ನ್ಯೂಸ್

ಜಿಲ್ಲಾಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕರ ಕೊರತೆ / ಖಾಸಗಿ ಆಂಬುಲೆನ್ಸ್ಗಳ ದರ್ಬಾರು / ಹಣದಾಸೆಗೆ ಆಸ್ಪತ್ರೆಯ ಸಿಬ್ಬಂದಿಯ ಕುಮ್ಮಕ್ಕು

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ನಗರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ಆಂಬುಲೆನ್ಸ್ಗಳಿದ್ದರೂ ಚಾಲಕರ ಕೊರತೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಂಬುಲೆನ್ಸ್ ಸೇವೆ ಒದಗಿಸಲಾಗದೆ, ಸಾರ್ವಜನಿಕರು ದುಬಾರಿ ಹಣ ಕೊಟ್ಟು ಖಾಸಗಿ ಆಂಬುಲೆನ್ಸ್ಗಳಲ್ಲಿ ಸೇವೆ ಪಡೆಯುವಂತಾಗಿದೆ. ಇದರಿಂದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಖಾಸಗಿ ಆಂಬುಲೆನ್ಸ್ ಚಾಲಕರ ಉಪಟಳ ಹೆಚ್ಚಾಗಿದೆ. ಇದಕ್ಕೆ ಆಸ್ಪತ್ರೆಯ ಸಿಬ್ಬಂದಿಯೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಮೂರು ಆಕ್ಸಿಜನ್ ಆಂಬುಲೆನ್ಸ್ಗಳು, ಒಂದು ವೆಂಟಿಲೇಟರ್ ಮತ್ತು ಒಂದು ನಗು ಮಗು ಆಂಬುಲೆನ್ಸ್ ಇದ್ದರೂ ಕೇವಲ ೫ ಜನ ಚಾಲಕರಿದ್ದು, ಅದರಲ್ಲಿ ಒಬ್ಬರು ತುರ್ತು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಇನ್ನೊಬ್ಬರನ್ನು ಆಸ್ಪತ್ರೆಯ ಕಸ ವಿಲೇವಾರಿ ವಾಹನದ ಚಾಲನೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಇನ್ನು ಮೂವರು ಚಾಲಕರು ೪ ಆಂಬುಲೆನ್ಸ್ಗಳಿಗೆ ಮೂರು ಪಾಳಯಗಳಲ್ಲಿ ಕೆಲಸ ಮಾಡಬೇಕಾಗಿದೆ. ಇದರಿಂದ ಬರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸೇವೆ ನೀಡಲಾಗದೆ ಖಾಸಗಿ ಆಂಬುಲೆನ್ಸ್ಗಳ ಮೊರೆ ಹೋಗುವಂತಾಗಿದೆ.

ಎಸ್ ಎನ್ ಆರ್ ಆಸ್ಪತ್ರೆಗೆ ಬರುವ ತುರ್ತು ರೋಗಿಗಳ ಚಿಕಿತ್ಸೆಗೆ ಬೇರೆಡೆ ಸ್ಥಳಾಂತರಿಸಬೇಕಾದರೆ ಕೋಲಾರದ ಟಮಕ ಬಳಿಯಿರುವ ಆರ್.ಎಲ್ ಜಾಲಪ್ಪ ಮೆಡಿಕಲ್ ಕಾಲೇಜಿಗೆ ೧೬೦ ರೂ.ಗಳು ಮತ್ತು ಬೆಂಗಳೂರಿನ ಆಸ್ಪತ್ರೆಗಳಿಗೆ ಸ್ಥಳಾಂತರಿಸಬೇಕಾದರೆ ೧೬೦೦ ರೂ.ಗಳು ನಿಗದಿಪಡಿಸಲಾಗಿದೆ. ಆದರೆ ಸಮಯಕ್ಕೆ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಲಭ್ಯವಿಲ್ಲದಿದ್ದರೆ ರೋಗಿಗಳನ್ನು ಸ್ಥಳಾಂತರಿಸಲು ಖಾಸಗಿ ಆಂಬುಲೆನ್ಸ್ಗಳು ಆರ್.ಎಲ್ ಜಾಲಪ್ಪ ಮೆಡಿಕಲ್ ಕಾಲೇಜಿಗೆ ೧೦೦೦ ರೂ. ಹಾಗು ಬೆಂಗಳೂರಿಗೆ ೪೦೦೦ ರೂ.ಗಳು ತೆಗೆದುಕೊಳ್ಳಲಾಗುತ್ತಿದೆ.

ಆಸ್ಪತ್ರೆಯಲ್ಲಿ ಲಭ್ಯವಿರುವ ವೆಂಟಿಲೇಟರ್ ಆಂಬುಲೆನ್ಸ್ನಲ್ಲಿ ಟೆಕ್ನೀಷಿಯನ್ ಮತ್ತು ಅಬ್ಸರ್ವರ್ ಸಿಬ್ಬಂದಿ ಇಲ್ಲದ ಕಾರಣ ಆ ಆಂಬುಲೆನ್ಸ್ ಸೇವೆಗೆ ಲಭ್ಯವಾಗುತ್ತಿಲ್ಲ ಹಾಗು ನಗು ಮಗು ಆಂಬುಲೆನ್ಸ್ ಅನ್ನು ಬ್ಲಡ್ ಬ್ಯಾಂಕ್ ಉಪಯೋಗಕ್ಕೆ ಬಳಸಿಕೊಳ್ಳಲಾಗಿದೆ. ಈ ಎಲ್ಲಾ ಅವ್ಯವಸ್ಥೆಗಳನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಂಬುಲೆನ್ಸ್ಗಳು ಎಸ್ ಎನ್ ಆರ್ ಆಸ್ಪತ್ರೆಯ ಮುಂಭಾಗ ವಾಹನಗಳನ್ನು ನಿಲ್ಲಿಸಿಕೊಂಡು ಆಸ್ಪತ್ರೆಯಲ್ಲಿಯೇ ಕುಳಿತು ಕಾಲಹರಣ ಮಾಡುವುದರಿಂದ ಆಸ್ಪತ್ರೆಗೆ ಬರುವ ಮಹಿಳೆಯರಿಗೆ ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಯ ಬಳಿ ಅನುಚಿತವಾಗಿ ನಡೆದುಕೊಂಡು ಕಿರಿ ಕಿರಿ ಮಾಡುತ್ತಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿ ಕೆಲ ಶುಶ್ರೋಷಕಿಯರು ಖಾಸಗಿ ಆಂಬುಲೆನ್ಸ್ ಚಾಲಕರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಎಸ್ ಎನ್ ಆರ್ ಆಸ್ಪತ್ರೆಗೆ ಬರುವ ತುರ್ತು ರೋಗಿಗಳಿಗೆ ರೋಗಿಯ ಪರಿಸ್ಥಿತಿಯನ್ನು ಗಂಭೀರವಾಗಿ ಸೃಷ್ಟಿಸಿ ರೋಗಿಗಳ ಸಂಬAಧಿಕರಲ್ಲಿ ಭಯ ಸೃಷ್ಟಿಸಿ ಈ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇಲ್ಲ. ಇಲ್ಲಿನ ಆಂಬುಲೆನ್ಸ್ಗೆ ಕಾಯುತ್ತಾ ಕುಳಿತರೆ ರೋಗಿಯ ಪ್ರಾಣಕ್ಕೆ ಕುತ್ತು ಬರಬಹುದೆಂಬ ಭಯದ ವಾತಾವರಣ ಸೃಷ್ಡಿಸಿ ಕೆಲ ಸಿಬ್ಬಂದಿಯೇ ಖಾಸಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿ ಅವರ ಮೂಲಕ ಸಿಬ್ಬಂದಿ ಸೂಚಿಸಿದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ.

ಇದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ಸಾಲ ಸೋಲ ಮಾಡಿ ದುಬಾರಿ ವೆಚ್ಚ ಭರಿಸಿ ಖಾಸಗಿಯವರ ಸೌಲಭ್ಯ ಪಡೆಯಬೇಕಿದೆ. ಇದಕ್ಕೆ ಎಸ್.ಎನ್.ಆರ್.ಆಸ್ಪತ್ರೆಯ ಸಿಬ್ಬಂದಿಯೇ ಕಾರಣವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಕೊತ್ತೂರು ಮಂಜುನಾಥ್, ಅನೇಕ ಬಾರಿ ಇದನ್ನು ಆಸ್ಪತ್ರೆಯ ಆಡಳಿತ ಮಂಡಳಿಯ ಗಮನಕ್ಕೆ ತಂದು, ಇದೇ ರೀತಿ ಮುಂದುವರೆದರೆ ಕ್ರಮ ಕೈಗೊಳ್ಳಬೇಕಾಗುತ್ತದೆಂದು ಆಸ್ಪತ್ರೆಯ ಮೇಲುಸ್ತುವಾರಿಯ ಶಸ್ತç ಚಿಕಿತ್ಸಕರಿಗೆ ವಾರ್ನಿಂಗ್ ಸಹ ಮಾಡಿರುತ್ತಾರೆ.

ಉಪ ಲೋಕಾಯುಕ್ತ ಎಂ.ವೀರಪ್ಪನವರು ಸಹ ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಆಸ್ಪತ್ರೆಯ ಅವ್ಯವಸ್ಥೆ, ಖಾಸಗಿ ಆಂಬುಲೆನ್ಸ್ಗಳ ದರ್ಬಾರು ಹಾಗೂ ಆಸ್ಪತ್ರೆಯ ಹೊರಗಡೆ ಮತ್ತು ಒಳಗಡೆ ಸ್ವಚ್ಛತೆ ಬಗ್ಗೆ ದೂರು ನೀಡಿದ್ದರು. ಉಪ ಲೋಕಾಯುಕ್ತರು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು ಸಹ ಎಸ್.ಎನ್.ಆರ್.ಆಸ್ಪತ್ರೆಯ ಕರ್ಮಕಾಂಡಗಳು ಮುಂದುವರೆಯುತ್ತಲೇ ಇವೆ.

ಕೋಟ್

ಎಸ್.ಎನ್.ಆರ್.ಆಸ್ಪತ್ರೆಯಲ್ಲಿ ಇರುವ ಆಂಬುಲೆನ್ಸ್ಗಳು ಸುಸಜ್ಜಿತವಾಗಿವೆ. ಚಾಲಕರ ಕೊರತೆಯಲ್ಲಿ ೭ ಜನ ಚಾಲಕರಲ್ಲಿ ಇಬ್ಬರು ಕೆಲಸ ಬಿಟ್ಟು ಹೋಗಿದ್ದಾರೆ. ಈಗ ಇರುವುದು ೫ ಜನ ಮಾತ್ರ ೩ ಪಾಳಯಗಳಲ್ಲಿ ೫ ಜನರಿಂದ ಕೆಲಸ ಮಾಡಿಸಲಾಗುತ್ತಿದೆ. ಒಂದು ಆಂಬುಲೆನ್ಸ್ ಬೆಂಗಳೂರಿಗೆ ಹೋದರೆ ವಾಪಸ್ಸು ಬರುವುದು ನಾಲ್ಕೆöÊದು ಗಂಟೆಗಳಾಗುತ್ತವೆ. ನಮ್ಮಲ್ಲಿ ಆಂಬುಲೆನ್ಸ್ ಇದ್ದರೂ ತುರ್ತು ಸೇವಾ ಘಟಕಕ್ಕೆ ಒಂದು ಆಂಬುಲೆನ್ಸ್ ಮುಂಗಡವಾಗಿ ಇರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮ ಆಂಬುಲೆನ್ಸ್ ಸೇವೆ ನೀಡಲು ಕಷ್ಟಸಾಧ್ಯವಾಗುತ್ತದೆ. ೩ ಮತ್ತು ೪ ದಿನಗಳಲ್ಲಿ ಇಬ್ಬರು ಚಾಲಕರು ಮತ್ತೆ ಹೊಸದಾಗಿ ಬರುವ ಸಾಧ್ಯತೆ ಇದೆ.

-ಆರ್.ಎಂ.ಓ.(ನಿವಾಸಿ ವೈದ್ಯಕೀಯ ಅಧಿಕಾರಿ)ಸುರಾಜ್‌ಪಟೇಲ್, ಎಸ್.ಎನ್.ಆರ್.ಆಸ್ಪತ್ರೆ

ಚಿತ್ರ ೨೫ ಕೆ.ಎಲ್.ಆರ್. ೦೨ : ಎಸ್.ಎನ್.ಆರ್.ಆಸ್ಪತ್ರೆ ಚಿತ್ರ