ನ್ಯೂಸ್

ಜಿ.ಎಚ್​. ನೆನಪಿನಂಗಳ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ನವನಗರದ ಜಿ.ಎಚ್​. ರಾವೇಂದ್ರ ಪ್ರತಿಷ್ಠಾನ ವತಿಯಿಂದ ಡಿ. 25ರಂದು ಸಂಜೆ 6 ಗಂಟೆಗೆ ಇಲ್ಲಿನ ಗಾಂಧಿನಗರ ಈಶ್ವರ ದೇವಸ್ಥಾನ ಆವರಣದಲ್ಲಿನ ಸಮುದಾಯ ಭವನದಲ್ಲಿ ಜಿ.ಎಚ್​. ನೆನಪಿನಂಗಳ-2024 ಕಾರ್ಯಕ್ರಮ ಆಯೋಜಿಸಲಾಗಿದೆ.

ವೈದ್ಯ ಡಾ. ಗೋವಿಂದ ಮಣ್ಣೂರ, ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ, ಸರ್ವೋದಯ ಸಮಗ್ರ ಗ್ರಾಮೀಣಾಭಿವದ್ಧಿ ಸಂಸ್ಥೆ ಅಧ್ಯಕ್ಷ ನಾಗರಾಜ ದೇಸಾಯಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ನಾರಾಯಣ ಭಾದ್ರಿ ಅವರಿಗೆ ಜಿ.ಎಚ್​. ರಂಗ ಪುರಸ್ಕಾರ 2024 ನೀಡಿ ಗೌರವಿಸಲಾಗುವುದು. ನಂತರ ವಿದುಷಿ ಡಾ. ನವಮಿ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.