ಕಡೂರು ತಾಲೂಕಿನ ಮಲ್ಲೇಶ್ವರದ ಬಾಬು ಜಗಜೀವನರಾಮ್ ಭವನದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಚಿಕ್ಕಮಗಳೂರಿನ ಪ್ರತಿಧ್ವನಿ ಪ್ರಕಾಶನದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಬಾಂಬೆ ತೆಂಗು ಕವಿತೆಗಳ ಸಂಗ್ರಹ ಪುಸ್ತಕ ಬಿಡುಗಡೆಗೊಳಿಸಲಾಯಿತು. ಭಂಡಾರಿ ಶ್ರೀನಿವಾಸ್, ಶೂದ್ರ ಶ್ರೀನಿವಾಸ್, ಎಂ.ಜಿ.ಆರ್.ಅರಸ್ ಸತೀಶ್, ಎಂ.ಆರ್.ಪ್ರಕಾಶ್, ಹಿರೇನಲ್ಲೂರು ಶಿವು ಮತ್ತಿತರರಿದ್ದರು.  
ನ್ಯೂಸ್

ಚುಟುಕು ಸಾಹಿತ್ಯದಲ್ಲಿ ಬದುಕಿನ ಸಾರಾಂಶ

ಕಡೂರು: ಚುಟುಕು ಸಾಹಿತ್ಯ ಚಿಕ್ಕದಾದರೂ ಅದರ ಒಳಗಿನ ಸಾರಾಂಶ ಬದುಕಿನ ಅರ್ಥಪೂರ್ಣತೆಯಿಂದ ಒಳಗೊಂಡಿರುತ್ತದೆ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಮಲ್ಲೇಶ್ವರದ ಜಗಜೀವನ್ ರಾಮ್ ಭವನದಲ್ಲಿ ಭಾನುವಾರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಚಿಕ್ಕಮಗಳೂರಿನ ಪ್ರತಿಧ್ವನಿ ಪ್ರಕಾಶನದ ಸಹಯೋಗದಲ್ಲಿ ಏರ್ಪಡಿಸಿದ್ದ

ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆಯ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಹಿರೇನಲ್ಲೂರು ಶಿವು ಮಾತನಾಡಿ, ಸೃಜನಶೀಲ ಸಾಹಿತ್ಯದ ಕಡೆ ಆಸಕ್ತಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಮನಸ್ಸಿನ ಭಾವನೆಗಳನ್ನು ತಮ್ಮದೇ ಶೈಲಿಯಲ್ಲಿ

ಕವಿತಾರೂಪಕ್ಕಿಳಿಸಿರುವ ರವೀಶ್ ಅವರ ಸಾಹಿತ್ಯ ಕೃಷಿ ಮತ್ತಷ್ಟು ಸಾಹಿತ್ಯ ರಚನೆಗೆ ಸ್ಫೂರ್ತಿಯಾಗಲಿ ಎಂದರು.

ಬೀರೂರು ರವೀಶ್ ರಚಿಸಿರುವ ಬಾಂಬೆ ತೆಂಗು ಕವಿತೆಗಳ ಸಂಗ್ರಹ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಚುಟುಕು ಸಾಹಿತ್ಯ ಪರಿಷತ್‌ನ ಕೇಂದ್ರ ಘಟಕದ ಎಂ.ಜಿ.ಆರ್.ಅರಸ್

ಕಾರ್ಯಕ್ರಮ ಉದ್ಘಾಟಿಸಿದರು. ಶೂದ್ರ ಶ್ರೀನಿವಾಸ್, ಬಿಳಿಗಿರಿ ವಿಜಯ ಕುಮಾರ್, ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪ್ರಕಾಶ್. ಹಿರೇನಲ್ಲೂರು ಶ್ರೀನಿವಾಸ್, ಶರಣ ಸಾಹಿತ್ಯ ಪರಿಷತ್

ಅಧ್ಯಕ್ಷ ಕೆ.ವಿರುಪಾಕ್ಷಪ್ಪ ಮತ್ತಿತರಿದ್ದರು.