ನ್ಯೂಸ್

ಜಿಲ್ಲಾಧಿಕಾರಿ ಅವಧಿಯಲ್ಲಿ ಭೂಮಂಜೂರಾತಿ ಮಾಡಿರುವ ದಾಖಲೆಗಳ ಬಿಡುಗಡೆ/ರೈತರ ಒಡೆತನದ ಆಸ್ತಿ ವಕ್ಫ್ಗೆ ಪಹಣಿ ಮಾಡಲು ನಿರಾಕರಣೆ/ಜನಪ್ರತಿನಿಧಿಗಳ ಆರೋಪಕ್ಕೆ ಡಿಸಿ ಅಕ್ರಂಪಾಷಾ ತಿರುಗೇಟು.

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಗಳ ಮಧ್ಯೆ ಇತ್ತೀಚೆಗೆ ಕೋಲಾರದಲ್ಲಿ ಸಂಘರ್ಷ ನಡೆಯುತ್ತಿದ್ದು, ಅದು ತಾರಕಕ್ಕೇರುತ್ತಿದ್ದುö, ಜನಪ್ರತಿನಿಗಳು ವಕ್ಫ್ ಮಂಡಳಿಗೆ ಭೂ ಮಂಜೂರಾತಿ ಸಂಬAಧ ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ಡಿಸಿ ಅಕ್ರಂಪಾಷಾ ದಾಖಲೆಗಳ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಕಳೆದ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಂಸದ ಎಸ್.ಮುನಿಸ್ವಾಮಿ ಡಿಸಿ ಅಕ್ರಂಪಾಷಾ, ಕೋಲಾರ ತಾಲೂಕಿನಲ್ಲಿಯೇ ೨೧೮ ಎಕರೆ ಜಮೀನನ್ನು ವಕ್ಫ್ ಮಂಡಳಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು. ಇಡೀ ಜಿಲ್ಲೆಯಲ್ಲಿ ವಕ್ಫ್ಗೆ ಡಿಸಿ ಮಂಜೂರು ಮಾಡಿರುವ ದಾಖಲೆಗಳನ್ನು ಸಂಗ್ರಹಿಸುತ್ತಿದ್ದುö, ದಾಖಲೆಗಳು ಬಿಡುಗಡೆಯಾದ ನಂತರ ಡಿಸಿ ಕಚೇರಿ ವಿರುದ್ಧ ಅನಿರ್ಧಿಷ್ಠ ಧರಣಿ ಪ್ರತಿಭಟನೆ ನಡೆಸುವುದಾಗಿ ಘೋಷಣೆ ಮಾಡಿದರು.

ಇದರ ಬೆನ್ನಲ್ಲೇ ಡಿಸಿ ಅಕ್ರಂಪಾಷಾ ತಮ್ಮ ಆಡಳಿತಾವಯಲ್ಲಿನ ಆಗಿರುವ ಭೂಮಂಜೂರಾತಿ ಹಾಗೂ ವಕ್ಫ್ ಮಂಡಳಿಯಿAದ ಖಾತೆ ಮಾಡಲು ಕೇಳಿರುವ ಆಸ್ತಿಗಳ ವಿವರ ಹಾಗೂ ರೈತರ ಒಡೆತನದಲ್ಲಿರುವುದರಿಂದ ವಕ್ಫ್ಗೆ ಖಾತೆ ಮಾಡಲು ನಿರಾಕರಿಸಿರುವ ಕುರಿತು ವಿವಿಧ ತಾಲೂಕುಗಳ ತಹಸೀಲ್ದಾರ್‌ಗಳ ಪತ್ರಗಳ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

೧೨೦ ಆಸ್ತಿಗಳ ನಿರಾಕರಣೆ:

ಕೋಲಾರ ಜಿಲ್ಲೆಯ ಆರು ತಾಲೂಕುಗಳಿಗೆ ಸಂಬAಧಪಟ್ಟAತೆ ಕಳೆದ ೧೨೦ ಕ್ಕೂ ಹೆಚ್ಚು ಪ್ರಕರಣಗಳ ನೂರಾರು ಎಕರೆ ಆಸ್ತಿಗಳನ್ನು ವಕ್ಫ್ ಮಂಡಳಿ ಖಾತೆ ಮಾಡಿಕೊಡುವಂತೆ ಕೋರಿದ್ದುö, ಈ ಜಮೀನುಗಳು ರೈತರ ಅನುಭವದಲ್ಲಿರುವುದರಿಂದ ಖಾತೆ ಮಾಡಿಕೊಡಲು ಬರುವುದಿಲ್ಲ ಎಂದು ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯ ವಕ್ಫ್ ಮಂಡಳಿಗೆ ಆಯಾ ತಾಲೂಕುಗಳ ತಹಸೀಲ್ದಾರ್‌ಗಳು ಹಿಂಬರಹ ನೀಡಿರುವ ಪತ್ರಗಳನ್ನು ಡಿಸಿ ಬಿಡುಗಡೆ ಮಾಡಿದ್ದಾರೆ.

ಹಿಂಬರಹ ನೀಡಿರು ಪತ್ರಗಳ ಪ್ರಕಾರ ಕೋಲಾರದಲ್ಲಿ ೨೫, ಶ್ರೀನಿವಾಸಪುರದಲ್ಲಿ ೪೨, ಬಂಗಾರಪೇಟೆಯಲ್ಲಿ ೪೩, ಮಾಲೂರಿನಲ್ಲಿ ೧೪, ಕೆಜಿಎಫ್‌ನಲ್ಲಿ ೫ ಸೇರಿದಂತೆ ೧೨೦ ಕ್ಕೂ ಪ್ರಕರಣಗಳಲ್ಲಿ ನೂರಾರು ಎಕರೆ ಜಮೀನಿಗೆ ವಕ್ಫ್ ಮಂಡಳಿಗೆ ಖಾತೆ ಮಾಡಿಕೊಡಲು ನಿರಾಕರಿಸಿದ್ದನ್ನು ದಾಖಲೆಗಳ ಸಮೇತ ನಿರೂಪಿಸಿದ್ದಾರೆ.

೧೬೦೦ ಎಕರೆ ಮಂಜೂರು:

ಕಳೆದ ಜೂನ್ ೨೦೨೩ ರಿಂದ ೨೦೨೪ ನವೆಂಬರ್ ೧೬ ರವರೆವಿಗೂ ಡಿಸಿ ಅಕ್ರಂಪಾಷಾ ಕೋಲಾರ ಜಿಲ್ಲೆಯಲ್ಲಿ ವಿವಿಧ ಸಾರ್ವಜನಿಕ ಬಳಕೆಯ ಕಾರಣಗಳಿಗಾಗಿ ೧೬೦೦ ಕ್ಕೂ ಹೆಚ್ಚು ಎಕರೆ ಜಮೀನುಗಳನ್ನು ಮಂಜೂರು ಮಾಡಿರುವುದ ಅಂಕಿ ಅಂಶ ಬಿಡುಗಡೆ ಮಾಡಿದ್ದುö, ಈ ಪೈಕಿ ಒಂದು ಎಕರೆಯೂ ವಕ್ಫ್ಗೆ ಮಂಜೂರು ಮಾಡಿಲ್ಲದಿರುವುದನ್ನು ಬೆಳಕಿಗೆ ತಂದಿದ್ದಾರೆ. ತಾಲೂಕುವಾರು ಕೋಲಾರ ೨೫ ಪ್ರಕರಣ ೧೨೫ ಎಕರೆ, ಮಾಲೂರು ೨೪ ಪ್ರಕರಣ ೮೪ ಎಕರೆ, ಮುಳಬಾಗಿಲು ೫೬ ಪ್ರಕರಣ ೧೨೩ ಎಕರೆ, ಶ್ರೀನಿವಾಸಪುರ ೧೬ ಪ್ರಕರಣ ೧೦೦ ಎಕರೆ , ಬಂಗಾರಪೇಟೆ ೫ ಪ್ರಕರಣ ೫ ಎಕರೆ ಮತ್ತು ಕೆಜಿಎಫ್ ೩೧ ಪ್ರಕರಣ ೧೧೮೯ ಎಕರೆ ಭೂ ಮಂಜೂರಾತಿ ಆಗಿರುವುದನ್ನು ಡಿಸಿ ಅಂಕಿ ಅಂಶಗಳ ಮೂಲಕ ನೀಡಿದ್ದಾರೆ.

ಕೋಲಾರ ತಾಲೂಕು:

ಮೂರು ಸರ್ಕಾರಿ ಶಾಲೆಗಳಿಗೆ ೭.೧೫ ಎಕರೆ, ೧ ಕಾಲೇಜಿಗೆ ೨ ಎಕರೆ, ೭ ಸ್ಮಶಾನಕ್ಕಾಗಿ ೭.೧೮ ಎಕರೆ, ೧ ಆಸ್ಪತ್ರೆಗಾಗಿ ೨.೨೦ ಎಕರೆ, ೧೧ಇಲಾಖಾ ಕಟ್ಟಡಗಳಿಗಾಗಿ ೧೭.೩೬ ಎಕರೆ, ೩ ಘನ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ೨೪.೨೮ ಎಕರೆ, ೮ ಪಿಕುಸುಮ್ ಉಪ ಕೇಂದ್ರಗ ಳ ನಿರ್ಮಾಣಕ್ಕಾಗಿ ಇಂಧನ ಇಲಾಖೆಗೆ ೬೩.೨೧ ಎಕರೆ ಸೇರಿ ಒಟ್ಟು ೧೨೫ ಎಕರೆ ೨೦ ಗುಂಟೆ ಜಮೀನನ್ನು ಭೂ ಮಂಜೂರಾತಿ ಮಾಡಲಾಗಿದೆ.

ಮಾಲೂರು ತಾಲೂಕು:

ಎರಡು ಸರ್ಕಾರಿ ಶಾಲೆಗಳಿಗೆ ೮.೦೮ ಎಕರೆ, ೫ ಸ್ಮಶಾನಕ್ಕಾಗಿ ೪.೦೯ ಎಕರೆ, ೩ ಇಲಾಖಾ ಕಟ್ಟಡಗಳಿಗಾಗಿ ೦.೩೫ ಎಕರೆ, ೫ ಇಂಧನ ಇಲಾಖೆಗಾಗಿ ೬೮.೨೦ಎಕರೆ, ೪ ರಸ್ತೆಗಾಗಿ ೨.೧೮ ಎಕರೆ ಸೇರಿದಂತೆ ಒಟ್ಟು ೮೪ ಎಕರೆ ೧೦ ಗುಂಟೆ ಜಮೀನನ್ನು ಮಂಜೂರಾತಿ ಮಾಡಲಾಗಿದೆ.

ಮುಳಬಾಗಿಲು:

ಹದಿನಾರು ಶಾಲಾ ಕಾಲೇಜುಗಳಿಗೆ ೬.೦೯ ಎಕರೆ, ೧೪ ಅಂಗನವಾಡಿ ಗಳಿಗೆ ೧ ಎಕರೆ, ೧ ಘನತ್ಯಾಜ್ಯ ವಿಲೇವಾರಿಗಾಗಿ ೧.೦೫ ಎಕರೆ, ೧ ಆಸ್ಪತ್ರೆಗಾಗಿ ೨ ಎಕರೆ, ೭ ಸ್ಮಶಾನಕ್ಕೆ ೭.೧೯ ಎಕರೆ, ೧೦ ಇಂಧನ ಇಲಾಖೆಗೆ ೧೦೫ ಎಕರೆ, ೪ ರಸ್ತೆಗಾಗಿ ೦.೩೬ ಎಕರೆ ಸೇರಿದಂತೆ ಒಟ್ಟು ೧೨೩ ಎಕರೆ ೨೯ ಗುಂಟೆ ಜಮೀನನ್ನು ಮಂಜೂರಾತಿ ಮಾಡಲಾಗಿದೆ.

ಶ್ರೀನಿವಾಸಪುರ:

ಹತ್ತು ಸರ್ಕಾರಿ ಕಾಲೇಜುಗಳಿಗೆ ೧೪.೩೮ ಎಕರೆ, ೩ ಇಂಧನ ಇಲಾಖೆಗೆ ೬೫ ಎಕರೆ, ೧ ಅರಣ್ಯ ಇಲಾಖೆಗೆ ೧೦ ಎಕರೆ, ೧ ಗೋಶಾಲೆಗೆ ೯.೩೬ ಎಕರೆ, ಇತರೇ ೦.೦೯ ಗುಂಟೆ ಸೇರಿದಂತೆ ಒಟ್ಟು ೧೦೦ ಎಕರೆ ೦.೦೩ಗುಂಟೆ ಜಮೀನನ್ನು ಮಂಜೂರು ಮಾಡಲಾಗಿದೆ.

ಬಂಗಾರಪೇಟೆ:

ಒAದು ಇಲಾಖಾ ಕಟ್ಟಡಕ್ಕೆ ೦.೦೬ ಎಕರೆ, ೧ ಘನತ್ಯಾಜ್ಯ ವಿಲೇವಾರಿಗಾಗಿ ೧ ಎಕರೆ, ೩ ಇಂಧನ ಇಲಾಖೆಗಾಗಿ ೪ ಎಕರೆ ೨೧ ಗುಂಟೆ ಸೇರಿದಂತೆ ಒಟ್ಟು ೫ ಎಕರೆ ೨೭ ಗುಂಟೆ ಜಮೀನು ಮಂಜೂರು ಮಾಡಲಾಗಿದೆ.

ಕೆಜಿಎಫ್:

ನಾಕ್ಕು ಸ್ಮಶಾನಕ್ಕೆ ೪.೦೪ ಎಕರೆ, ೧೧ ಪೊಲೀಸ್ ಇಲಾಖೆಗೆ ೧೪೩.೩೯ ಎಕರೆ, ೧ ಶಾಲೆ ಕಾಲೇಜಿಗೆ ೦.೨೦ ಎಕರೆ, ಕೆಐಎಡಿಬಿಗೆ ೬೬೮.೨೦ ಎಕರೆ, ನಗರಾಭಿವೃದ್ಧಿ ಇಲಾಖೆ ೨೯೪ ಎಕರೆ, ೩ ಇಂಧನ ಇಲಾಖೆಗೆ ೨೬.೧೬ ಎಕರೆ, ೫ ಇಲಾಖಾ ಕಟ್ಟಡಗಳಿಗೆ ೧೧.೨೪ ಎಕರೆ, ೧ ಕ್ರೀಡಾಂಗಣಕ್ಕಾಗಿ ೧೦ ಎಕರೆ, ಉಪ ಪ್ರಾದೇಶಿಕ ವಿe್ಞÁನ ಕೇಂದ್ರಕ್ಕೆ ೯.೩೬ ಎಕರೆ, ೨ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ೧೦ ಎಕರೆ, ೧ ನಿವೇಶನ ರಹಿತರಿಗೆ ೯.೩೬ ಎಕರೆ ಸೇರಿದಂತೆ ೧೧೮೯ ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ.

ಚಿತ್ರ. ೧೯. ಕೆ.ಎಲ್.ಆರ್. ೦೧ : ಕೋಲಾರ ಜಿಲ್ಲೆಯಲ್ಲಿ ೨೦೨೩ ಜೂನ್‌ನಿಂದ ೨೦೨೪ ನವೆಂಬರ್ ೧೬ ರವರೆವಿಗೂ ಡಿಸಿ ಅಕ್ರಂಪಾಷಾ ಆಡಳಿತದಲ್ಲಿ ವಿವಿಧ ಸಾರ್ವಜನಿಕ ಕಾರ್ಯಗಳಿಗೆ ಮಂಜೂರಾಗಿರುವ ವಿವರಗಳ ಅಂಕಿ ಅಂಶ ದಾಖಲೆಗಳನ್ನು ಬಿಡುಗಡೆ ಮಾಡಿರುವ ಪಟ್ಟಿ.