ವಿಜಯವಾಣಿ ಸುದ್ದಿಜಾಲ ಕೋಲಾರ
ಗ್ರಾಹಕರ ಸೋಗಿನಲ್ಲಿ ಬಂಗಾರ ಖರೀದಿಸುವುದಾಗಿ ಬಂದು ಆಭರಣವನ್ನು ದೋಚಿದ ಇಬ್ಬರು ಮಹಿಳೆಯರನ್ನು ನಗರ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿAದ ೬ ಲಕ್ಷ ರೂ.ಗಳ ಮೌಲ್ಯದ ೫೦ ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಎಂ.ಜಿ.ರಸ್ತೆಯ ರಾಜೇಶ್ ಜ್ಯೂವೆರ‍್ಸ್ ರಲ್ಲಿ ಸೆ.೨೫ ರಂದು ಮಧ್ಯಾಹ್ನ ಇಬ್ಬರು ಮಹಿಳೆಯರು ಗ್ರಾಹಕರ ಸೋಗಿನಲ್ಲಿ ಬಂದು ಆಭರಣವನ್ನು ವೀಕ್ಷಿಸುವಂತೆ ನಟಿಸಿ ೫೦ ಗ್ರಾಂ ಚಿನ್ನದ ಸರವನ್ನು ಎಗರಿಸಿದ್ದರು.
ಅಂಗಡಿ ಮಾಲೀಕ ಆನಂದ್‌ಕುಮಾರ್ ಅ.೮ ರಂದು ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ನಗರ ಪೋಲಿಸ್ ಠಾಣೆಯ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ಸಿಸಿ ಟಿವಿಯ ದೃಶ್ಯಾವಳಿಯನ್ನು ದಾಖಲಿಸಿಕೊಂಡು ಆರೋಪಿಗಳಾದ ವಕ್ಕಲೇರಿ ಹೋಬಳಿಯ ಮದ್ದೇರಿ ಗ್ರಾಮದ ಎಂ.ಮಮತ (೩೦) ನಾರಾಯಣಮ್ಮ (೭೦) ಎಂಬುವವರನ್ನು ಬಂಧಿಸಿ ಅವರಿಂದ ೬ ಲಕ್ಷ ಮೌಲ್ಯದ ೫೦ ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳಿಬ್ಬರು ತಾತ್ಕಾಲಿಕವಾಗಿ ಹೊಸಕೋಟೆ ಪಟ್ಟಣದ ದೊಡ್ಡಗಟ್ಟಿಗನಪ್ಪೆ ರಸ್ತೆಯ ಆನಂದಶ್ರೀ ಕಲ್ಯಾಣ ಮಂಟಪದ ಹತ್ತಿರ ವಾಸಿಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಸೈಯದ್ ಖಾಸಿಂ ಹಾಗೂ ಸಿಬ್ಬಂದಿಗಳಾದ ಮೋಹನ್, ಆರ್.ನಾರಾಯಣಸ್ವಾಮಿ, ಶ್ರೀನಾಥ್, ಮೆಹಬೂಬ್ ಪಾಷ, ಶ್ಯಾಮ್‌ಮೂರ್ತಿ, ಗಂಗಾಧರ್, ಮುರಳೀಶ್ರೀನಾಥ್, ಅರ್ಚನ, ಮಮತ ಮತ್ತು ಲಾವಣ್ಯ ವಹಿಸಿದ್ದರು.
ಚಿತ್ರ ೧೨ ಕೆ.ಎಲ್.ಆರ್. ೦೫ : ಮಮತ ಮಹಿಳಾ ಆರೋಪಿ ಭಾವಚಿತ್ರ
ಚಿತ್ರ ೧೨ ಕೆ.ಎಲ್.ಆರ್. ೦೫ಎ : ನಾರಾಯಣಮ್ಮ ಮಹಿಳಾ ಆರೋಪಿ ಭಾವಚಿತ್ರ