2025/26ನೇ ಸಾಲಿನ ಮೈಸೂರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 10 ರಂದು ಮತ್ತು ಸೆಪ್ಟೆಂಬರ್ 11 ರಂದು ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ಇಲ್ಲಿ ನಡೆಸಲಾಗುವುದು.
ಮೈಸೂರು ಜಿಲ್ಲೆಯ 9 ತಾಲ್ಲೂಕುಗಳಲ್ಲಿ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮೈಸೂರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಪುರುಷರ ಅಥ್ಲೆಟಿಕ್ಸ್: 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ. ಓಟ, 10000 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲೀನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ. ಹರ್ಡಲ್ಸ್, 4x100 ಮೀ. ರಿಲೇ, 4x400 ಮೀ ರಿಲೇ ಇರುತ್ತದೆ.
ಮಹಿಳೆಯರ ಅಥ್ಲೆಟಿಕ್ಸ್: 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲೀನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ. ಹರ್ಡಲ್ಸ್, 4x100 ಮೀ. ರಿಲೇ, 4x400 ಮೀ. ರಿಲೇ ಇರುತ್ತದೆ.
ವಾಲಿಬಾಲ್, ಫುಟ್ಬಾಲ್, ಖೋ-ಖೋ, ಕಬಡ್ಡಿ, ಬಾಸ್ಕೆಟ್ ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್ ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಇರುತ್ತದೆ.
ಯೋಗಾಸನ (ಪಾದ ಹಸ್ತಾಸನ, ಅಕರ್ಣ ಧನುರಾಸನ, ಊರ್ದ್ವ ಧನುರಾಸನ, ಅರ್ಧ ಮತ್ಯೇಂಧ್ಯಾಸನ) ವನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತಿರುವ ಕ್ರೀಡೆಗಳ ವಿವರ ಟೆನ್ನಿಸ್ ಹಾಗೂ ನೆಟ್ ಬಾಲ್ ಈಜು (ಪುರುಷರು ಮತ್ತು ಮಹಿಳೆಯರು) 100, 200, 400 ಮೀ. ಫ್ರೀ ಸ್ಟ್ರೈಲ್, 100, 200 ಮೀ. ಬ್ಯಾಕ್ ಸ್ಟ್ರೋಕ್, 100, 200 ಮೀ. ಬ್ರೆಸ್ಟ್ ಸ್ಟ್ರೋಕ್, 100 ಮೀ. ಬಟರ್ ಫ್ಲೈ, 200 ಮೀ. ಇಂಡಿವಿಜಯಲ್ ಮಿಡ್ಲೆ, 4 x100 ಮೀ. ಫ್ರೀ ಸ್ಟ್ರೈಲ್ ರಿಲೇ ನಡೆಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ಇಲ್ಲಿನ ನೋಟೀಸ್ ಬೋರ್ಡ್ ಅಥವಾ ದೂ. ಸಂ: 0821-2564179 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.