ವಿಜಯವಾಣಿ ಸುದ್ದಿಜಾಲ ಕೋಲಾರ
ಹೃದಯ ಸಂಬAಧಿ ಸಮಸ್ಯೆಗಳ ಕುರಿತು ನಿರ್ಲಕ್ಷö್ಯ ಸಲ್ಲದು. ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮೂಲಕ ಅಮೂಲ್ಯ ಜೀವ ರಕ್ಷಣೆ ಮಾಡಿಕೊಳ್ಳಿ ಎಂದು ದೇವರಾಜ ಅರಸು ವೈದ್ಯಕೀಯ ವಿವಿ ಉಪಕುಲಪತಿ ಡಾ.ವೆಂಗಮ್ಮ ತಿಳಿಸಿದರು.
ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಶ್ರೀ ಆರ್.ಎಲ್.ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್ ಟಮಕ ಹಾಗೂ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ನಗರದ ಅಂತರಗAಗೆ ರಸ್ತೆಯಲ್ಲಿನ ಜಾಲಪ್ಪ ಹೊರರೋಗಿಗಳ ಆಸ್ಪತ್ರೆಯಲ್ಲಿ ಹೃದಯ ಸಂಬAಧಿ ಸಮಸ್ಯೆಗಳಿಗೆ ಸಂಬAಧಿಸಿದAತೆ ಉಚಿತ ತಪಾಸಣಾ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ನಾವಿಂದು ವಿಶ್ವ ಹೃದಯ ದಿನದ ಅಂಗವಾಗಿ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಇದು ಸಾಮಜಿಕ ಕಾಳಜಿಯ ಪ್ರತೀಕವಾಗಿದೆ. ಇಂದು ಅಮೂಲ್ಯ ಜೀವ ರಕ್ಷನೆಗೆ ಕಾಲಕಾಲಕ್ಕೆ ತಪಾಸಣೆ ಅಗತ್ಯವಿದೆ ಮತ್ತು ನಿಮ್ಮ ಆಹಾರ ಪದ್ದತಿ ಬದಲಾವಣೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ಸಹ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆತಂಕಕಾರಿ. ನಮ್ಮ ಕಣ್ಣ ಮುಂದೆಯೇ ಇನ್ನು ಬೆಳೆದು ಅಮೂಲ್ಯ ಜೀವನ ನಡೆಸಬೇಕಾದ ಮಕ್ಕಳು ಬಲಿಯಾದರೆ ಅಂತಹ ಕುಟುಂಬದ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕುತ್ತದೆ ಎಂದರು.
ಅತಿಯಾದ ವ್ಯಾಯಾಮವೂ ಒಳ್ಳೆಯದಲ್ಲ. ನಿಯಮಿತ ವ್ಯಾಯಾಮ ಇರಲಿ. ಸ್ಟಿರಾಯ್ಡ್ನಂತಹ ಔಷಧಿ ಸೇವಿಸದಿರಿ. ಅಡುಗೆಯಲ್ಲಿ ಕೊಬ್ಬು ಹೆಚ್ಚಿರುವ ಅಡುಗೆ ಎಣ್ಣೆಗಳ ಬಳಕೆ ಕಡಿಮೆ ಮಾಡಿ. ಹಣ್ಣು, ತರಕಾರಿ ಹೆಚ್ಚು ಸೇವಿಸಿ ಎಂದು ತಿಳಿಸಿದರು.
ದೇವರಾಜ ಅರಸು ಉನ್ನತ ಶಿಕ್ಷಣ ಸಂಸ್ಥೆ ಕುಲಸಚಿವ ಡಾ.ಮುನಿನಾರಾಯಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳಿಂದ ಸಾವುಗಳು ಹೆಚ್ಚುತ್ತಿವೆ. ಅದರಲ್ಲೂ ಯುವಕರು ಇದಕ್ಕೆ ಬಲಿಯಾಗುತ್ತಿದ್ದಾರೆ. ಜಿಮ್‌ಗಳಲ್ಲಿ ದೇಹ ದಂಡಿಸುವ ಪ್ರಯತ್ನದಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಅತಿಯಾದ ಬಳಲಿಕೆ ಬೇಡ ಎಂದರು.
ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ್ ಮಾತನಾಡಿ, ರಕ್ತದೊತ್ತಡ, ಡಯಾಬಿಟೀಸ್ ಕುರಿತು ಎಚ್ಚರವಹಿಸಿ, ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿಕೊಂಡು ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಇಲ್ಲವಾದಲ್ಲಿ ಅದು ವಿವಿಧ ಸಮಸ್ಯೆಗಳಿಗೆ ಕಾರಣವಾದೀತು ಎಂದು ಎಚ್ಚರಿಸಿದರು.
ಹೃದಯ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್ ಮಾತಾನಾಡಿ, ಎಸ್.ವಿ. ಹೃದಯ ಸಂಬAಧಿ ಸಮಸ್ಯೆಗಳು, ಹೃದಯಾಘಾತವಾಗುವ ಮುನ್ನಾ ಎದುರಾಗುವ ಲಕ್ಷಣಗಳು, ಆ ಸಂದರ್ಭದಲ್ಲಿ ವಹಿಸಬೇಕಾದ ಮುನ್ನಚ್ಚರಿಕಾ ಕ್ರಮಗಳ ಕುರಿತು ರೋಗಿಗಳಿಗೆ ಅರಿವು ಮೂಡಿಸಿದರು.
ಇದೇ ಸಂದರ್ಭದಲ್ಲಿ ರಕ್ತದೊತ್ತಡ, ಜಿಆರ್‌ಎಸ್, ಇಸಿಜಿ, ಎಕೋ ಪರೀಕ್ಷೆಗಳನ್ನು ಉಚಿತವಾಗಿ ನಡೆಸಿ ರೋಗಿಗಳಿಗೆ ಮಾರ್ಗದರ್ಶನ ನೀಡಲಾಯಿತು.
ಕಾರ್ಡಿಯಾಲಜಿ ವಿಭಾಗದ ಡಾ.ಶ್ರೀನಿವಾಸ್ ಸೇರಿದಂತೆ ಜಾಲಪ್ಪ ಆಸ್ಪತ್ರೆ, ಜಾಲಪ್ಪ ನಾರಾಯಣ ಹಾರ್ಟ್ಸೆಂಟರ್‌ನ ವೈದ್ಯರು, ತಂತ್ರಜ್ಞರು, ಹಿರಿಯ, ಕಿರಿಯ ವೈದ್ಯರು ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ ೨೯ ಕೆ.ಎಲ್.ಆರ್. ೦೧ : ವಿಶ್ವ ಹೃದಯದಿನಾಚರಣೆ ಅಂಗವಾಗಿ ಆರ್.ಎಲ್.ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್ ಟಮಕ ಹಾಗೂ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ನಗರದ ಅಂತರಗAಗೆ ರಸ್ತೆಯಲ್ಲಿನ ಜಾಲಪ್ಪ ಹೊರರೋಗಿಗಳ ಆಸ್ಪತ್ರೆಯಲ್ಲಿ ಹೃದಯ ಸಂಬAಧಿ ಸಮಸ್ಯೆಗಳಿಗೆ ಸಂಬAಧಿಸಿದAತೆ ಉಚಿತ ತಪಾಸಣಾ ಶಿಬಿರಕ್ಕೆ ದೇವರಾಜ ಅರಸು ವೈದ್ಯಕೀಯ ವಿವಿ ಉಪಕುಲಪತಿ ಡಾ.ವೆಂಗಮ್ಮ ಚಾಲನೆ ನೀಡಿ ಮಾತನಾಡಿದರು.