ನ್ಯೂಸ್

ಜಿಪ್​ಲೈನ್ ಸಾಹಸ ಚಟುವಟಿಕೆ ಅಳವಡಿಕೆಗೆ ಚಿಂತನೆ

ಫೋಟೋ:25ಕೆಡಬ್ಲುಆರ್-ಸಿ. ರವಿಶಂಕರ್

ಡಿಎಫ್​ಒ ರವಿಶಂಕರ ಸಿ. ಮಾಹಿತಿ | ತಿಮ್ಮಕ್ಕ ಸಸ್ಯೋದ್ಯಾನ ನಿರ್ವಹಣಾ ಸಮಿತಿ ಸಭೆ

ವಿಜಯವಾಣಿ ಸುದ್ದಿಜಾಲ ಕಾರವಾರ

ಪ್ರವಾಸಿಗರನ್ನು ಆಕರ್ಷಿಸಲು ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಮಕ್ಕಳ ಆಟಿಕೆ ವ್ಯವಸ್ಥೆ ಹಾಗೂ ಜಿಪ್​ಲೈನ್​ನಂತಹ ಸಾಹಸ ಚಟುವಟಿಕೆಗಳನ್ನು ಅಳವಡಿಸಲು ಯೋಜನೆ ರೂಪಿಸಲು ಚಿಂತಿಸಲಾಗುತ್ತಿದೆ ಎಂದು ಡಿಎಫ್​ಒ ರವಿಶಂಕರ ಸಿ. ತಿಳಿಸಿದರು.

ನಗರದ ಡಿಎಫ್​ಒ ಕಚೇರಿಯಲ್ಲಿ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮುದ್ರ ತೀರದಲ್ಲಿರುವ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದ ನಿರ್ವಹಣೆಗೆ ಈ ಬಾರಿ ಹೆಚ್ಚು ಅನುದಾನ ನೀಡಿರುವುದರಿಂದ ಹೊಸ ಪರಿಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸರ ಸ್ನೇಹಿ ಕುರ್ಚಿಗಳನ್ನು ಅಳವಡಿಸಲು ಚಿಂತಿಸಿದ್ದೇವೆ ಎಂದರು.

ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಸುಮಾರು 4.5 ಕೋಟಿ ವೆಚ್ಚದಲ್ಲಿ ಕೆ-ಶೋರ್ ಯೋಜನೆಯಡಿ ಸಮುದ್ರ ಜೀವಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ (ಮರೇನ್ ಫೌನಾ ರೆಸ್ಕೂŒ ಆಂಡ್ ರಿಹ್ಯಾಬಿಲಿಟೇಶನ್ ಸೆಂಟರ್) ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಕೇಂದ್ರ ಸ್ಥಾಪನೆಯಾದಲ್ಲಿ ಅಳವಿನಂಚಿನಲ್ಲಿರುವ ಜೀವಿಗಳ ಸಂರಕ್ಷಣೆ ಮತ್ತು ಅವುಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ. ಹೀಗಾಗಿ ಸಮಿತಿ ಸದಸ್ಯರ ಸಲಹೆ, ಸಹಕಾರ ಆಗತ್ಯವಾಗಿದೆ ಎಂದರು.

ಎಸಿಎಫ್ ಕೆ.ಡಿ. ನಾಯ್ಕ, ಸ್ನಾತಕೋತ್ತರ ಪದವಿ ಕೇಂದ್ರದ ಆಡಳಿತಾಧಿಕಾರಿ ಡಾ. ಶಿವಕುಮಾರ ಹರಗಿ, ಆರ್​ಎಫ್​ಒ ಗಜಾನನ ನಾಯ್ಕ, ಕರಾವಳಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಯ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಿರಣ, ಇತರರು ಉಪಸ್ಥಿತರಿದ್ದರು.