ನ್ಯೂಸ್

ಜಿಎಸ್‌ಟಿ ಪರಿಷ್ಕರಣೆಯಿಂದ ದೇಶದ ೧೪೦ ಕೋಟಿ ಜನರಿಗೆ ಅನುಕೂಲವಾಗಲಿದೆ / ಬಿಹಾರ್ ರಾಜ್ಯದಲ್ಲಿ ಕಾಂಗ್ರೇಸ್ ಸೋಲಿನ ಹತಾಶೆಯಿಂದ ಪ್ರಧಾನಿ ತಾಯಿ ಮತ್ತು ರಾಷ್ಟçಪತಿಗಳ ವಿರುದ್ಧ ಕಾಂಗ್ರೇಸ್‌ನವರು ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ / ಎಸ್.ಮುನಿಸ್ವಾಮಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಬಿಹಾರ್ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೇಸ್ ಸೋಲಿನ ಭೀತಿಯಿಂದ ಹತಾಶೆಗೊಂಡು ಕಾಂಗ್ರೇಸ್‌ನವರು ಪ್ರಧಾನಮಂತ್ರಿ ನರೇಂದ್ರ ಮೋದಿ ರವರ ತಾಯಿ ಮತ್ತು ರಾಷ್ಟçಪತಿಗಳ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೇಸ್‌ನವರು ಮಹಿಳೆಯರಿಗೆ ಅಗೌರವ ತೋರಿಸುತ್ತಿದ್ದಾರೆ. ವಿವಿಎಂ ಬೇಡ ಬ್ಯಾಲೆಟ್ ಬೇಕೆಂದು ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೇಸ್ ವಿರುದ್ಧ ಕಿಡಿಕಾರಿದರು.

ಕೇಂದ್ರ ಸರ್ಕಾರದಿಂದ ಜಿ.ಎಸ್.ಟಿ. ಸರಲೀಕರಣ ಮಾಡಿರುವ ಹಿನ್ನಲೆಯಲ್ಲಿ ಶನಿವಾರ ನಗರದ ಬಿಜೆಪಿ ಕಛೇರಿ ಮುಂಭಾಗ ಬಿಜೆಪಿ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ ನಂತರ ಮಾತನಾಡಿ, ಕೇಂದ್ರ ಸರ್ಕಾರ ದೇಶದ ಜನತೆಗೆ ಜಿಎಸ್‌ಟಿ ಸರಳೀಕರಣ ಮಾಡುವ ಮೂಲಕ ದೀಪಾವಳಿ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣ ಮಾಡಿರುವುದನ್ನು ಅನೇಕ ಪಕ್ಷಗಳು ಬೆಂಬಲ ಸೂಚಿಸಿವೆ. ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಜಿ.ಎಸ್.ಟಿ. ಗಗನಕ್ಕೇರಿತ್ತು. ಮೋದಿಯವರು ಕಡಿಮೆ ಮಾಡುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದರು. ಕೃಷಿ ಸಲಕರಣೆಗಳು, ಎಲೆಕ್ಟಾçನಿಕ್ ಸಲಕರಣೆಗಳು, ಶಿಕ್ಷಣ, ಆರೋಗ್ಯ, ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಜಿಎಸ್‌ಟಿ ಸರಳೀಕರಣ ಮಾಡಲಾಗಿದೆ.

ರಾಜಕೀಯಕ್ಕೆ ಮೊದಲು ರಾಷ್ಟç ಮೊದಲು ಎಂಬ ತತ್ವದ ಅಡಿಯಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ. ಜಿ.ಎಸ್.ಟಿ. ಸರಲೀಕರಣದ ಬಗ್ಗೆ ಜಿಲ್ಲೆಯಾದ್ಯಂತ ಜನರಿಗೆ ಜಾಗೃತಿ ಮೂಡಿಸುತ್ತೇವೆ. ದೇಶದ ಎಲ್ಲಾ ಜನಾಂಗದವರಿಗೆ ನರೇಂದ್ರ ಮೋದಿಯವರು ಹೊರೆಯಾಗದ ರೀತಿಯಲ್ಲಿ ಜಿಎಸ್‌ಟಿಯನ್ನು ಸರಳೀಕರಣ ಮಾಡಿರುವುದು ಖುಷಿ ತಂದಿದೆ ಎಂದರು.

ವಿವಿಎಂ ನ್ನು ಕಾಂಗ್ರೇಸ್ ಮಂತ್ರಿಗಳೇ ಸ್ವಾಗತಿಸುತ್ತಿದ್ದಾರೆ :

ಕಾಂಗ್ರೇಸ್ ನವರು ಗೆದ್ದಿರುವ ರಾಜ್ಯಗಳಲ್ಲಿ ವಿವಿಎಂ ಸರಿಯಿದೆ. ಗೆಲ್ಲದೇ ಇರುವ ರಾಜ್ಯದಲ್ಲಿ ವಿವಿಎಂ ಸರಿಯಿಲ್ಲ ಎಂದು ಕಾಂಗ್ರೇಸ್‌ನವರು ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೇಸ್‌ನವರು ಗೆದ್ದಿದ್ದಾರೆ. ಇಲ್ಲಿ ವಿವಿಎಂ ಸರಿಯಿಲ್ಲ ಎಂಬ ಅರ್ಥ ಅಲ್ಲವೇ? ವಿವಿಎಂ ಬದಲಾಯಿಸಿ ಬ್ಯಾಲೆಟ್ ಪೇಪರ್‌ನ್ನು ತರಬೇಕೆಂದು ಮುಂದಾಗಿದ್ದಾರೆ. ಇದು ಕಾಂಗ್ರೇಸ್‌ನವರ ಓಟ್ ಬ್ಯಾಂಕ್ ರಾಜಕಾರಣ. ಸತ್ತವರ ಹೆಸರಲ್ಲಿ ಓಟ್ ಪಡೆಯಬೇಕೆಂಬುದು ಕಾಂಗ್ರೇಸ್‌ನವರದ್ದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ಸತ್ತವರ ಹೆಸರಲ್ಲಿ ಓಟ್ ಪಡೆದಿದ್ದಾರೆ. ಅದಕ್ಕೆ ಈ ಹಿಂದೆ ಇದ್ದ ಜಿಲ್ಲಾಧಿಕಾರಿಯೇ ಹೊಣೆಗಾರರು ಎಂದು ಆರೋಪಿಸಿದರು.

ಕಾಂಗ್ರೇಸ್ ಸರ್ಕಾರದ ಗೃಹಮಂತ್ರಿ ಡಾ.ಜಿ.ಪರಮೇಶ್ವರ ರವರು ವಿವಿಎಂ ಅನ್ನು ಸ್ವಾಗತಿಸಿದ್ದಾರೆ. ಪ್ರಿಯಾಂಕ ಖರ್ಗೆಯವರ ತಂದೆ ರಾಜಕೀಯದಿಂದ ನಿವೃತ್ತಿಯಾಗುತ್ತಾರೆಂದು ತಂದೆಯ ಹೆಸರು ಪಡೆಯಲು ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಪಿಯುಸಿ ತನಕ ಓದಿರುವುದರಿಂದ ಅವರಿಗೆ ಜ್ಞಾನವೂ ಕಡಿಮೆ ಇದೆ. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಜಿಎಸ್‌ಟಿ ಸರಳೀಕರಣವನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಕೃಷಿ, ಮೆಡಿಕಲ್, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸರಳೀಕರಣ ಮಾಡಲಾಗಿದೆ. ಕಾಂಗ್ರೇಸ್ ಸೇರಿದಂತೆ ಎಲ್ಲಾ ಪಕ್ಷಗಳು ಜಿ.ಎಸ್.ಟಿ. ಸರಳೀಕರಣ ಮಾಡಿರುವುದನ್ನು ಸ್ವಾಗತಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತೆರಿಗೆ ಕಡಿಮೆ ಮಾಡಲಾಗಿದೆ ಇದರಿಂದ ಸಾಮಾನ್ಯ ವರ್ಗದವರಿಗೂ ಹೊರೆಯಾಗುವುದಿಲ್ಲ ಎಂದರು.

ಕೆ.ಜಿ.ಎಫ್. ಮಾಜಿ ಶಾಸಕ ವೈ.ಸಂಪAಗಿ ಮಾತನಾಡಿ, ವಿರೋಧ ಪಕ್ಷಗಳು ಟೀಕೆ ಮಾಡುತ್ತಲೇ ಆ ಪಕ್ಷದ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಮೌನವಾಗಿಯೂ ತಕ್ಕ ಕೆಲಸಗಳನ್ನು ಮಾಡುವ ಮೂಲಕ ವಿರೋಧಪಕ್ಷಗಳು ಇನ್ನೂ ೧೦ ವರ್ಷ ಮೇಲೇಳದಂತೆ ಮಾಡುತ್ತಿದ್ದಾರೆ. ಜಿ.ಎಸ್.ಟಿ. ಪರಿಷ್ಕರಣೆ ಜಗತ್ತಿಗೆ ಮಾದರಿಯಾಗಿದ್ದು, ಪ್ರಧಾನಿಯವರನ್ನು ಟೀಕೆ ಮಾಡುವುದು ನಮಗೆ ಶೋಭೆ ತರುವುದಿಲ್ಲ ಎಂದರು.

ಬಿಜೆಪಿ ಮುಖಂಡರಾದ ಸಿ.ಡಿ.ರಾಮಚಂದ್ರೇಗೌಡ, ಸಾ.ಮಾ.ಅನಿಲ್‌ಬಾಬು, ಮಾಧ್ಯಮ್ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಅರುಣಮ್ಮ ಮುಂತಾದವರು ಇದ್ದರು.

ಚಿತ್ರ ೦೬ ಕೆ.ಎಲ್.ಆರ್. ೦೪ : ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣ ಮಾಡಿರುವ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಕೋಲಾರದಲ್ಲಿ ವಿಜಯೋತ್ಸವ ಆಚರಣೆ.