ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಅಸಂವಿಧಾನಿಕ ತುಷ್ಟೀಕರಣದ ಜಾತಿಗಣತಿಗೆ ನಮ್ಮ ವಿರೋಧವಿದೆ. ಹಾಗೂ ಕ್ರೆöÊಸ್ತ ಧರ್ಮದ ಓಲೈಕೆಗಾಗಿ ಹಿಂದೂ ಧರ್ಮದ ಬಲಿಗೆ ಮುಂದಾಗಿರುವ ರಾಜ್ಯ ಸರ್ಕಾರ ಕ್ರಮ ಸರಿಯಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.೨೨ ರಿಂದ ರಾಜ್ಯಾದ್ಯಂತ ಜಾತಿ ಗಣತಿ ನಡೆಯಲಿದೆ. ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಓಲೈಕೆಗಾಗಿ ಮುಸ್ಲೀಮರನ್ನು ಹೊರತುಪಡಿಸಿ ೧೪೧ ಜಾತಿಗಳಲ್ಲಿ ಜಾತಿ ಸಮೀಕ್ಷೆ ನಡೆಸುವ ಮೂಲಕ ಗೊಂದಲವನ್ನು ರಾಜ್ಯ ಸರ್ಕಾರ ಸೃಷ್ಟಿಮಾಡಲು ಹೊರಟಿದೆ ಎಂದು ಆರೋಪಿಸಿದರು.
ಹಿಂದೂ ಧರ್ಮದಿಂದ ಕ್ರೆöÊಸ್ತ ಧರ್ಮಕ್ಕೆ ಮತಾಂತರ ಗೊಂಡಿರುವವರನ್ನು ಗುರುತಿಸಿ ಒಕ್ಕಲಿಗ, ಕ್ರಿಶ್ಚಿಯನ್, ದಲಿತ, ಕುರುಬ, ವಾಲ್ಮೀಕಿ, ಬಲಿಜ, ವೀರಶೈವ, ಬ್ರಾಹ್ಮಣ ಕ್ರಿಶ್ಚಿಯನ್ ಹೀಗೆ ನಾನಾ ಜಾತಿಗಳನ್ನು ವಿಂಗಡಿಸುವ ಮೂಲಕ ಸಂವಿಧಾನಕ್ಕೆ ವಿರೋಧವಾಗಿ ಸಮೀಕ್ಷೆ ಮಾಡಲು ಹೊರಟು ಕ್ರೆöÊಸ್ತ ಮಿಷನರಿಯನ್ನು ಗುತ್ತಿಗೆ ಪಡೆದಂತೆ, ಹಿಂದೂ ಧರ್ಮಕ್ಕೆ ಹೊಡೆತ ನೀಡುವ ಷಡ್ಯಂತ್ರ ನಡೆಸುತ್ತಿರುವುದು ಖಂಡನೀಯವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗಿAದ ಮುಸ್ಲೀಮರನ್ನು ಓಲೈಕೆ ಮಾಡುತ್ತಿದ್ದು, ಈಗ ಸಾಲದ್ದಕ್ಕೆ ಕ್ರೆöÊಸ್ತರನ್ನು ಓಲೈಕೆಗೆ ಮುಂದಾಗಿದೆ.
ಇದಕ್ಕೆ ಎಲ್ಲ ಸಮುದಾಯಗಳ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿರುವುದಲ್ಲದೇ ಸ್ವತಃ ಕಾಂಗ್ರೆಸ್ ಪಕ್ಷದವರೇ ಟೇಬಲ್ ತಟ್ಟಿ ಅಸಮಧಾನ ಹೊರ ಹಾಕಿದ್ದಾರೆ. ಇಂತಹ ಷಡ್ಯಂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಳತ್ವವಹಿಸಿದ್ದರೆ, ಅವರ ಬೆನ್ನ ಹಿಂದೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಇದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆಂದು ಆರೋಪಿಸಿದರು.
ದಂಗೆ ಕಾಲ ದೂರವಿಲ್ಲ:
ಹಿಂದೂ ಧರ್ಮದಿಂದ ಮತಾಂತರ ಆಗಿದ್ದರೆ ಸಮೀಕ್ಷೆಯಲ್ಲಿ ಕ್ರೆöÊಸ್ತರೆಂದೇ ನಮೂದಿಸಿಕೊಳ್ಳಲಿ. ಅದನ್ನು ಬಿಟ್ಟು ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಬಲಿಜ ಕ್ರಿಶ್ಚಿಯನ್ ಎನ್ನುವುದು ಸೇರಿದಂತೆ ಇನ್ನಿತರೆ ಜಾತಿಗಳ ಹೆಸರನ್ನು ಯಾಕೆ ಬಳಕೆ ಮಾಡಬೇಕು ? ಅಲ್ಪಸಂಖ್ಯಾತರು ಯಾರೂ ಮತಾಂತರ ಆಗಿಲ್ಲವೇ ಎಂದು ಪ್ರಶ್ನಿಸಿದರು.
ಮುಸ್ಲಿಂ ಧರ್ಮದಲ್ಲಿನ ಜಾತಿಗಳವರಿಗೆ ಯಾಕೆ ಹೀಗೆ ಮಾಡುತ್ತಿಲ್ಲ. ಅಲ್ಲದೆ ಕ್ರೆöÊಸ್ತರಲ್ಲಿನ ೪೮ ಜಾತಿಗಳನ್ನು ಯಾಕೆ ಈ ರೀತಿ ಹೇಳುತ್ತಿಲ್ಲ ? ಅಂದು ಪರಕೀಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ಹಿಂದೂ ಧರ್ಮಕ್ಕೆ ಹಿಂದೂಗಳಿAದಲೇ ಇಂದು ಹೊಡೆತ ಬೀಳುತ್ತಿದ್ದು, ಕೂಡಲೇ ಈ ಎಲ್ಲದಕ್ಕೂ ಸಿಎಂ ಸಿದ್ದರಾಮಯ್ಯ ಉತ್ತರ ಕೊಡದಿದ್ದರೆ ನೇಪಾಳ, ಬಾಂಗ್ಲಾದAತೆ ದಂಗೆ ಏಳುವ ಕಾಲ ದೂರವಿಲ್ಲವೆಂದು ಎಚ್ಚರಿಕೆ ನೀಡಿದರು.
ರಾಜಕಾರಣವನ್ನು ಚುನಾವಣೆಯಲ್ಲಿ ಮಾಡಬೇಕೇ ಹೊರತು ಜನರು ಹಾಗೂ ಧರ್ಮದ ಮೇಲೆ ಮಾಡುವುದನ್ನು ಎಂದು ಎಚ್ಚರಿಕೆ ನೀಡಿದರಲ್ಲದೆ ಸಮೀಕ್ಷೆಯ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಬೇಕೆಂದು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕ, ಸಂಸದರು ಸೇರಿದಂತೆ ಎಲ್ಲರಿಗೂ ತಿಳಿಸಿದ್ದಾರೆ. ಸೆ.೨೨ರ ಸೋಮವಾರದಿಂದ ಜಿಎಸ್ಟಿ ಸರಳೀಕರಣ ಅನ್ವಯವಾಗಲಿದ್ದು, ಎಂಜಿ ರಸ್ತೆಯಲ್ಲಿ ವಿಜಯೋತ್ಸವ ಮಾಡಿ ಉಪಯೋಗದ ಬಗ್ಗೆ ತಿಳಿಸಿಕೊಡಲಾಗುವುದು ಎಂದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಜಾತಿಜನಗಣತಿ ಮಾಡುತ್ತಿರುವ ವೇಳೆ ರಾಜ್ಯ ಸರ್ಕಾರ ಮಾಡಲು ಮುಂದಾಗಿರುವುದು ಸರಿಯಲ್ಲ. ಯಾವುದೇ ಅರಿವು ಮೂಡಿಸದೆ, ಸಾರ್ವಜನಿಕ ಅಭಿಪ್ರಾಯದ ವಿರುದ್ಧವಾಗಿ ಕೆಲಸ ಮಾಡಲಾಗುತ್ತಿದ್ದು, ನವರಾತ್ರಿ ಹಬ್ಬದ ವೇಳೆ ಅನೇಕರು ಉಪವಾಸ ಇರುತ್ತಾರೆ. ಆ ವೇಳೆ ಶಿಕ್ಷಕರಿಂದ ಸಮೀಕ್ಷೆ ಕಾರ್ಯ ಮಾಡಿಸುವುದರಿಂದ ತೊಂದರೆಯಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ ಮಹೇಶ್, ಉಪಾಧ್ಯಕ್ಷ ವಿಜಯಕುಮಾರ್, ಮಹಿಳಾ ಅಧ್ಯಕ್ಷೆ ಅರುಣಮ್ಮ, ತಾಲೂಕು ಅಧ್ಯಕ್ಷ ರಾಮಚಂದ್ರ, ನಗರಾಧ್ಯಕ್ಷ ಸಾ.ಮಾ ಬಾಬು, ವಿವಿಧ ಮೋರ್ಚಾ ಅಧ್ಯಕ್ಷರಾದ ಬಾಲಾಜಿ, ತಿಮ್ಮರಾಯಪ್ಪ, ನಾಮಾಲ್ ಮಂಜು, ಮಮತಮ್ಮ, ವೆಂಕಟೇಶ್ ಮುಂತಾದವರಿದ್ದರು.
ಚಿತ್ರ ೨೧ ಕೆ.ಎಲ್.ಆರ್. ೦೮ : ಜಾತಿ ಸಮೀಕ್ಷೆ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಇದ್ದರು.