ಕ್ರೀಡಾ ಭಾರತಿ ಸಂಸ್ಥೆ ವತಿಯಿಂದ ಜ.19ರಂದು ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಕ್ರೀಡಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕ್ಷೇತ್ರೀಯ ಸಂಯೋಜಕ ಚಂದ್ರಶೇಖರ ಜಾಗೀರ್‌ದಾರ್ ತಿಳಿಸಿದರು.
ಅಂದು ಬೆಳಗ್ಗೆ 8.30ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಹೊರಡುವ ಶೋಭಾಯಾತ್ರೆ ಕ್ರೀಡಾಂಗಣ ತಲುಪಲಿದೆ. ನಂತರ ಅಲ್ಲಿ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಈ ಕ್ರೀಡಾ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಸುಮಾರು ಎರಡು ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ಶಾಲಾ ಮಕ್ಕಳಿಗೆ ವಿವಿಧ ಓಟ, ವಾಲಿಬಾಲ್, ಖೋ ಖೋ, ಬಾಸ್ಕೆಟ್‌ಬಾಲ್, ಹಾಕಿ, ಲಗೋರಿ, ಹಗ್ಗಜಗ್ಗಾಟ, ಪಥಸಂಚಲನ, ಸ್ಕೂಲ್ಬ್ಯಾಂಡ್ ಸ್ಪರ್ಧೆಗಳು ಇರಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.4ರಂದು ಬೆಳಗ್ಗೆ 8.30ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಗಣ್ಯರಿಗಾಗಿ ಲಗೋರಿ ಆಟ ನಡೆಯಲಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಡಾ.ವೈ.ಎಸ್.ಲಕ್ಷ್ಮೀಶ್, ಅಮೃತ್ ಪುರೋಹಿತ್, ಪ್ರಶಾಂತ್, ಮಹೇಂದರ್ ಪ್ರಸಾದ್ ಇದ್ದರು.