ನ್ಯೂಸ್

ಜಿಲ್ಲೆಯಲ್ಲಿ ಮತ್ತೆ ಸದ್ದು ಮಾಡುತ್ತಿರುವ ಅರಣ್ಯ ತೆರವು ಕಾರ್ಯಾಚರಣೆ / ನೋಟಿಸ್ ನೀಡಿರುವ ರೈತರಲ್ಲಿ ಆತಂಕ / ಅರಣ್ಯ ಇಲಾಖೆಯ ವಿರುದ್ಧ ರೈತರು ರೊಚ್ಚಿಗೇಳಲು ತೀರ್ಮಾನ!

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಲ್ಲಿ ೩ ತಿಂಗಳ ನಂತರ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಕಳೆದ ೦೩ ದಿನಗಳಿಂದ ಸದ್ದು ಮಾಡುತ್ತಿದ್ದು, ಈಗಾಗಲೇ ತೆರವು ಮಾಡುವಂತೆ ನೋಟಿಸ್ ನೀಡಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ೩ ತಿಂಗಳಿAದ ಜಿಲ್ಲೆಯಲ್ಲಿ ೩ ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಯವರು ತೆರವು ಮಾಡಿ ಸ್ವಾಧೀನಪಡಿಸಿಕೊಂಡಿದ್ದರು. ಈ ಸಂಬAಧ ರೈತರು ಮತ್ತು ಅರಣ್ಯ ಇಲಾಖೆ ಮಧ್ಯೆ ಘರ್ಷಣೆಗಳು ನಡೆದಿದ್ದವು. ರೈತ ಹೋರಾಟ ಸಮಿತಿ ಅರಣ್ಯ ಇಲಾಖೆಯವರಿಂದ ಪ್ರತಿಭಟನೆ ನಡೆಸಿ ಏಕಾಏಕಿ ೩೦ ರಿಂದ ೪೦ ವರ್ಷಗಳ ಕಾಲ ಸ್ವಾಧೀನದಲ್ಲಿದ್ದ ರೈತರನ್ನು ಅರಣ್ಯ ಇಲಾಖೆಯವರು ಒಕ್ಕೆಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಹಾಗೂ ರೈತರ ತರಕಾರಿ ಬೆಳೆಗಳು, ಮಾವಿನ ಫಸಲು ನಾಶ ಮಾಡಲು ಮುಂದಾಗಿದ್ದಾರೆ. ರೈತ ಸಂಘಟನೆಗಳು ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆಗಳನ್ನು ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯೆ ಪ್ರವೇಶ ಮಾಡಿ, ಅರಣ್ಯ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೇ ನಡೆಸಿ ತೆರವು ಕಾರ್ಯಚರಣೆ ಮುಂದುವರೆಸಬೇಕೆAದು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರಿಗೆ ಸೂಚನೆ ನೀಡಿದರು. ಕೆಲವು ದಿನಗಳ ಕಾಲ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಅರಣ್ಯ ಇಲಾಖೆಯವರು ನಿಲ್ಲಿಸಿದ್ದರು.

ಈ ಮಧ್ಯೆ ಡಿ.ಎಫ್.ಓ. ಆಗಿದ್ದ ಏಡುಕೊಂಡಲ ರವರು ವರ್ಗಾವಣೆಯಾದರು. ಸ್ಥಳಕ್ಕೆ ಅವರ ಜಾಗಕ್ಕೆ ಸರೀನ ಸಿಕ್ಕಲಿಗರ್ ರವರು ಆಗಮಿಸಿದರು. ಜಿನಗಲಕುಂಟೆ ಅರಣ್ಯ ಒತ್ತುವರಿ ವಿಷಯದಲ್ಲಿ ಜಂಟಿ ಸರ್ವೇ ಕಾರ್ಯ ನಡೆಸುವ ಸಲುವಾಗಿ ಕೆಲವು ದಿನಗಳ ಕಾಲ ಮೌನವಾಗಿದ್ದ ಅರಣ್ಯ ಇಲಾಖೆಯವರು ಜಂಟಿ ಸರ್ವೇ ನಡೆಸಿ ವರದಿ ಹೈಕೋರ್ಟ್ಗೆ ಸಲ್ಲಿಸಿದ ನಂತರ ಕಳೆದ ಮೂರು ದಿನಗಳಿಂದ ಅರಟಿ ಅರಣ್ಯ ಒತ್ತುವರಿ ಕಾರ್ಯದಲ್ಲಿ ತೊಡಗಿದ್ದಾರೆ.

ಇದಾದ ನಂತರ ಕೋಲಾರ ತಾಲ್ಲೂಕಿನ ಮುದುವಾಡಿ, ಹೋಳೂರು, ಮುದುವಾಡಿ ಹೊಸಹಳ್ಳಿ ಸೇರಿದಂತೆ ಸುತ್ತುಮುತ್ತಲಿನ ಅರಣ್ಯ ಪ್ರದೇಶಕ್ಕೆ ಸೇರ್ಪಡೆಗೊಳ್ಳುವ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಸದರಿ ಜಮೀನಿನ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಅರಟಿ ಅರಣ್ಯ ಒತ್ತುವರಿ ತೆರವುಗೊಳಿಸುತ್ತಿರುವ ಸುದ್ದಿ ಹರಡುತ್ತಿದ್ದಂತೆ ನೋಟೀಸ್ ಜಾರಿಗೊಳಿಸಿದ ರೈತರಲ್ಲಿ ಆತಂಕ ಉಂಟಾಗಿದೆ. ಕೋಳಿ ಫಾರಂ ಸೇರಿದಂತೆ ಮಾವು ಹಾಗೂ ಇತರೆ ತರಕಾರಿ ಬೆಳೆಗಳನ್ನು ಬೆಳೆದಿರುವ ರೈತರಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಕೆಲವು ರೈತರು ನೋಟಿಸ್‌ಗಳನ್ನು ಪಡೆದು ಹೈಕೋರ್ಟ್ನಲ್ಲಿ ತಡೆಯಾಜ್ಞೆಯನ್ನು ತಂದಿದ್ದಾರೆ.

ಕೋಟ್

೬೪ಎ ಪ್ರಕಾರ ಅರಣ್ಯ ಇಲಾಖೆಗೆ ಒಳಪಟ್ಟಿರುವ ಜಮೀನಿಗೆ ದಾಖಲೆಗಳನ್ನು ಕಂದಾಯ ಇಲಾಖೆಯಿಂದ ಪಡೆದಿರುವುದು ಅದು ತಪ್ಪು. ೧೯೩೦ರಲ್ಲಿ ಅರಣ್ಯ ಇಲಾಖೆಗೆ ನೋಟಿಫಿಕೇಷನ್ ಆಗಿದ್ದು, ನಂತರ ಕಂದಾಯ ಇಲಾಖೆಯವರು ಮಂಜೂರು ಮಾಡಿರುವುದು ತಪ್ಪಾಗಿದೆ. ನಮಗೆ ನೋಟಿಫಿಕೇಷನ್ ಆಗಿರುವ ದಿನಾಂಕದಿAದ ಒಳಗಡೆ ಮಂಜೂರಾಗಿದ್ದರೆ ಅಂತಹ ಜಮೀನನ್ನು ಬಿಡುತ್ತೇವೆ. ಮೂರು ಬಾರಿ ರೈತರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ನಮ್ಮ ವ್ಯಾಪ್ತಿಗೆ ಒಳಪಡುವ ಜಮೀನನ್ನು ತೆರವು ಮಾಡುತ್ತಿದ್ದೇವೆ. ರೈತರಿಗಿಂತ ರಿಯಲ್ ಎಸ್ಟೇಟ್ ಮಾಡುವವರಿಗೆ ತಕರಾರಾಗಿದೆ. ಅವರೇ ಕೆಲವರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

-ಸರೀನ ಸಿಕ್ಕಲಿಗರ್, ಡಿಎಫ್‌ಓ, ಕೋಲಾರ.

ಕೋಟ್

೩೦ ಮತ್ತು ೪೦ ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ದಾಖಲೆಗಳನ್ನು ಪಡೆದು ರೈತರ ಸ್ವಾಧೀನದಲ್ಲಿದ್ದು, ಅಂತವರನ್ನು ಇಲಾಖೆಯವರು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ನಕಲಿ ದಾಖಲೆಗಳನ್ನು ಪಡೆದು ಸ್ವಾಧೀನದಲ್ಲಿ ಇರುವ ರೈತರನ್ನು ತೆರವುಗೊಳಿಸಲಿ. ಕೆಲವರಿಗೆ ನೋಟಿಸ್ ನೀಡಿ ನ್ಯಾಯಾಲಕ್ಕೆ ಹೋಗಲು ಅವಕಾಶ ಇಲ್ಲದ ರೀತಿಯಲ್ಲಿ ತೆರವು ಮಾಡಲು ಮುಂದಾಗುತ್ತಿದ್ದಾರೆ. ಇನ್ನು ಕೆಲವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಲ್ಲಿ ತಡೆಯಾಜ್ಞೆ ತಂದಿದ್ದರು, ಕಾನೂನಿಗೆ ಗೌರವ ನೀಡದೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಇದರಿಂದ ರೈತರು ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ರೈತರು ರೊಚ್ಚಿಗೇಳುವ ದಿನಗಳು ದೂರವಿಲ್ಲ. ಸರ್ಕಾರವು ರೈತರ ನೆರವಿಗೆ ಬರುತ್ತಿಲ್ಲ. ಸರ್ಕಾರ ಮತ್ತು ಇಲಾಖೆಯ ವಿರುದ್ಧ ತಿರುಗಿಬೀಳಬೇಕಾಗುತ್ತದೆ.

-ಪಿ.ಆರ್.ಸೂರ್ಯನಾರಾಯಣ, ರೈತ ಮುಖಂಡ.

ಚಿತ್ರ ೨೮ ಕೆ.ಎಲ್.ಆರ್. ೦೨ : ಸರೀನ ಸಿಕ್ಕಲಿಗರ್, ಡಿಎಫ್‌ಓ, ಕೋಲಾರ. ರವರ ಭಾವಚಿತ್ರ

ಚಿತ್ರ ೨೮ ಕೆ.ಎಲ್.ಆರ್. ೦೨ಎ : ಪಿ.ಆರ್.ಸೂರ್ಯನಾರಾಯಣ, ರೈತ ಮುಖಂಡ. ರವರ ಭಾವಚಿತ್ರ

ಚಿತ್ರ ೨೮ ಕೆ.ಎಲ್.ಆರ್. ೦೨ಬಿ : ಅರಣ್ಯ ಇಲಾಖೆಯವರು ಒತ್ತುವರಿ ತೆರವುಗೊಳಿಸುತ್ತಿರುವ ಸಂಗ್ರಹ ಚಿತ್ರ