ಸರಗೂರು: ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕುಗಳ ಅಭಿವೃದ್ಧಿಗಾಗಿ ನಮ್ಮ ತಂದೆ ಚಿಕ್ಕಣ್ಣ ಶಾಸಕರಾಗಿದ್ದಾಗ ಶ್ರಮವಹಿಸಿದ್ದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಕೆಲಸ ಮಾಡಿದ್ದಾರೆ. ಆದ್ದರಿಂದ ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಅವರನ್ನು ಗೆಲ್ಲಿಸಬೇಕು ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಅವರ ಸಹೋದರಿಯರಾದ ಮಂಜುಳಾ, ಸುಮಾ ಗೌರಮ್ಮ ಅವರು ಪಟ್ಟಣದ ಮೂರನೇ ವಾರ್ಡಿನ ಮತದಾರರಲ್ಲಿ ಬುಧವಾರ ಮನವಿ ಮಾಡಿದರು.
ಪ.ಪಂ. ಸದಸ್ಯ ಎಸ್.ಎಲ್.ರಾಜಣ್ಣ ಮಾತನಾಡಿ, ಸರಗೂರು ತಾಲೂಕು ಎಂದು ಘೋಷಣೆಯಾಗಿ ಐದಾರು ವರ್ಷ ಕಳೆದಿದ್ದರೂ ಸರ್ಕಾರದವರು ತಾಲೂಕಿಗೆ ಅನುದಾನವನ್ನು ಕೊಡದೆ ಅಭಿವೃದ್ಥಿಯಲ್ಲಿ ಕುಂಠಿತವಾಗಿದೆ. ಹಲವು ಸರ್ಕಾರಿ ಕಚೇರಿಗಳಿಗೆ ಜಾಗ ಇದ್ದರೂ ಕಚೇರಿಗಳನ್ನು ತರುವಲ್ಲಿ ವಿಫಲವಾಗಿದೆ. ಅದಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಅವರನ್ನು ಗೆಲ್ಲಿಸಿದರೆ ಎಲ್ಲ ಕಚೇರಿಗಳನ್ನು ಸರಗೂರಿನಲ್ಲಿ ಮಾಡುತ್ತಾರೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಅವರ ಪರವಾಗಿ ಸಣ್ಣತಾಯಮ್ಮ, ಚೈತ್ರ ಸ್ವಾಮಿ, ಮಾಜಿ ತಾಪಂ ಅಧ್ಯಕ್ಷ ಎಚ್.ಹನು ನೇತೃತ್ವದಲ್ಲಿ ಪಟ್ಟಣದ ವಿವಿಧ ವಾರ್ಡಿನ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಶ್ರೀನಿವಾಸ, ಪುಟ್ಟಹನುಮಯ್ಯ, ನಾಗರಾಜು, ಅಶ್ವಥ್, ಲಕ್ಷ್ಮಣ್, ಮಾಗಳಿ, ಗುರುಪ್ರಸಾದ್, ಕಲೀಲ್, ಚಾಂದ್, ಲಕ್ಷ್ಮೀ, ಚೆನ್ನಜಮ್ಮ, ಚೆಲುವಮ್ಮ, ಪಾರ್ವತಿ, ನರಸಮ್ಮ, ದೇವಮ್ಮ, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಭಾಗಿಯಾಗಿದ್ದರು.