲ್ಲಿರುವ ತ್ಯಾಜ್ಯ ಮಳೆ ನೀರು ನಿಂತರೂ ತ್ಯಾಜ್ಯ ರಸ್ತೆಗಳಲ್ಲಿ ಉಳಿಯುವಂತಹ ಪರಿಸ್ಥಿತಿ ನಗರದಲ್ಲಿ ಉಂಟಾಗಿದೆ.
ಅಂತರಗAಗೆ ರಸ್ತೆಯ ಎರಡೂ ಬದಿಗಳಲ್ಲಿ ಕಾಲುವೆಗಳು ಇದ್ದರೂ ತ್ಯಾಜ್ಯ ತುಂಬಿದ್ದು, ನೀರು ಹರಿಯಲು ಅಡ್ಡಿಯಾಗಿರುವ ಕಾರಣ ರಸ್ತೆಯ ಎರಡೂ ಬದಿಗಳಲ್ಲಿ ನೀರು ನಿಂತು ಸಾರ್ವಜನಿಕರು ಓಡಾಡಲು ಅನಾನುಕೂಲ ಉಂಟಾಗಿದೆ. ಇದು ಇಂದು ನನ್ನೆಯ ಕಥೆಯಲ್ಲ ಸುಮಾರು ದಿನಗಳಿಂದ ಮಳೆನೀರು ರಸ್ತೆಗಳ ಮೇಲೆ ಹರಿಯುತ್ತಿದ್ದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳತ್ತಿಲ್ಲ ಎಂದು ನಗರವಾಸಿಗಳು ದೂರಿದ್ದಾರೆ.
ಜಿಲ್ಲೆಯಾದ್ಯಂತ ಕಳೆದ ೨ ದಿನಗಳಿಂದ ಮತ್ತೆ ಮಳೆಯ ಆರ್ಭಟ ಹೆಚ್ಚಾಗಿದ್ದು, ಮುಳಬಾಗಿಲು, ಶ್ರೀನಿವಾಸಪುರ, ಕೆ.ಜಿ.ಎಫ್. ಮಾಲೂರು ತಾಲ್ಲೂಕಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಕೆರೆಕುಂಟೆಗಳು ಭರ್ತಿಯಾಗತೊಡಗಿವೆ. ಜಿಲ್ಲೆಯಾದ್ಯಂತ ರಸ್ತೆಗಳ ಮೇಲೆ ನೀರು ಹರಿಯುವಂತೆ ಆಗಿದ್ದು, ಲೋಕೋಪಯೋಗಿ ಇಲಾಖೆಗೆ ಮಳೆಗಾಲದಲ್ಲಿ ಮಾತ್ರ ರಸ್ತೆಗಳು ಕಾಣಿಸುತ್ತವೆ. ಆಗ ಸಾರ್ವಜನಿಕರು ಅಧಿಕಾರಿಗಳಿಗೆ ಕಣ್ತೆರೆಸುವ ಕೆಲಸ ಮಾಡಿದಾಗ ಮಾತ್ರ ಜ್ಞಾನೋದಯವಾಗುತ್ತದೆ. ಮಳೆ ಹಿಂದಕ್ಕೆ ಹೋದ ಸಂದರ್ಭದಲ್ಲಿ ತರಾತುರಿಯಲ್ಲಿ ತೇಪೆ ಕಾರ್ಯ ಮಾಡುತ್ತಾರೆ. ಅದು ಕೆಲವೇ ದಿನಗಳಲ್ಲಿ ಕಿತ್ತುಹೋಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಕೋಟ್
ಅಂತರಗAಗೆ ರಸ್ತೆಯ ಎರಡೂ ಬದಿಗಳ ಚರಂಡಿಗಳನ್ನು ಸೋಮವಾರ ಸ್ವಚ್ಛಗೊಳಿಸಲಾಗುವುದು. ಅದರಲ್ಲಿ ತುಂಬಿರುವ ತ್ಯಾಜ್ಯವನ್ನು ಹೊರತೆಗೆಯಲಾಗುವುದು. ಹಾಗೂ ಬಡಾವಣೆಗಳಲ್ಲಿ ಮನೆ ನಿರ್ಮಾಣ ಸಂದರ್ಭಗಳಲ್ಲಿ ಚರಂಡಿಗಳನ್ನು ಕಲ್ಲುಚಪ್ಪಡಿಗಳ ಮೂಲಕ ಮುಚ್ಚಿದ್ದಾರೆ. ಚರಂಡಿಯಲ್ಲಿ ತ್ಯಾಜ್ಯ ತೆಗೆಯಲು ಆಗದೆ ರಸ್ತೆಗಳ ಮೇಲೆ ನೀರು ಹರಿಯುತ್ತಿವೆ. ಯಾರ ಮುಲಾಜಿಗೂ ಒಳಪಡದೆ ಚರಂಡಿಗಳ ಮೇಲೆ ಮುಚ್ಚಿರುವ ಕಲ್ಲುಚಪ್ಪಡಿಗಳನ್ನು ತೆರವುಗೊಳಿಸಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಾಗುವುದು.
-ನವೀನ್‌ಚಂದ್ರ, ಪೌರಾಯುಕ್ತರು, ಕೋಲಾರ.
ಚಿತ್ರ ೧೯ ಕೆ.ಎಲ್.ಆರ್. ೦೪ : ನಗರದ ಅಂತರಗAಗೆ ರಸ್ತೆಯಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ನೀರು ನಿಂತಿರುವುದು.
ಚಿತ್ರ ೧೯ ಕೆ.ಎಲ್.ಆರ್. ೦೪ಎ : ನವೀನ್‌ಚಂದ್ರ, ಪೌರಾಯುಕ್ತರು, ಕೋಲಾರ. ರವರ ಭಾವಚಿತ್ರ