ನ್ಯೂಸ್

ಛತ್ರಕೋಡಿಹಳ್ಳಿ ಡೈರಿ ಚುನಾವಣೆ ರಾಮಕೃಷ್ಣೇಗೌಡಗೆ ತೀವ್ರ ಮುಖಭಂಗಜೆಡಿಎಸ್ ಬೆಂಬಲಿತ ವೆಂಕಟೇಶ್ ಗೌಡ ಅವಿರೋಧ ಆಯ್ಕೆ

ವಿಜಯವಾಣಿ ಸುದ್ದಿಜಾಲ ಕೋಲಾರ
ತಾಲ್ಲೂಕಿನ ಛತ್ರಕೋಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವೆಂಕಟೇಶ್ ಗೌಡ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕೋಚಿಮುಲ್ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ ಅವರಿಗೆ ತೀವ್ರ ಮುಖಭಂಗವಾಗಿದೆ.
ತಾಲೂಕಿನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಛತ್ರಕೋಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯು ಕೋಚಿಮುಲ್ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ ಅವರಿಗೆ ಪ್ರತಿಷ್ಠೆಯಾಗಿತ್ತು. ಸಂಘದ ೧೩ ಸದಸ್ಯರ ನಿರ್ದೇಶಕ ಆಡಳಿತ ಮಂಡಳಿಯಲ್ಲಿ ಕೇವಲ ೫ ಸದಸ್ಯರು ಅಷ್ಟೇ ಬೆಂಬಲ ಕೊಟ್ಟಿದ್ದರಿಂದ ಅಧ್ಯಕ್ಷ ಸ್ಥಾನಕ್ಕೂ ನಾಮಪತ್ರವು ಸಲ್ಲಿಸಲಿಲ್ಲ ನೂತನ ಅಧ್ಯಕ್ಷ ವೆಂಕಟೇಶಗೌಡ ಅವರಿಗೆ ೮ ನಿರ್ದೇಶಕರ ಬೆಂಬಲದಿAದ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಗಳು ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಕೋಚಿಮುಲ್ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ ಮತ್ತೊಮ್ಮೆ ಗ್ರಾಮದಿಂದ ಡೇರಿ ಅಧ್ಯಕ್ಷರಾಗಿ ಆಯ್ಕೆಯಾಗಿ ಕೋಚಿಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಲಿಕ್ಕೆ ಪ್ರಯತ್ನಪಟ್ಟಿದ್ದರು. ಆದರೆ ಡೇರಿ ಚುನಾವಣೆಯಲ್ಲಿ ತಮಗೆ ಬೆಂಬಲ ಸಿಗದ ಕಾರಣ ಅವರ ಕೋಚಿಮುಲ್ ನಿರ್ದೇಶಕ ಸ್ಥಾನದ ಕನಸು ನುಚ್ಚು ನೂರಾಯಿತು. ಇದರಿಂದ ಛತ್ರಕೋಡಿಹಳ್ಳಿ ಡೇರಿ ನಿರ್ದೇಶಕ ಸ್ಥಾನಕ್ಕೂ ಅವರು ಮತ್ತು ಅವರ ಬೆಂಬಲಿತ ನಿರ್ದೇಶಕರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟೇಶ್‌ಗೌಡ ಮತ್ತು ಏಳು ಜನ ನಿರ್ದೇಶಕರನ್ನು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅಭಿನಂದನೆ ಸಲ್ಲಿಸಿ ಮಾತನಾಡಿ, ನೂತನ ಆಡಳಿತ ಮಂಡಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಕೋಚಿಮೂಲ್ ನಿಂದ ಸಿಗುವ ಸೌಲಭ್ಯಗಳನ್ನ ಹಾಲು ಉತ್ಪಾದಕರಿಗೆ ಒದಗಿಸಿಕೊಡಬೇಕೆಂದು ಹೇಳಿದರು.
ಛತ್ರಕೋಡಿಹಳ್ಳಿ ಡೇರಿ ನಿರ್ದೇಶಕರಾದ ಸೊಣ್ಣಪ್ಪ, ಗೋವಿಂದಪ್ಪ, ಆನಂದ್, ಚಂದ್ರಶೇಖರ್, ಸುಮಿತ್ರಮ್ಮ, ಶೈಲಜಾ, ಪೇಟೆಚಾಮನಹಳ್ಳಿ ನಾಗರಾಜಸಿಂಗ್, ಸೇರಿದಂತೆ ಗ್ರಾಮಸ್ಥರು ಜೆಡಿಎಸ್ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

ಚಿತ್ರ ೦೫ ಕೆ.ಎಲ್.ಆರ್. ೦೫ : ಛತ್ರಕೋಡಿಹಳ್ಳಿ ಡೈರಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ವೆಂಕಟೇಶಗೌಡ ಅವಿರೋಧವಾಗಿ ಆಯ್ಕೆಯಾಗಿರುವುದು. ಜೆ.ಡಿ.ಎಸ್.ಮುಖಂಡ ಸಿ.ಎಂ.ಆರ್.ಶ್ರೀನಾಥ್ ನೂತನ ಅಧ್ಯಕ್ಷರನ್ನು ಅಭಿನಂದಿಸುತ್ತಿರುವುದು.