ನ್ಯೂಸ್

ಜಿಲ್ಲಾ ಸಹಕಾರ ಒಕ್ಕೂಟಕ್ಕೆ ದರ್ಶನಾಪುರ ಸಾರಥಿ

ಯಾದಗಿರಿ: ಅವಿಭಜಿತ ಕಲಬುರಗಿ ಜಿಲ್ಲೆಯಲ್ಲಿದ್ದ ಜಿಲ್ಲಾ ಸಹಕಾರ ಒಕ್ಕೂಟ ಇದೀಗ ಸ್ವತಂತ್ರವಾಗಿ ರಚನೆಯಾಗಿದ್ದು, ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಹಾಪುರದ ವಿಶ್ವನಾಥರಡ್ಡಿ ದರ್ಶನಾಪುರ, ಉಪಾಧ್ಯಕ್ಷರಾಗಿ ಎಂ.ನಾರಾಯಣ ಅವಿರೋಧ ಆಯ್ಕೆಯಾಗಿದ್ದಾರೆ.

ಯಾದಗಿರಿ ಜಿಲ್ಲೆಯಾಗಿ 13 ವರ್ಷಗಳ ನಂತರ ಸಹಕಾರ ಒಕ್ಕೂಟ ರಚನೆಯಾಗಿದೆ. ಮುಂದಿನ ದಿನಗಳಲ್ಲಿ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇಷ್ಟು ದಿನಗಳ ಕಲಬುರಗಿಯಲ್ಲಿದ್ದ ಈ ಒಕ್ಕೂಟ ಬೇರ್ಪಡಿಸಲಾಗಿದ್ದು, ಈಗಾಗಲೇ ನಿದರ್ೇಶಕರ ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ. ಈ ಒಕ್ಕೂಟಕ್ಕೆ ಸಕರ್ಾರದಿಂದ ಯಾವುದೇ ನೆರವು ಸಿಗುವುದಿಲ್ಲ. ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲೇ ಕೆಲಸ ಕಾರ್ಯಗಳು ಆಗಬೇಕಿದೆ. ಬರುವ ದಿನಗಳಲ್ಲಿ ಜಿಲ್ಲೆಯ 545 ಸಹಕಾರ ಸಂಘಗಳ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ದರ್ಶನಾಪುರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಸಹಕಾರಿ ಸಂಘಗಳ ಕಾರ್ಯದಶರ್ಿಗಳಿಗೆ ತರಬೇತಿ ನೀಡುವುದು ಸಹಕಾರ ಸಪ್ತಾಯ ಆಯೋಜನೆ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಒಕ್ಕೂಟದ ಎಲ್ಲ ನಿದರ್ೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು. ಪ್ರಮುಖರಾದ ಸುರೇಶ ಸಜ್ಜನ್, ಶರಣಪ್ಪ ಸಲಾದಪುರ ಇದ್ದರು.