ನ್ಯೂಸ್

ಜಮೀನು ದಾಖಲೆಗಳಿಗಾಗಿ ೧.೫ ಲಂಚ ಸ್ವೀಕರಿಸಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದ ಎಡಿಎಲ್‌ಆರ್ ನಿವೇದಿತಾ ಅಮಾನತ್ / ಭೂದಾಖಲೆಗಳ ಇಲಾಖೆ ಆಯುಕ್ತರ ಆದೇಶ

ವಿಜಯವಾಣಿ ಸುದ್ದಿಜಾಲ ಕೋಲಾರ

ಮುಳಬಾಗಿಲು ತಾಲ್ಲೂಕು ಕಚೇರಿಯ ಭೂಮಾಪನಾ ಸಹಾಯಕ ನಿರ್ದೇಶಕಿಯಾಗಿದ್ದ ನಿವೇದಿತ ಹಾಗೂ ಭೂಮಾಪಕ ಸಂದೀಪ್‌ಕುಮಾರ್ ಜಮೀನೊಂದರ ದಾಖಲೆಗಳನ್ನು ನೀಡಲು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಟ್ರಾö್ಯಪ್ ಆಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯ ಭೂಮಾಪನಾ ಕಂದಾಯ ವ್ಯವಸ್ಥೆ, ಭೂದಾಖಲೆಗಳ ಇಲಾಖೆ ಆಯುಕ್ತ ಜೆ.ಮಂಜುನಾಥ್ ಸೆ.೧೧ ರಂದು ಅಮಾನತ್‌ಗೊಳಿಸಿ ಆದೇಶಿಸಿದ್ದಾರೆ.

ಹೊಸಕೋಟೆ ತಾಲ್ಲೂಕಿನ ಬಿ.ಮಂಜುನಾಥ್ ಎಂಬುವವರು ಮುಳಬಾಗಿಲು ತಾಲ್ಲೂಕಿನ ಕಪ್ಪಲ ಮಡಗು ಗ್ರಾಮದ ಬಳಿ ಜಮೀನು ಖರೀದಿಸಿ ಅದರ ದಾಖಲೆಗಳನ್ನು ಪಡೆಯಲು ಸದರಿ ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕಿಯಾಗಿದ್ದ ನಿವೇದಿತಾ ಅವರು, ಕಳೆದ ಜೂನ್ ತಿಂಗಳಲ್ಲಿ ೨ ಲಕ್ಷ ರೂಗೆ ಬೇಡಿಕೆ ಇಟ್ಟು ೧.೫೦ ಲಕ್ಷ ರೂ ಫಲಾನುಭವಿಯಿಂದ ಪಡೆದುಕೊಳ್ಳುವ ಸಮಯದಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದ ಪ್ರಕರಣದ ಹಿನ್ನಲೆ ಭೂದಾಖಲೆಗಳ ಇಲಾಖೆ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಹೊಸಕೋಟೆ ತಾಲ್ಲೂಕಿನ ಬಿ.ಮಂಜುನಾಥ್ ನೀಡಿದ ದೂರಿನ ಹಿನ್ನಲೆಯಲ್ಲಿ ತಾಲ್ಲೂಕು ಕಚೇರಿಯಲ್ಲಿ ಹಣ ನೀಡುತ್ತಿದ್ದಂತೆ ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಧಾವಿಸುತ್ತಿದ್ದಂತೆ ಎಡಿಎಲ್‌ಆರ್ ನಿವೇದಿತಾ ಕಚೇರಿಯಿಂದ ಓಡಿ ಹೋಗಿದ್ದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರನ್ನು ಪುನಃ ಕಚೇರಿಗೆ ಕರೆತಂದು ಮಾಹಿತಿ ಸಂಗ್ರಹಿಸಿ, ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆಯಲ್ಲಿ ಆರೋಪಿ ಅಧಿಕಾರಿ ನಿವೇದಿತ ಲಂಚಕ್ಕೆ ಬೇಡಿಕೆ ಇಟ್ಟಿರುವುದು, ದೂರುದಾರರ ಕೆಲಸವನ್ನು ಬಾಕಿ ಉಳಿಸಿಕೊಂಡಿರುವುದು ಸ್ಪಷ್ಟವಾಗಿದೆ ಮತ್ತು ಹಣಕ್ಕೆ ಬೇಡಿಕೆ ಇಟ್ಟು ಭ್ರಷ್ಟಾಚಾರವೆಸಗಿರುವುದು ಕಾನೂನುಬಾಹಿರವಾಗಿದೆ ಎಂದು ತಿಳಿಸಲಾಗಿದೆ.

ಇದರ ಜತೆಗೆ ದೂರಿಗೆ ಸಂಬAಧಿಸಿದAತೆ ಹಣಕ್ಕೆ ಬೇಡಿಕೆ ಇಟ್ಟಿರುವ ಮೊಬೈಲ್ ಕರೆಗಳಲ್ಲಿನ ಧ್ವನಿಸುರುಳಿ ನಿವೇದಿತಾ ಅವರದ್ದೇ ಎಂಬುದನ್ನು ಭೂಕಂದಾಯ ಇಲಾಖೆ ಉಪನಿರ್ದೇಶಕ ಸಂಜಯ್ ದೃಢೀಕರಿಸಿರುವುದರಿಂದ ತನಿಖೆ ಸಂದರ್ಭದಲ್ಲಿ ಕಾಲ್ ಹಿಸ್ಟರಿ, ವಾಟ್ಸಪ್ ಸಂದೇಶಗಳು, ಸ್ಕಿçÃನ್ ಶಾಟ್‌ಗಳನ್ನು ಪರಿಶೀಲಿಸದ ನಂತರ ಆರೋಪ ದೃಢಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ.

ಇದೇ ಪ್ರಕರಣದಲ್ಲಿ ಭೂಮಾಪಕ ಸಂದೀಪ್ ಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿರುವುದು ದೃಢಪಟ್ಟಿರುವುದರಿಂದ ವಿಚಾರಣೆ ಕಾಯ್ದಿರಿಸಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ-೧೯೫೭ರ ನಿಯಮ ೧೦ (೧)(ಎ)ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಇಲಾಖೆಯ ಆಯುಕ್ತರಾದ ಜೆ.ಮಂಜುನಾಥ್ ನಿವೇದಿತಾ ಹಾಗೂ ಸಂದೀಪ್ ಕುಮಾರ್ ಅವರನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತ್‌ಗೊಳಿಸಿ ಆದೇಶಿಸಿದ್ದಾರೆ.

ಚಿತ್ರ ೧೨ ಕೆ.ಎಲ್.ಆರ್. ೦೭ : ನಿವೇದಿತ ಮತ್ತು ಸಂದೀಪ್‌ಕುಮಾರ್ ರವರನ್ನು ಅಮಾನತ್ತುಗೊಳಿಸಿರುವ ಅದೇಶದ ಪ್ರತಿ