ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆಯಾದ್ಯಂತ ಭಾನುವಾರ ಬೆಳ್ಳಿಗ್ಗೆಯಿಂದಲೂ ಜಡಿಮಳೆ ಮುಂದುವರೆದಿದೆ. ತಿಂಗಳಿಗೆ ೨ ಅಥವಾ ೩ ಬಾರಿ ಜಡಿಮಳೆ ಕಾಣಿಸಿಕೊಳ್ಳುತ್ತಿದ್ದು, ರೈತರು ಬೆಳೆದ ಬೆಳೆಗಳ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀಳುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.
ಅವಶ್ಯಕತೆ ಇಲ್ಲದ ಸಮಯದಲ್ಲಿ ತಿಂಗಳಿನಲ್ಲಿ ಎರಡು ಮೂರು ಬಾರಿ ಎರಡು ದಿನ ಅಥವಾ ಮೂರು ದಿನ ಕಾಣಿಸಿಕೊಳ್ಳು ಜಡಿಮಳೆಯಿಂದ ರೈತರು ಲಕ್ಷಾಂತರ ರೂ.ಗಳ ಬಂಡವಾಳ ಹಾಕಿ ಬೆಳೆದಿರುವ ಫಸಲು ಸೇರಿದಂತೆ ವಾರ್ಷಿಕ ಬೆಳೆಗಳಾದ ರಾಗಿ ಅವರೆ ಮುಂತಾದ ಮಳೆಯಾಶ್ರಿತ ಬೆಳೆಗಳ ಫಸಲು ರೈತರಿಗೆ ಸಿಗದಂತೆ ಆಗುತ್ತಿದೆ.
ಈಗಾಗಲೇ ರಾಗಿ ತೆನೆಯನ್ನು ಕಟಾವು ಮಾಡಿ, ಕೆಲವರು ತೆನೆಯನ್ನು ಮನೆ ತುಂಬಿಸಿಕೊAಡರೆ ಮತ್ತು ಕೆಲವು ರೈತರು ರಾಗಿ ತೆನೆಯನ್ನು ಯಂತ್ರಗಳಿಗೆ ನೀಡಿ ರಾಗಿ ಮಾಡಿಕೊಂಡಿದ್ದಾರೆ. ರಾಗಿ ಪೈರನ್ನು ಕಟಾವು ಮಾಡಿ ಹುಲ್ಲು ಮಾಡಿಕೊಳ್ಳುವ ಸಂದರ್ಭದಲ್ಲಿ ಜಡಿಮಳೆ ರೈತರನ್ನು ಕಾಡುತ್ತಿದೆ.
ವಾರ್ಷಿಕ ಬೆಳೆಗಳಲ್ಲಿ ಅವರೇಕಾಯಿ ಫಸಲು ಒಂದಾಗಿದ್ದು, ಅವರೇಕಾಯಿ ಬೆಲೆ ಉತ್ತಮವಾಗಿದ್ದು, ರೈತರ ಜೇಬಿಗೆ ಒಂದಷ್ಟು ಹಣ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಜಡಿಮಳೆ ಬಂದಿರುವುದರಿAದ ಅವರೇಕಾಯಿ ಮೇಲಿನ ಸೊಗಡು ಮಾಯವಾಗುತ್ತದೆ. ಇದರಿಂದ ಬೆಲೆ ಕುಸಿಯುವ ಭೀತಿಯು ರೈತರನ್ನು ಕಾಡುತ್ತಿದೆ.
ತರಕಾರಿ ಬೆಲೆಗಳಿಗೂ ಜಡಿಮಳೆ ಎಫೆಕ್ಟ್ ಆಗಲಿದ್ದು, ಶೀತಗಾಳಿ ಮತ್ತು ಮಳೆಗೆ ತರಕಾರಿ ಬೆಳೆಗಳಿಗೆ ರೋಗ ಮತ್ತು ಕೀಟಬಾಧೆಗಳು ಹೆಚ್ಚಾಗುತ್ತದೆ ಎಂದು ರೈತರು ಆಂತಕ ಪಡುತ್ತಿದ್ದಾರೆ. ಇದಕ್ಕೆ ಔಷಧಿ ಸಿಂಪಡಣೆ ಮಾಡಬೇಕಾದರೆ ಸಾವಿರಾರು ರೂ.ಗಳು ಖರ್ಚಾಗುತ್ತವೆ. ಬಿಸಿಲು ಇಲ್ಲದಿದ್ದಲ್ಲಿ ಔಷಧಿ ಸಿಂಪಡಣೆ ಮಾಡಿರುವ ರೋಗ ನಿಯಂತ್ರಣಕ್ಕೆ ಬರುವುದಿಲ್ಲ. ಟೊಮೆಟೋ, ಆಲೂಗಡ್ಡೆ, ಕ್ಯಾಪ್ಸಿಕಂ ಮುಂತಾದ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವAತಾಗಿದೆ.
ಮುಂಜಾನೆಯಿAದಲೇ ಜಡಿಮಳೆ :
ಭಾನುವಾರ ಮುಂಜಾನೆಯಿAದಲೇ ಜಡಿಮಳೆ ಬೀಳತೊಡಗಿತ್ತು. ಬೆಳ್ಳಗ್ಗೆ ಇಂದಲೇ ಮನೆಯಿಂದ ಹೊರ ಬರದ ಪರಿಸ್ಥಿತಿ ಉಂಟಾಯಿತು. ಸಂಜೆಯ ತನಕವೂ ಜಡಿಮಳೆ ಮುಂದುವರೆದಿತ್ತು. ಭಾನುವಾರ ರಜಾ ದಿನವಾದ ಕಾರಣ ಜನ ಮನೆಗಳಿಂದ ಹೊರ ಬರದೆ ಮನೆಗಳಲ್ಲಿಯೇ ಉಳಿಯುವಂತಾಯಿತು. ಜಡಿ ಮಳೆ ಮತ್ತು ಭಾನುವಾರ ಎರಡೂ ಆದ ಕಾರಣ ನಗರದ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಜಾಲಿಟ್ರಿಪ್‌ಗೆ ಮಳೆ ಅಡ್ಡಿ :
ವಾರದ ರಜೆ ದಿನವನ್ನು ಕಳೆಯಲು ಕೋಲಾರ ಜಿಲ್ಲೆಯ ಅಂತರಗAಗೆ ಬೆಟ್ಟ, ನಗರದ ಪಾರ್ಕುಗಳು, ಕೋಟಿಲಿಂಗೇಶ್ವರ, ಕುರುಡುಮಲೆ ಮುಂತಾದ ಪ್ರವಾಸಿ ತಾಣಗಳಿಗೆ ತೆರಳಲು ಬಂದ ಹೊರಗಿನ ನಿವಾಸಿಗಳಿಗೆ ಜಡಿ ಮಳೆ ಅಡ್ಡಿಯಾಯಿತು.
ಕೋಟ್
ಹವಾಮಾನ ವೈಪ್ಯರೀತ್ಯದಿಂದಾಗಿ ಮಳೆಗಾಲ ಮುಗಿದು ಬೇಸಿಗೆ ಸಮೀಪಿಸುತ್ತಿದ್ದರೂ ಆಗಾಗ ಜಡಿಮಳೆ ಬರುತ್ತಿದೆ. ಇದರಿಂದ ರೈತರು ಸಾಲಸೋಲ ಮಾಡಿ ಬೆಳೆದ ತರಕಾರಿ ಫಸಲಿನ ಮೇಲೆ ಪರಿಣಾಮ ಉಂಟಾಗುತ್ತಿದೆ. ಮಳೆ ಅವಶ್ಯಕತೆ ಇಲ್ಲದ ಸಂದರ್ಭದಲ್ಲಿ ಬರುವ ಮಳೆಯಿಂದ ಪ್ರಯೋಜನೆ ಇಲ್ಲದಂತಾಗಿದೆ. ವಾರಪೂರ್ತಿ ದುಡಿದು ಭಾನುವಾರ ಸಂಡೆ ದಿನವೆಂದು ದೇವಸ್ಥಾನ, ಪಾರ್ಕ್ ಮುಂತಾದ ಯಾತ್ರಾ ಸ್ಥಳಗಳಿಗೆ ಹೋಗುವವರಿಗೂ ಬೆಳ್ಳಿಗ್ಗಿನಿಂದ ಸುರಿಯುತ್ತಿರುವ ಜಡಿಮಳೆ ಮತ್ತು ಶೀತಗಾಳಿ ಮನೆಗಳಿಂದ ಹೊರ ಬರದಂತೆ ಮಾಡಿದೆ.
-ಮುನಿವೆಂಕಟೇಶ್, ಹಿರಿಯ ನಾಗರೀಕ, ಕೋಲಾರ.
ಚಿತ್ರ ೧೯ ಕೆ.ಎಲ್.ಆರ್. ೦೧ : ಜಡಿಮಳೆಯಿಂದ ಅಂತರಗAಗೆಗೆ ಹೋಗುವ ಪ್ರವಾಸಿಗಳಿಗೂ ಜಡಿಮಳೆಯಲ್ಲಿ ಕೊಡೆಗಳನ್ನು ಹಿಡಿದು ತೆರಳುತ್ತಿರುವುದು.