ನ್ಯೂಸ್

ಜಯಂತ್ಯುತ್ಸವ ಅಂಗವಾಗಿ ಮೆರವಣಿಗೆ

ಕೈವಾರ ತಾತಯ್ಯ ಜಯಂತ್ಯುತ್ಸವದ ಅಂಗವಾಗಿ ಬೈಲಕುಪ್ಪೆಯಲ್ಲಿ ಮಂಗಳವಾರ ಮೆರವಣಿಗೆ ಹೊರಟಿತು.

ಬೈಲಕುಪ್ಪೆ: ಶ್ರೀ ಯೋಗಿ ನಾರಾಯಣ ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಜಯಂತ್ಯುತ್ಸವ ಮಂಗಳವಾರ ನಡೆಯಿತು.


ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗಣಪತಿ ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸಿ ಬಳಿಕ ಅಲಂಕೃತ ತೆರೆದ ವಾಹನದಲ್ಲಿ ಚಂಡೆ ಮೇಳದೊಂದಿಗೆ ಕೈವಾರ ತಾತಯ್ಯ ಭಾವಚಿತ್ರವನ್ನು ಬಿ.ಎಂ. ರಸ್ತೆಯಲ್ಲಿ ಮೆರವಣಿಗೆ ಮೂಲಕ ಬೈಲಕುಪ್ಪೆಯಿಂದ ಕೊಪ್ಪ ಮಾರ್ಗ ಕುಶಾಲನಗರಕ್ಕೆ ತೆರಳಿತು. ಸಂಘದ ನಿರ್ದೇಶಕ ಎನ್. ಸ್ವಾಮಿ, ಸುಬ್ರಮಣ್ಯ, ನರೇಂದ್ರ, ಕಾಂತರಾಜು ಹಾಜರಿದ್ದರು.