ಎನ್.ಆರ್.ಪುರ: ಪಟ್ಟಣದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚೈತನ್ಯ ಯುವಕ ಸಂಘದಿಂದ ಪ್ರತಿಷ್ಠಾಪಿಸಿದ್ದ ತಿರುಪತಿ ತಿಮ್ಮಪ್ಪನ ಮಾದರಿಯ ಗಣಪತಿಯನ್ನು ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು. ಗಣಪತಿಯನ್ನು ಸಾರೋಟ್ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ದಾರಿಯುದ್ದಕ್ಕೂ ನೂರಾರು ಯುವಕರು ಗೀತೆಗಳಿಗೆ ನೃತ್ಯ ಮಾಡಿ, ಕುಣಿದು ಕುಪ್ಪಳಿಸಿದರು. ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ಗಣಪತಿಯನ್ನು ಮೆಣಸೂರು ಭದ್ರಾ ಹಿನ್ನೀರಿನಲ್ಲಿ ಜಲಸ್ತಂಭನಗೊಳಿಸಲಾಯಿತು. ಸಮಿತಿ ಅಧ್ಯಕ್ಷ ಉಮೇಶ್, ಪ್ರಶಾಂತ್ ಎಲ್. ಶೆಟ್ಟಿ, ಶಿವಪಾಂಡೆ, ಮಧು, ಗಿರಿ, ಹರೀಶ, ಪ್ರಭು, ಶ್ರೀಧರಪಾನಿ, ರಾಕೇಶ್, ಯಶವಂತ್, ಸಾಗರ್, ಉದಯ, ನಾಚಿಮುತ್ತು, ಮೋನಿ, ಸಂತೋಷ್, ಮಂಜುನಾಥ್, ರವಿ, ಶ್ರೀಕಾಂತ್, ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.