ನ್ಯೂಸ್

ಜಿಲ್ಲಾ ಕಾಂಗ್ರೇಸ್‌ನಲ್ಲಿ ಬಣಬಡಿದಾಟ ರಾಜಕಾರಣ / ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲಾ ಕಾಂಗ್ರೇಸ್‌ನಲ್ಲಿ ಬಣ ಬಡಿದಾಟ ರಾಜಕಾರಣ ಮುಂದುವರೆದಿದ್ದು, ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಕಳೆದ ಆಗಸ್ಟ್ ೧೫ ರಂದು ನಗರದ ಫುಡ್‌ಕೋರ್ಟ್ ಉದ್ಘಾಟನೆ ವೇಳೆ ಕಾಂಗ್ರೇಸ್‌ನ ಎರಡು ಗುಂಪುಗಳ ನಡುವೆ ತಿಕ್ಕಾಟ ಉಂಟಾಗಿತ್ತು. ಭಾನುವಾರ ವೇಮಗಲ್ ಸಮೀಪದ ಬೈರಂಡಹಳ್ಳಿ ಬಳಿ ಕಾಮಗಾರಿಯೊಂದರ ಉದ್ಘಾಟನೆ ಸಂದರ್ಭದಲ್ಲಿ ಎರಡು ಬಣಗಳ ನಡುವೆ ತಿಕ್ಕಾಟ ನಡೆಯಿತು.

ಬೈರಂಡಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಿದ ಸಂದರ್ಭದಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸೀತಿ ಹೊಸೂರು ಮುರುಳಿಗೌಡ ಹಾಕಿದ ಪ್ರಶ್ನಾವಳಿಗಳು ಹತ್ತು ಹದಿನೈದು ನಿಮಿಷಗಳ ಕಾಲ ಕಿತ್ತಾಟದ ಘಟನಾವಳಿಗಳಿಗೆ ನಾಂದಿ ಹಾಡಿತು.

ಕಾಮಗಾರಿಯ ಬಗ್ಗೆ ಇಂಜಿನೀಯರ್ ಬಳಿ ಮಾಹಿತಿ ಪಡೆಯಲು ಮುಂದಾದರು. ಆಗ ತಾನೆ ಇಂಜಿನೀಯರ್ ಅಲ್ಲಿಂದ ನಿರ್ಗಮಿಸಿದ್ದರು. ನಿರ್ಮಿತಿ ಕೇಂದ್ರದ ಇಂಜಿನೀಯರ್ ಅಶ್ವಿನ್ ರವರನ್ನು ಕಾಮಗಾರಿಯ ವಿವರ ಕುರಿತು ಪ್ರಶ್ನಿಸಿದರು. ರಸ್ತೆ ಕಾಮಗಾರಿ ನಮಗೆ ಬರುವುದಿಲ್ಲ ಎಂದರು. ಇಂಜಿನೀಯರ್ ರನ್ನು ಏಕವಚನದಲ್ಲಿ ಕರೆದಿದ್ದಕ್ಕೆ ಜೊತೆಯಲ್ಲೇ ಇದ್ದ ಶಾಶಕ ಕೊತ್ತೂರು ಮಂಜುನಾಥ್ ಎಸ್ಟಿಮೇಟ್ ಮತ್ತು ಟೆಂಡರ್ ಆಗಿದೆ ಎಂದು ಉತ್ತರಿಸಿದರು. ಹಿಂದಿನಿAದ ಬಂದ ಎಂ.ಎಲ್.ಸಿ.ಅನಿಲ್‌ಕುಮಾರ್ ಏನಪ್ಪಾ ಸಮಾಚಾರ ಎಂದು ಪ್ರಶ್ನಿಸಿದರು. ವಿವರವನ್ನು ಕೇಳಬಾರದೆ ಎಂದು ಸೀತಿ ಹೊಸೂರು ಮುರಳೀಗೌಡ ಪ್ರಶ್ನಿಸಿದಾಗ ಅದನ್ನು ನಿಧಾನವಾಗಿ ಕೇಳಿ, ಏರುಧ್ವನಿಯಲ್ಲಿ ಕೇಳುವ ಅವಶ್ಯಕತೆ ಇಲ್ಲ ಎಂದಾಗ ಮಾತಿನ ಚಕಮಕಿ ನಡೆಯಿತು.

ಚುನಾವಣೆಯಲ್ಲಿ ಕಾಂಗ್ರೇಸ್‌ಗೆ ಮತ ಹಾಕಿಸಲು ಯೋಗ್ಯತೆ ಇಲ್ಲ. ಇಲ್ಲಿ ಬಂದು ಮಾತನಾಡುತ್ತಿದ್ದೀಯಾ ಎಂದು ಅನಿಲ್‌ಕುಮಾರ್ ಕಿಡಿಕಾರಿದರು. ಆ ಸಂದರ್ಭದಲ್ಲಿ ಗ್ರಾಮಸ್ಥರು ಮುರಳೀಗೌಡ ವಿರುದ್ಧ ತಿರುಗಿಬಿದ್ದು, ನಮ್ಮ ಹಳ್ಳಿಗೆ ಶಾಸಕರು ಬಂದಿರುವಾಗ ಗೌರವದಿಂದ ನಡೆಸಿಕೊಳ್ಳಬೇಕು ಎಂಬುದನ್ನು ಮರೆತು ವರ್ತಿಸುವುದು ಸರಿಯೇ? ಇಲ್ಲಿ ಕಾಂಗ್ರೆಸ್ ಎಂದು ಹೇಳಿ ಅಲ್ಲಿ ಜೆಡಿಎಸ್ ಗೆ ಓಟು ಹಾಕಿಸುವವರಿಗೆ ಪ್ರಶ್ನೆ ಮಾಡುವ ನೈತಿಕತೆ ಇಲ್ಲ. ನೀನು ಯಾವನು ಶಾಸಕರನ್ನು ಪ್ರಶ್ನಿಸಲು' ಎಂದು ಗ್ರಾಮಸ್ಥರು ಮುರಳಿಗೌಡನ ವಿರುದ್ಧ ತಿರುಗಿಬಿದ್ದರು. ಪೋಲಿಸರು ಮಧ್ಯೆ ಪ್ರವೇಶಿಸಿ ಮುರಳಿಗೌಡರನ್ನು ದೂರ ಕರೆದೊಯ್ದು ಕಾರು ಹತ್ತಿಸಿ ಕಳುಹಿಸಿಕೊಟ್ಟರು.

ವಾಸ್ತವ ಸ್ಥಿತಿಯನ್ನು ತಿಳಿದು ಮಾತನಾಡಬೇಕು.

ಕಾಂಗ್ರೇಸ್ ಪಕ್ಷದ ಉಪಾದ್ಯಕ್ಷರು ಎಂದು ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿ ಚುನಾವಣಾ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಪರವಾಗಿ ಮತ ಕೇಳಲು ಕಾಣಿಸಿಕೊಳ್ಳಲಿಲ್ಲ. ತಮ್ಮ ಗ್ರಾಮದಲ್ಲಿಯೂ ಕಾಂಗ್ರೇಸ್ ಪಕ್ಷಕ್ಕೆ ಕಡಿಮೆ ಮತ ಬಂದಿದೆ. ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡಲಿ. ಅಧಿಕಾರಿಗಳಿಗೆ ಧಮಕಿ ಹಾಕಿದಂತೆ ಮಾತನಾಡುವುದು ಸರಿಯಲ್ಲ. ಕಾಮಗಾರಿಗಳ ಬಗ್ಗೆ ವಾಸ್ತವ ಸ್ಥಿತಿಯನ್ನು ತಿಳಿದುಕೊಂಡು ಮಾತನಾಡಬೇಕು. ಕಾಮಗಾರಿಗಳ ಬಗ್ಗೆ ಅನುಮೋದನೆ ಮತ್ತು ಅನುದಾನ ಬಿಡುಗಡೆ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರು.

-ಎಂ.ಎಲ್.ಸಿ.ಅನಿಲ್‌ಕುಮಾರ್

ಆಗಸ್ಟ್ ೧೫ ರಂದು ಫುಡ್‌ಕೋರ್ಟ್ ಉದ್ಘಾಟನೆ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಸಚಿವ ಕೆ.ಹೆಚ್.ಮುನಿಯಪ್ಪನವರ ಬಣದ ನಗರಸಭೆ ಮಾಜಿ ಉಪಾಧ್ಯಕ್ಷ ಸೋಮಶೇಖರ್ ಮಧ್ಯೆ ಅನುದಾನ ವಿಷಯದಲ್ಲಿ ಜಟಾಪಟಿ ನಡೆದಿತ್ತು. ಇತ್ತೀಚೆಗೆ ಕೋಮುಲ್ ವಿಷಯದಲ್ಲಿ ಸ್ವಪಕ್ಷ ಶಾಸಕರ ಮಧ್ಯೆಯು ತಿಕ್ಕಾಟ ಮುಂದುವರೆದಿದೆ. ಆರೋಪ ಪ್ರತ್ಯಾರೋಪಗಳು ಬಹಿರಂಗವಾಗಿ ನಡೆಯುತ್ತಿವೆ.

ವಿರೋಧ ಪಕ್ಷದವರು ಮಾಡಬೇಕಾಗಿದ್ದ ಆರೋಪ ಪ್ರತ್ಯಾರೋಪಗಳನ್ನು ಸ್ವಪಕ್ಷದಲ್ಲಿಯೇ ನಡೆಯುತ್ತಿದೆ. ಜಿಲ್ಲಾ ಕಾಂಗ್ರೇಸ್‌ನಲ್ಲಿ ಬಣರಾಜಕಾರಣ ಬಡಿದಾಟ ಹಂತಕ್ಕೂ ತಲುಪುವಂತೆ ಆಗಿದೆ.

ಚಿತ್ರ ೦೧ ಕೆ.ಎಲ್.ಆರ್. ೦೨ : ವೇಮಗಲ್ ಹೋಬಳಿಯಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಎರಡು ಗುಂಪುಗಳು ಶಾಸಕ ಸಮ್ಮುಖದಲ್ಲಿ ಬಡಿದಾಟ ನಿಂತಿರುವುದು.