ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿಪೂಜೆ ನೆರವೇರಿಸಿದರು. ಜಯಣ್ಣ , ಮಮತಾತಮ್ಮಯ್ಯ, ಕೆ.ಕುಮಾರ್, ಕೆ.ಎಂ.ಲಕ್ಷ್ಮಣ್ ಇದ್ದರು. 
ನ್ಯೂಸ್

ಜಾತಿ ಆಧಾರದ ಮೇಲೆ ಅಭಿವೃದ್ಧಿ ಕೆಲಸ ಮಾಡಲ್ಲ

ಕಂಪಲಾಪುರ: ಜಾತಿ ಆಧಾರದ ಮೇಲೆ ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿಲ್ಲ ಎಂದು ಶಾಸಕ ಕ.ಮಹದೇವ್ ತಿಳಿಸಿದರು.


ಕಂಪಲಾಪುರ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬೀದಿಗಳಲ್ಲಿ 35 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


ಹಿಂದೆ ತಾಲೂಕಿನಲ್ಲಿ ಅಧಿಕಾರದಲ್ಲಿದ್ದವರು ಜನರ ಬಳಿ ಮತ ಪಡೆದು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಆ ಕೆಲಸಗಳನ್ನು ನಾನು ಕೇವಲ ನಾಲ್ಕು ವರ್ಷಗಳಲ್ಲಿ ಮಾಡಿದ್ದೇನೆ. ಪಿರಿಯಾಪಟ್ಟಣ ಹಾಗೂ ಕಂಪಲಾಪುರ ನನ್ನ ಎರಡು ಕಣ್ಣುಗಳಿದ್ದಂತೆ. ಆದ್ದರಿಂದಲೇ ಕಂಪಲಾಪುರಕ್ಕೆ ಹೆಚ್ಚು ಅನುದಾನ ನೀಡಿದ್ದೇನೆ ಎಂದರು.


ತಹಸೀಲ್ದಾರ್ ಕೆ.ಚಂದ್ರಮೌಳಿ , ಇಒ ಸಿ.ಆರ್.ಕೃಷ್ಣಕುಮಾರ್, ಇಂಜಿನಿಯರ್ ಮಲ್ಲಿಕಾರ್ಜುನ , ಕಂದಾಯ ನಿರೀಕ್ಷಕ ಶ್ರೀಧರ್, ಜೆಇ ಚಂದ್ರಶೇಖರ್, ತಾಲೂಕು ಜೆಡಿಎಸ್ ಉಪಾದ್ಯಕ್ಷ ಕೆ.ಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಮಂಜುನಾಥ್, ತಾ.ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ , ಉಪಾಧ್ಯಕ್ಷ ಕೆ.ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಮಮತಾ ತಮ್ಮಯ್ಯ , ಪಿಡಿಒ ಪರಮೇಶ್, ಸದಸ್ಯರಾದ ಜಾನಕಿ, ಕವಿತಾ, ನಾಗರಾಜ್, ಪ್ರತಿಭಾ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.