ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಖಾಯಂ ನೌಕರರ ಸಂಖ್ಯೆ ಕಡಿಮೆ ಇರುವುದರಿಂದ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದರಿAದ ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆಗಳು ಲಭ್ಯವಾಗದೆ ಇರುವುದರಿಂದ ಪರದಾಡುವಂತಾಗಿದ್ದು, ಜಿಲ್ಲಾಡಳಿತ ಹಳಿ ತಪ್ಪುವಂತೆ ಆಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಕಛೇರಿಗಳಲ್ಲಿ ಅವಶ್ಯಕತೆ ತಕ್ಕಂತೆ ಖಾಯಂ ಸಿಬ್ಬಂದಿ ಕೊರತೆ ಇರುವುದರಿಂದ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಅವರಿಂದ ಇಲಾಖೆಯ ಕೆಲಸಗಳನ್ನು ಸಾರ್ವಜನಿಕರಿಗೆ ಖಾಯಂ ಸಿಬ್ಬಂದಿ ಜೊತೆಗೂಡಿ ಸೇವೆಗಳನ್ನು ನೀಡುತ್ತಿದ್ದಾರೆ. ಆದರೆ ಖಾಯಂ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿಗೆ ತರಬೇತಿ ನೀಡುವುದರಲ್ಲಿಯೇ ಹೆಚ್ಚು ಕಾಲಹರಣ ಆಗುತ್ತಿರುವುದರಿಂದ ಸಾರ್ವಜನಿಕರ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲವೆಂಬ ಕೂಗು ಸಾರ್ವಜನಿಕರ ವಲಯದಲ್ಲಿ ಕೇಳಿಬಂದಿದೆ.
ಕಂದಾಯ, ತೋಟಗಾರಿಕೆ, ಕೃಷಿ, ಜಿಲ್ಲಾಪಂಚಾಯತ್ ಮುಂತಾದ ಇಲಾಖೆಗಳಿಗೆ ದಿನನಿತ್ಯ ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗೆ ಅಲೆಯುವುದು ಹೆಚ್ಚು. ಈ ಇಲಾಖೆಗಳಲ್ಲಿಯೇ ಖಾಯಂ ಸಿಬ್ಬಂದಿ ಕಡಿಮೆ ಇರುವ ಕಾರಣ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿಯಿAದ ಸಾರ್ವಜನಿಕರು ಸೇವೆಗಳನ್ನು ಪಡೆಯುವಲ್ಲಿ ವಿಳಂಭವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅನೇಕ ಗ್ರಾಮಪಂಚಾಯ್ತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಇಲ್ಲದೆ ಇದ್ದು, ಕಾರ್ಯದರ್ಶಿಗಳನ್ನು ಅಭಿವೃದ್ಧಿ ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಗ್ರೇಡ್-೨ ಕಾರ್ಯದರ್ಶಿಗಳಿಗೆ ಅಭಿವೃದ್ಧಿ ಅಧಿಕಾರಿಯ ಕಾರ್ಯಭಾರ ನೀಡಬಾರದು ಎಂಬ ಆದೇಶವಿದ್ದರೂ ಅಭಿವೃದ್ಧಿ ಅಧಿಕಾರಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಗ್ರೇಡ್-೨ ಕಾರ್ಯದರ್ಶಿಗಳಿಗೆ ಅಭಿವೃದ್ಧಿ ಅಧಿಕಾರಿಯ ಜವಾಬ್ದಾರಿ ನೀಡಿರುವುದರಿಂದ ಗ್ರಾಮಪಂಚಾಯ್ತಿಗಳಲ್ಲಿ ಸಕಾಲಕ್ಕೆ ಸಾರ್ವಜನಿಕರಿಗೆ ಸೇವೆ ಒದಗಿಸಲು ಸಾಧ್ಯವಾಗದ ಕಾರಣ ಸಾರ್ವಜನಿಕರು ಪರದಾಡುವಂತೆ ಆಗಿದೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಎದ್ದುಕಾಣುತ್ತಿರುವುದರಿಂದ ಕ್ಷೇತ್ರಕಾರ್ಯಕ್ಕೆ ತೆರಳುವ ಸಿಬ್ಬಂದಿಯು ಇಲ್ಲದಂತೆ ಆಗಿರುವುದರಿಂದ ರೈತರಿಗೆ ಸಕಾಲಕ್ಕೆ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಮಾಹಿತಿ ನೀಡುವವರೇ ಇಲ್ಲದಂತೆ ಆಗಿದ್ದು, ರೈತರೇ ಕಛೇರಿಗಳಿಗೆ ಅಲೆಯುವಂತೆ ಆಗಿದೆ.
ಕಛೇರಿಗಳಲ್ಲಿಯೂ ಸಿಬ್ಬಂದಿ ಕಡಿಮೆ ಇರುವ ಕಾರಣ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸುವ ಕಾರಣ ಸಕಾಲಕ್ಕೆ ರೈತರಿಗೆ ಅಧಿಕಾರಿಗಳು ಕಛೇರಿಯಲ್ಲಿ ಸಿಗದೇ ಪರದಾಡುವಂತೆ ಆಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡಿರುವ ನೌಕರರಿಗೆ ಇಲಾಖೆಯ ಸಮರ್ಪಕ ಮಾಹಿತಿ ಕೊರತೆಯಿಂದ ರೈತರಿಗೆ ಮಾಹಿತಿ ಒದಗಿಸಲು ವಿಳಂಭ ಅನುಸರಿಸುವಂತಾಗಿದೆ.
ನಗರಸಭೆ ಮತ್ತು ಪಟ್ಟಣಪಂಚಾಯ್ತಿಗಳಲ್ಲಿ ಸಿಬ್ಬಂದಿಯ ಕೊರತೆ ಇದ್ದು, ಸಾರ್ವಜನಿಕರಿಗೆ ತುರ್ತು ಅಗತ್ಯವಿರುವ ಜನನ-ಮರಣ ಪತ್ರಗಳು, ಇ-ಖಾತೆ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಸೇವೆಗಳು ವಿಳಂಭವಾಗುತ್ತಿದ್ದು, ಅಧಿಕಾರಿಗಳನ್ನು ಕೇಳಿದರೆ ಸಿಬ್ಬಂದಿ ಕೊರತೆ ಎಂಬ ಸಬೂಬುಗಳನ್ನು ಹೇಳಿ ಸಾರ್ವಜನಿಕರನ್ನು ಕಛೇರಿಗಳಿಗೆ ತಿರುಗಾಡಿಸಿಕೊಳ್ಳುವಂತಹ ಕೆಲಸಗಳು ನಡೆಯುತ್ತಿರುವುದರಿಂದ ಜಿಲ್ಲಾಡಳಿತ ಹಳಿತಪ್ಪಿದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಕಂದಾಯ ಇಲಾಖೆಯಲ್ಲಂತೂ ಸಾರ್ವಜನಿಕರು ಪ್ರತಿದಿನ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದ್ದು, ಫಹಣಿ, ಮ್ಯೂಟೇಷನ್, ಜಾತಿ, ಆಧಾಯ ಪ್ರಮಾಣಪತ್ರಗಳನ್ನು ಪಡೆಯಲು ಹಾಗೂ ಹಳೇ ದಾಖಲೆಗಳನ್ನು ಪಡೆಯಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆಲ್ಲಾ ಖಾಯಂ ನೌಕರರ ಇಲ್ಲದೇ ಇರುವುದೇ ಕಾರಣವಾಗಿದೆ.
ಬಾಕ್ಸ್
ಜಿಲ್ಲಾಡಳಿತ ಭವನದಲ್ಲಿ ಖಾಯಂ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಜಿಲ್ಲಾಡಳಿತ ಭವನದಲ್ಲಿ ಸುಮಾರು ಇಲಾಖೆಗಳಿದ್ದು, ಸಾರ್ವಜನಿಕರ ಸೇವೆಗೆ ಇಲಾಖೆಗಳಲ್ಲಿ ಅನುಕೂಲಕರ ಸೇವೆಗಳು ಲಭ್ಯವಿದ್ದರೂ ಸಿಬ್ಬಂದಿ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಸೇವೆಗಳ ಲಭ್ಯತೆ ಇಲ್ಲದೆ ಪ್ರತಿದಿನ ಸಾರ್ವಜನಿರಕರು ಜಿಲ್ಲಾಡಳಿತ ಭವನಕ್ಕೆ ಅಲೆಯುವಂತೆ ಆಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ಆರೋಪಿಸಿದ್ದಾರೆ.
ಕೋಟ್
ಕೋಲಾರ ಜಿಲ್ಲೆಯ ಇಲಾಖೆಗಳಲ್ಲಿ ಖಾಯಂ ನೌಕರರಿಗಿಂತ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿಯೇ ಹೆಚ್ಚಾಗಿದ್ದಾರೆ. ಯಾವುದೇ ಇಲಾಖೆಯಲ್ಲಿ ಹೋದರೂ ಖಾಯಂ ನೌಕರರು ಕಣ್ಣಿಗೆ ಕಾಣಿಸುವುದೇ ಇಲ್ಲ. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನೌಕರರನ್ನು ಮಾಹಿತಿ ಕೇಳಿದರೆ ಸರಿಯಾದ ಮಾಹಿತಿ ಅವರಿಂದ ಸಿಗುತ್ತಿಲ್ಲ. ಮೇಲಧಿಕಾರಿಗಳನ್ನು ಕೇಳಿ ಎನ್ನುತ್ತಿದ್ದಾರೆ. ಇದು ಜಿಲ್ಲಾಡಳಿತ ಹಳಿ ತಪ್ಪಿದಂತೆ ಆಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಂತೂ ಜಿಲ್ಲೆಯನ್ನು ಮರೆತಿದ್ದಾರೆ. ಸಾರ್ವಜನಿಕರ ಪಾಡು ಕೇಳುವವರೇ ಇಲ್ಲದಂತೆ ಆಗಿದೆ.
-ನಾರಾಯಣಗೌಡ, ರೈತ ಸಂಘದ ರಾಜ್ಯ ಉಪಾಧ್ಯಕ್ಷ.
ಚಿತ್ರ ೧೨ ಕೆ.ಎಲ್.ಆರ್ ೦೩ : ಜಿಲ್ಲಾಡಳಿತ ಭವನ ಚಿತ್ರ
ಚಿತ್ರ ೧೨ ಕೆ.ಎಲ್.ಆರ್. ೦೩ಎ : ನಾರಾಯಣಗೌಡ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ರವರ ಭಾವಚಿತ್ರ