ಬಾಳೆಹೊನ್ನೂರಿನ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಾನಪದ ಕಾರ್ಯಕ್ರಮದಲ್ಲಿ ಗ್ರಾಮೀಣ ಜಾನಪದ ಕಲಾವಿದರನ್ನು ಗೌರವಿಸಲಾಯಿತು. ಸತೀಶ್ ಅರಳೀಕೊಪ್ಪ, ಯಜ್ಞಪುರುಷಭಟ್, ಬಿ.ಎಚ್.ಕೃಷ್ಣಮೂರ್ತಿ, ಶ್ರೀನಿವಾಸ್, ಯಶೋಧಾ ಇತರರಿದ್ದರು 
ನ್ಯೂಸ್

ಜಾನಪದ ಸಾಹಿತ್ಯ ಗ್ರಾಮೀಣ ಬದುಕಿನ ಜೀವನಾಡಿ

ಬಾಳೆಹೊನ್ನೂರು: ಜಾನಪದ ಸಾಹಿತ್ಯ ಗ್ರಾಮೀಣ ಬದುಕಿನ ಜೀವನಾಡಿ. ಇಂದಿಗೂ ಕೆಲವು ಕುಟುಂಬಗಳು ಜಾನಪದ ಸಾಹಿತ್ಯದ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ ಎಂದು ಕರ್ನಾಟಕ ಜಾನಪದ ಪರಿಷತ್‌ನ ತಾಲೂಕು ಅಧ್ಯಕ್ಷ ಸತೀಶ್ ಅರಳೀಕೊಪ್ಪ ಹೇಳಿದರು.

ಪಟ್ಟಣದ ಮಾರಿಗುಡಿ ರಸ್ತೆಯ ಶ್ರೀ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ ಆವರಣದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ಯಿಂದ ದೀಪಾವಳಿ ಅಂಗವಾಗಿ ಆಯೋಜಿಸಿದ್ದ ಜಾನಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧುನಿಕತೆಯ ಭರಾಟೆಯಲ್ಲಿ ಜಾನಪದ ಸಾಹಿತ್ಯ ಮೂಲೆ ಗುಂಪಾಗುತ್ತಿದ್ದು ಕಲಾವಿದರನ್ನು ಹಾಗೂ ಜಾನಪದ ಸಾಹಿತ್ಯವನ್ನು ಉಳಿಸಿಕೊಂಡು ಬರಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸುಮಾರು 25 ವರ್ಷಗಳಿಂದ ಜಾನಪದ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್ ಮಾತನಾಡಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಲಾವಿದರನ್ನು ಮನೆಗೆ ಕರೆಯಿಸಿ ಅವರಿಂದ ಜಾನಪದ ಹಾಡುಗಳನ್ನು ಹಾಡಿಸಿ ಅವರಿಗೆ ಗೌರವಿಸುತ್ತಾ ಬಂದಿದೆ ಎಂದರು.

ಕಲಾವಿದರಾದ ಚಂದ್ರಶೇಖರ್, ಕುಮಾರ್, ಬಾಲ ಕಲಾವಿದ ದಿಯಾನ್ ಜಾನಪದ ಹಾಡುಗಾರಿಕೆಯನ್ನು ನಡೆಸಿಕೊಟ್ಟರು. ಸ್ಥಳೀಯರಾದ ಕೆ.ಜೆ.ಶ್ರೀನಿವಾಸ್, ಯಶೋಧಾ ಮತ್ತಿತರರಿದ್ದರು.