ನ್ಯೂಸ್

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳ ಪರಿಶೀಲನೆ

ತಿ.ನರಸೀಪುರ: ಶ್ರೀ ವೀರಾಂಜನೇಯ ಧರ್ಮಜಾಗೃತಿ ಬಳಗದ ವತಿಯಿಂದ ಜು. 8 ರಂದು ಹನುಮ ಜಯಂತಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಸೀಮಾ ಲಾಟ್ಕರ್ ಪಟ್ಟಣಕ್ಕೆ ಭೇಟಿ ನೀಡಿ ಮೆರವಣಿಗೆ ನಡೆಯುವ ಸ್ಥಳ ಪರಿಶೀಲನೆ ನಡೆಸಿದರು.


ಮೆರವಣಿಗೆ ಆರಂಭವಾಗುವ ಸ್ಥಳ ಹಾಗೂ ಮೆರವಣಿಗೆ ಯಾವ ರಸ್ತೆಗಳಲ್ಲಿ ಸಂಚರಿಸುತ್ತದೆ ಎಂಬ ಮಾಹಿತಿ ಪಡೆದ ಅವರು, ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಕಲ್ಪಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಡಿಸಿ ನಂದಿನಿ, ವೃತ್ತ ನಿರೀಕ್ಷಕ ಮಹೇಶ್, ಪಿಎಸ್‌ಐ ತಿರುಮಲ್ಲೇಶ್ ಇತರರು ಇದ್ದರು.