ನ್ಯೂಸ್

ಜಿಲ್ಲೆಯಲ್ಲಿ ಕಾಂಗ್ರೇಸ್ ಮಹಿಳಾ ಘಟಕವನ್ನು ಬಲಿಷ್ಠಗೊಳಿಸಬೇಕು / ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕು / ಸೌಮ್ಯಾರೆಡ್ಡಿ ಮಹಿಳಾ ಕುಂದುಕೊರತೆ ಸಭೆಯಲ್ಲಿ ಅಸಮಾಧಾನವನ್ನು ಹೊರ ಹಾಕಿದ ಜಿಲ್ಲಾಧ್ಯಕ್ಷ ಲಕ್ಷಿö್ಮÃನಾರಾಯಣ / ನೇಮಕಾವಾಸ್ತೆ ಅಧ್ಯಕ್ಷ ನಾನು

ವಿಜಯವಾಣಿ ಸುದ್ದಿಜಾಲ ಕೋಲಾರ

ಕಾಂಗ್ರೇಸ್ ಪಕ್ಷ ಒಂದು ಕುಟುಂಬ ಇದ್ದಂತೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಅವುಗಳನ್ನು ಬದಿಗೊತ್ತಿ ಪಕ್ಷ ಸಂಘಟನೆ ಮಾಡಬೇಕು. ಕೋಲಾರ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷ ಬಲಿಷ್ಠವಾಗಿದೆ. ಸಿದ್ಧರಾಮಯ್ಯ ನವರನ್ನು ಈ ಕ್ಷೇತ್ರದಿಂದ ಗೆಲ್ಲಿಸಿಕೊಳ್ಳಲು ಇಲ್ಲಿನ ಕಾರ್ಯಕರ್ತರು ಆಹ್ವಾನ ನೀಡಿದ್ದರು ಎಂದು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾರೆಡ್ಡಿ ತಿಳಿಸಿದರು.

ಮಂಗಳವಾರ ನಗರದ ಕಾಂಗ್ರೇಸ್ ಕಛೇರಿಯಲ್ಲಿ ಮಹಿಳಾ ಘಟಕ ಸಂಘಟನೆಗಾಗಿ ಹಾಗೂ ಮಹಿಳೆಯರ ಅಭಿಪ್ರಾಯಗಳನ್ನು ಸಂಗ್ರಹಿಸಲು ಆಗಮಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೇಸ್ ಬಲಿಷ್ಠವಾಗಿರುವಂತೆ ಮಹಿಳಾ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು. ಹಾಗೂ ನೋಂದಣಿ ಕಾರ್ಯ ಚುರುಕುಗೊಳಿಸಬೇಕು ಎಂದರು.

ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಪಂಚ ಗ್ಯಾರಂಟಿಗಳನ್ನು ನೀಡಿದೆ. ಇದರ ಉದ್ದೇಶ ಮಹಿಳೆಯವರು ಆರ್ಥಿಕವಾಗಿ ಮುಂದೆ ಬರಬೇಕು ಎಂಬುದು ಸರ್ಕಾರ ಮತ್ತು ಪಕ್ಷದ ಉದ್ದೇಶವಾಗಿದೆ. ಕೋಲಾರ ಜಿಲ್ಲೆಯಲ್ಲಿ ೫೦ ಸಾವಿರದಿಂದ ೭೦ ಸಾವಿರ ಮಹಿಳೆಯರಿಗೆ ಪಂಚ ಯೋಜನೆಗಳು ತಲುಪಿವೆ. ಬೂತ್ ಮಟ್ಟದಿಂದ ಮಹಿಳಾ ಸಂಘಟನೆಗಳು ಬಲಿಷ್ಠಗೊಳಿಸಬೇಕಾಗಿದೆ. ಕೋಲಾರ ಜಿಲ್ಲೆಯಲ್ಲಿ ಬೃಹತ್ ಮಹಿಳಾ ಸಮಾವೇಶವನ್ನು ಆಯೋಜನೆ ಮಾಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ಜನರಿಗೆ ಸರ್ಕಾರ ನೀಡುವ ಪಂಚ ಯೋಜನೆಗಳ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕಾಗಿದೆ ಎಂದರು.

ಜನರಿಕ್ ಔಷಧಿ ಮಳಿಗೆಗಳು ಅವಶ್ಯಕತೆ ಇರುವ ಕಡೆ ಬಿಟ್ಟು ಉಳಿದ ಕಡೆ ತೆರವು ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಇರುವ ಔಷಧಿ ಮಳಿಗೆಗಳಲ್ಲಿ ಎಲ್ಲವೂ ಉಚಿತವಾಗಿ ನೀಡುವಾಗ ಜನರಿಕ್ ಔಷಧಿ ಮಳಿಗೆಗಳು ಅವಶ್ಯಕತೆ ಇರುವುದಿಲ್ಲ. ಅವಶ್ಯಕತೆ ಇರುವ ಕಡೆ ಮಳಿಗೆಗಳನ್ನು ಬಂದ್ ಮಾಡಿಲ್ಲ ಎಂದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರತ್ನಮ್ಮ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯ ಕಾಂಗ್ರೇಸ್ ಶಾಸಕರ ಬೆಂಬಲ ಅವಶ್ಯಕತೆ ಇದೆ ಎಂದರು.

ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣ ಮಾತನಾಡಿ, ಜಿಲ್ಲೆಯ ಕೆಲವು ಕಾಂಗ್ರೇಸ್ ಶಾಸಕರು ಕಾಂಗ್ರೇಸ್ ಕಛೇರಿಯ ಕಡೆ ಮತ್ತು ಕಾಂಗ್ರೇಸ್ ಕಛೇರಿಯಲ್ಲಿ ಆಚರಣೆ ಮಾಡುವ ಕಾರ್ಯಕ್ರಮಗಳಿಗೆ ಆಗಮಿಸುತ್ತಿಲ್ಲ. ಕಾಂಗ್ರೇಸ್ ಕಛೇರಿ ಇದೆ ಎಂಬುದನ್ನು ಮರೆತಿದ್ದಾರೆ. ಮಹಿಳಾ ಸಮಾವೇಶ ಮಾಡಬೇಕಾದರೆ ಎಲ್ಲಾ ಶಾಸಕರ ಬೆಂಬಲದ ಅಗತ್ಯವಿದೆ ಎಂದರು.

ಜಿಲ್ಲಾಧ್ಯಕ್ಷರಾಗಿ ಅಸಹಾಯಕನಾಗಿದ್ದೇನೆ :

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾರೆಡ್ಡಿಯವರ ಸಮ್ಮುಖದಲ್ಲಿ ಜಿಲ್ಲಾಧ್ಯಕ್ಷ ಲಕ್ಷಿö್ಮÃನಾರಾಯಣ ತಮ್ಮದೇ ಪಕ್ಷದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಾನು ಅಧ್ಯಕ್ಷನಾಗಿದ್ದರು ನನ್ನನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲ. ನಾನು ಅಸಹಾಯಕನಾಗಿದ್ದೇನೆ ಎಂಬ ಅಸಮಾಧಾನವನ್ನು ಹೊರಹಾಕಿದರು.

ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಾಗ ಹಾಗೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ನನ್ನನ್ನು ಕಡೆಗಣಿಸಿದ್ದಾರೆ. ಕೋಲಾರ ಶಾಸಕರು ಕಾಂಗ್ರೇಸ್ ಕಛೇರಿ ಕಡೆ ತಿರುಗಿ ನೋಡುತ್ತಿಲ್ಲ. ಜಿಲ್ಲಾ ಕಾಂಗ್ರೇಸ್ ಗೊಂದಲದ ಗೂಡಾಗಿದೆ. ಕಾರ್ಯಕರ್ತರ ಮತ್ತು ಮುಖಂಡರ ಕಷ್ಟಗಳನ್ನು ಆಲಿಸುವವರು ಇಲ್ಲದಂತೆ ಆಗಿದೆ. ನಾನು ನೇಮಕಾವಾಸ್ತೆ ಅಧ್ಯಕ್ಷನಂತೆ ಇದ್ದೀನಿ. ಹೈಕಮ್ಯಾಂಡ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಕ್ಸ್

ಕೋಲಾರದಲ್ಲಿ ಹಾಗೂ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೇಸನ್ನು ಬೆಂಬಲಿಸಿದ್ದಾರೆ. ಸರ್ಕಾರ ನೇಮಕ ಮಾಡುವ ನಾಮಿನಿಗಳಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಬಾರದು. ಹಾಗೂ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದರೆ ಅಲ್ಪಸಂಖ್ಯಾತರಿಗೆ ಮಾಹಿತಿ ನೀಡುತ್ತಿಲ್ಲ. ಈ ರೀತಿ ಆಗಬಾರದು ಎಂದು ರಾಜ್ಯ ಅಲ್ಪಸಂಖ್ಯಾತರ ಉಪಾಧ್ಯಕ್ಷ ಮೊಹ್ಮದ್ ಇಕ್ಬಾಲ್ ಸೌಮ್ಯಾರೆಡ್ಡಿಯವರ ಬಳಿ ದೂರಿದರು.

ಬಾಕ್ಸ್

ಕಾಂಗ್ರೇಸ್ ಮುಖಂಡ ಲಾಲ್‌ಬಹದ್ದೂರ್ ಶಾಸ್ತಿç ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಕಾಂಗ್ರೇಸ್ ಎರಡು ಗುಂಪುಗಳಾಗಿವೆ. ಈ ಸಭೆಗೆ ಆಗಮಿಸಿರುವ ಕೆ.ಹೆಚ್.ಮುನಿಯಪ್ಪನವರ ಬೆಂಬಲಿಗರಾಗಿದ್ದಾರೆ. ಶಾಸಕರ ಗುಂಪಿನವರು ಯಾರೂ ಬಂದಿಲ್ಲ. ಕಾಂಗ್ರೇಸ್ ಕಛೇರಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕೆ.ಹೆಚ್.ಮುನಿಯಪ್ಪನವರ ಬೆಂಗಲಿಗರು ಮಾತ್ರ ಗುರ್ತಿಸಿಕೊಳ್ಳುವಂತೆ ಆಗಿದೆ. ಇದನ್ನು ಹೈಕಮ್ಯಾಂಡ್ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೇಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಮುಖಂಡರಾದ ಎಲ್.ಎ.ಮಂಜುನಾಥ್, ಮಾಲೂರು ಆಶ್ವಥ್‌ರೆಡ್ಡಿ, ವೆಂಕಟಪತಿಯಪ್ಪ, ಸೇರಿದಂತೆ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ ೧೦ ಕೆ.ಎಲ್.ಆರ್. ೦೫ : ನಗರದ ಕಾಂಗ್ರೇಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಮಹಿಳೆಯರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾರೆಡ್ಡಿ, ಜಿಲ್ಲಾಧ್ಯಕ್ಷೆ ರತ್ನಮ್ಮ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣ ಮುಂತಾದವರು ಇದ್ದರು.