ಹೊಸ ವರ್ಷಾರಂಭದಲ್ಲಿ ಹೆಂಗಳೆಯರ ನೆಚ್ಚಿನ ವಿನ್ಯಾಸದ ವಸ್ತ್ರಗಳು, ಆಭರಣಗಳನ್ನು ಒಂದೇ ಸೂರಿನಡಿ ದೊರಕಿಸುವ ಉದ್ದೇಶದಿಂದ ನಗರದ ರ‌್ಯಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್‌ನಲ್ಲಿ ಜ.8 ಮತ್ತು 9ರಂದು ಹೈ ಲೈಫ್ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದು ಆಯೋಜಕಿ ಶೌಮಿಕಾ ತಿಳಿಸಿದರು.
ಮಹಿಳಾ ಉದ್ಯಮಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ಪ್ರದರ್ಶನ ಆಯೋಜಿಸಲಾಗಿದೆ. ಪ್ರದರ್ಶನ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ಇರಲಿದ್ದು, ಸುಮಾರು 70 ಮಳಿಗೆಗಳಲ್ಲಿ ದೇಶದ ಬೇರೆ ಬೇರೆ ನಗರಗಳ ವಿಶಿಷ್ಟ ವಿನ್ಯಾಸದ ವಸ್ತ್ರಗಳು, ಆಭರಣಗಳು, ಮಕ್ಕಳ ಉಡುಪುಗಳು 100 ರೂ.ಗಳಿಂದ 20 ಸಾವಿರ ರೂ.ಗಳವರೆಗೂ ದೊರೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.