ನ್ಯೂಸ್

ಜಿಲ್ಲೆಯಲ್ಲಿ ಎರಡು ತಿಂಗಳ ನಂತರ ಕಾಣಿಸಿಕೊಂಡ ಮಳೆ / ಜೀವ ಉಳಿಸಿಕೊಂಡ ಒಣಗಿದ ಮಳೆಯಾಶ್ರಿತ ಬೆಳೆಗಳು / ಶೇ.೫೦ ರಷ್ಟು ಬೆಳೆಯಾಗುವ ನಿರೀಕ್ಷೆ!

ವಿಜಯವಾಣಿ ಸುದ್ದಿಜಾಲ ಕೋಲಾರ
ಎರಡು ತಿಂಗಳ ನಂತರ ಜಿಲ್ಲೆಯಲ್ಲಿ ಮಳೆ ಕಾಣಿಸಿಕೊಂಡಿದ್ದು, ರಾಗಿ, ನೆಲಗಡಲೆ, ತೊಗರಿ ಮುಂತಾದ ಮಳೆಯಾಶ್ರಿತ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿದ್ದವು. ಬುಧವಾರ ಜಿಲ್ಲೆಯಲ್ಲಿ ಅಲ್ಲಲ್ಲಿ ಸ್ವಲ್ಪ ಮಳೆ ಕಾಣಿಸಿಕೊಂಡ ಕಾರಣ ಬೆಳೆಗಳು ಜೀವ ಉಳಿಸಿಕೊಂಡAತಾಗಿದ್ದು, ಪೂರ್ಣ ಪ್ರಮಾಣದ ಬೆಳೆ ರೈತರ ಕೈ ಸೇರುವುದು ಕಷ್ಟದ ಪರಿಸ್ಥಿತಿಯಾಗಿದೆ.

ಕಳೆದ ಎರಡು ತಿಂಗಳಿನಿAದ ಜಿಲ್ಲೆಯಲ್ಲಿ ಮಳೆ ಇಲ್ಲದ ಕಾರಣ ರಾಗಿ, ನೆಲಗಡಲೆ, ತೊಗರಿ, ಹಲಸಂದೆ ಮುಂತಾದ ಬೆಳೆಗಳು ಹೊಲಗಳಲ್ಲಿ ಒಣಗಿ ಹೋಗಿದ್ದವು. ಮಳೆಗಾಗಿ ರೈತರು ಪ್ರತಿದಿನ ಪ್ರಾರ್ಥನೆ ಮಾಡುವಂತಾಗಿತ್ತು. ಈಗಾಗಲೇ ಮಳೆಯಾಗಿದ್ದರು ರಾಗಿ ಬೆಳೆ ತೆನೆ ಕಟ್ಟುವ ಹಂತಕ್ಕೆ ಬರುತ್ತಿದ್ದವು. ನೆಲಗಡಲೆ ಬೀಜ ಕಟ್ಟುತ್ತಿದ್ದವು. ತೊಗರಿ ಹೂವು ಬಂದು ಕಾಯಿ ಕಚ್ಚುತ್ತಿದ್ದವು. ಮಳೆಯಿಲ್ಲದ ಕಾರಣ ಎಲ್ಲವೂ ನಾಶವಾಗುವಂತಹ ಹಂತಕ್ಕೆ ತಲುಪಿದ್ದವು.

ರಾಗಿ ಪೈರು ಈಗಾಗಲೇ ತೆನೆ ಕಟ್ಟಬೇಕಾಗಿತ್ತು. ಈಗ ಪೈರು ಬೆಳೆಯುವ ಹಂತದಲ್ಲಿ ಇದ್ದು, ಮುಂಗಾರು ಪ್ರಾರಂಭದಲ್ಲಿ ಬಿತ್ತನೆ ಮಾಡಿರುವ ಹೊಲಗಳಲ್ಲಿ ರಾಗಿ ಬೆಳೆ ಮೊಣಕಾಲುದ್ದಕ್ಕೆ ಬಂದು ತೆನೆ ಕಟ್ಟುವ ಹಂತಕ್ಕೆ ತಲುಪಿವೆ. ಹಿನ್ನಡೆ ಬಿತ್ತನೆಯಾಗಿರುವ ರಾಗಿ ಪೈರು ಬೆಳೆಯುವ ಹಂತದಲ್ಲಿಯೇ ಇದ್ದು, ಮಳೆ ಇಲ್ಲದ ಕಾರಣ ಹೊಲಗಳಲ್ಲಿಯೇ ಒಣಗಿ ಬೆಂಡಾಗಿ ಹೋಗಿದ್ದವು.

ಬುಧವಾರ ಸಂಜೆ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ ಕಾಣಿಸಿಕೊಂಡಿದ್ದು, ಹೊಲಗಳಲ್ಲಿ ರಾಗಿ, ನೆಲಗಡಲೆ, ತೊಗರಿ ಬೆಳೆಗಳು ಹಸಿರುಗಟ್ಟಿದ್ದು, ಚಿಗುರತೊಡಗಿವೆ. ಬೆಳೆಯಂತೂ ಆಗುವುದಿಲ್ಲ. ರಾಸುಗಳಿಗೆ ಹುಲ್ಲೇ ಗತಿ ಎಂಬುವುದು ರೈತರದ್ದಾಗಿದೆ.

ಕೋಲಾರ ಜಿಲ್ಲೆಯಲ್ಲಿ ಅವರೆಕಾಯಿಯು ಒಂದು ಪ್ರಮುಖ ಬೆಳೆಯಾಗಿದ್ದು, ರಾಗಿ, ನೆಲಗಡಲೆ ಮತ್ತು ತೊಗರಿ ಬೆಳೆಯಾಗದಿದ್ದರೆ, ಹಿಂಗಾರು ಮಳೆಗಳಿಗೆ ಅವರೆ ಬೆಳೆ ರೈತರ ಕೈ ಹಿಡಿಯುತ್ತದೆ ಎಂಬುವುದು ರೈತರ ನಂಬಿಕೆ. ಈ ಬಾರಿ ಅವರೇ ಬೆಳೆಯು ಸ್ವಲ್ಪ ಮಟ್ಟಿಗೆ ಮಳೆಯಿಲ್ಲದ ಕಾರಣ ಒಣಗಿದ್ದು, ಈಗ ಬಿದ್ದಿರುವ ಮಳೆ ಹಾಗೂ ಮುಂದೆ ಮಳೆ ಆದರೆ ಅವರೇಕಾಯಿ ಬೆಳೆ ರೈತರ ಕೈ ಹಿಡಿಯುವುದರಲ್ಲಿ ಸಂಶಯವಿಲ್ಲ.

ಕೋಟ್
ಕಳೆದ ಎರಡೂವರೆ ತಿಂಗಳಿನಿAದ ಸರಿಯಾಗಿ ಮಳೆ ಇಲ್ಲದ ಕಾರಣ ಮಳೆಯಾಶ್ರಿತ ಬೆಳೆಗಳು ಭೂಮಿಯಲ್ಲಿ ತೇವಾಂಶವಿಲ್ಲದೆ ಒಣಗಿ ಹೋಗಿವೆ. ರಾಗಿ ಮೂರರಿಂದ ಮೂರೂವರೆ ತಿಂಗಳು ಬೆಳೆ ಈಗಾಗಲೇ ಎರಡು ತಿಂಗಳು ಕಾಲ ಮಳೆ ಇಲ್ಲದೆ ಬೆಳೆಯೇ ಒಣಗಿ
ಹೋಗಿದೆ. ಈಗ ಬಂದಿರುವ ಮಳೆಯಿಂದ ರಾಗಿ, ನೆಲಗಡಲೆ, ತೊಗರಿ ಬೆಳೆಗಳಿಗೆ ಜೀವ ಬಂದAತೆ ಆಗಿದೆ. ಪೂರ್ಣ ಪ್ರಮಾಣದ ಬೆಳೆ ಆಗುವುದಿಲ್ಲ. ಶೇ.೫೦ ರಷ್ಟು ಮಾತ್ರ ಬೆಳೆಯಾಗುವ ಸಾಧ್ಯತೆ ಇದೆ. ಮಳೆ ಹೀಗೆ ಮುಂದುವರೆದರೆ ಮಾತ್ರ ಮತ್ತೆ ಮಳೆ ಕೈಕೊಟ್ಟರೆ ಸಂಪೂರ್ಣ ಬೆಳೆ ರೈತರ ಕೈ ಹಿಡಿಯುವುದಿಲ್ಲ.

-ಚಂದ್ರಶೇಖರ್, ಪ್ರಗತಿಪರ ರೈತ, ನೆನುಮನಹಳ್ಳಿ.

ಚಿತ್ರ ೦೩ ಕೆ.ಎಲ್.ಆರ್. ೦೧ : ಮಳೆ ಇಲ್ಲದೆ ಒಣಗುತ್ತಿದ್ದ ರಾಗಿ ಬೆಳೆಗೆ ಬುಧವಾರ ಬಿದ್ದ ಮಳೆ ಚಿಗುರೊಡೆಯುತ್ತಿವೆ.
ಚಿತ್ರ ೦೩ ಕೆ.ಎಲ್.ಆರ್. ೦೧ಎ : ಚಂದ್ರಶೇಖರ್, ಪ್ರಗತಿಪರ ರೈತ, ನೆನುಮನಹಳ್ಳಿ.