ನ್ಯೂಸ್

ಚಿತ್ರಸ್ಪರ್ಧೆ ಮೂಲಕ ಪರಿಸರ ರಕ್ಷಣೆ ಜಾಗೃತಿ; ವಿಜಯವಾಣಿ ಕಾರ್ಯಕ್ಕೆ ಎಸಿಎ್ ಸಯ್ಯದ್ ನಿಜಾಮುದ್ದೀನ್ ಮೆಚ್ಚುಗೆ

ರಾಮನಗರ: ಚಿತ್ರಕಲಾ ಸ್ಪರ್ಧೆಯ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುತ್ತಿರುವ ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿಯ ಕಾರ್ಯ ಶ್ಲಾನೀಯ ಎಂದು ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಯ್ಯದ್ ನಿಜಾಮುದ್ದೀನ್ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ನಗರದ ಶಾಂತಿನಿಕೇತನ ಸಮೂಹ ವಿದ್ಯಾಸಂಸ್ಥೆಗಳ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟಿಸಿ ವಾತನಾಡಿದರು.

1600ರ ಇಸವಿಯ ಹಿಂದೆ ವಿಶ್ವದೆಲ್ಲೆಡೆ ಕೃಷಿ ಪ್ರಧಾನ ಜೀವನ ಇತ್ತು. ಈ ನಡುವೆಯೂ ಪರಿಸರದ ನಾಶದಿಂದಾಗಿ ಸಾಕಷ್ಟು ಪ್ರಾಕೃತಿಕ ಅಸಮತೋಲನ ಉಂಟಾಗಿತ್ತು. ಇದರಿಂದಾಗಿ ವಾತಾವರಣದಲ್ಲಿ ಏರುಪೇರಾದ ಕಾರಣ ಹಲವು ಸಮಸ್ಯೆಗಳು ಉಂಟಾಗಿದ್ದವು. ಈ ಕಾರಣದಿಂದಾಗಿ ಜಗತ್ತಿನ ವಿವಿಧ ದೇಶಗಳ ನಾಯಕರು ಒಂದೆಡೆ ಸೇರಿ ಪರಿಸರ ಉಳಿಸಲು ಪಣತೊಟ್ಟ ದಿನವೇ ವಿಶ್ವ ಪರಿಸರ ದಿನಾಚರಣೆ. ಅಂದಿನಿಂದ ಇಂದಿನವರೆಗೂ ಪರಿಸರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಚಿತ್ರಕಲಾ ಸ್ಪರ್ಧೆಯ ಮೂಲಕ ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಪತ್ರಿಕೆಗೆ ಇಲಾಖೆಯ ವತಿಯಿಂದ ಧನ್ಯವಾದ ಅರ್ಪಿಸಿದರು.

ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಕುವಾರಸ್ವಾಮಿ ವಾತನಾಡಿ, ವಿಜಯವಾಣಿ ಪತ್ರಿಕೆ ರಾಜ್ಯದ ಜವಾಬ್ದಾರಿಯುತ ವಾಧ್ಯಮ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಸರದ ಅಳಿವು ಉಳಿವು ಮಕ್ಕಳಿದಿಂದ ವಾತ್ರ ಸಾಧ್ಯ. ಈ ಮಕ್ಕಳಲ್ಲಿ ಪರಿಸರದ ಕಾಳಜಿ ಮೂಡಿಸಲು ನಮ್ಮ ಶಾಲೆಯಲ್ಲಿ ಪತ್ರಿಕೆ ಈ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಈ ಕಾರಣಕ್ಕೆ ಸಂಸ್ಥೆಯ ವತಿಯಿಂದ ವಿಜಯವಾಣಿ ಬಳಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪರಿಸರ ಪ್ರಜ್ಞೆ ಮೂಡದಿದ್ದರೆ ಉಳಿಗಾಲವಿಲ್ಲ: ಕ್ಷೇತ್ರ ಶಿಕ್ಷಣಾಧಿಕಾರಿ ಕುವಾರಸ್ವಾಮಿ ವಾತನಾಡಿ, ಪ್ರತಿಯೊಬ್ಬ ನಾಗರಿಕರಲ್ಲಿ ಪರಿಸರ ಪ್ರಜ್ಞೆ ಮೂಡದಿದ್ದರೆ ವಾನವ ಸಂಕುಲಕ್ಕೆ ಉಳಿಗಾಲವಿಲ್ಲ. ನಗರೀಕರಣ ಸೇರಿ ಇತರ ಕಾರಣಗಳಿಂದ ವಾತಾವರಣ ಸಾಕಷ್ಟು ಕಲುಷಿತಗೊಳ್ಳುತ್ತಿದೆ. ಪರಿಸರ ನಾಶದಿಂದ ಹಲವು ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ. ಪ್ರಸುತ್ತ ಪರಿಸರ ಸಂರಕ್ಷಣೆ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ವಾನವನ ಅತಿಯಾದ ಆಸೆಯಿಂದ ಪರಿಸರ ನಾಶವಾಗುತ್ತಿದೆ. ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ಕಡಿಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಪರಿಸರಕ್ಕೆ ಗಂಡಾಂತರ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿಜಯವಾಣಿ ಪತ್ರಿಕೆ ಪರಿಸರ ಕಾಳಜಿಯ ಉದ್ದೇಶವನ್ನಿಟ್ಟುಕೊಂಡು ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಮಕ್ಕಳಿಗೆ ಇದು ಕೇವಲ ಸ್ಪರ್ಧೆಯಷ್ಟೇ ಅಲ್ಲ, ಪರಿಸರ ಕಾಳಜಿ ಮೂಡಿಸುವ ಮಹತ್ತರವಾದ ಕಾರ್ಯಕ್ರಮ ಎಂದು ಬಣ್ಣಿಸಿದರು.

ಎರಡು ವಿಭಾಗದಲ್ಲಿ 400 ವಿದ್ಯಾರ್ಥಿಗಳು ಭಾಗಿ:  ಒಂದೆಡೆ ಕೂತಿದ್ದ ಮಕ್ಕಳಲ್ಲಿ ಏನು ಬರೆಯಬೇಕು, ಹೇಗೆ ಚಿತ್ರ ಬಿಡಿಸಬೇಕು? ಹೀಗೆ ನಾನಾ ತರದ ಚರ್ಚೆಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಅಯ್ಯೋ ಈಗಾಗಲೇ ಸಮಯವಾಗಿದೆ, ರಿಜಿಸ್ಟ್ರೇಷನ್ ಆಗುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿಯೇ ಸ್ಪರ್ಧಾ ಕೇಂದ್ರಕ್ಕೆ ಓಡೋಡಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ನೋಂದಣಿ ಆಗುತ್ತಿದ್ದಂತೆ ಮುಖದಲ್ಲಿ ಮಂದಹಾಸ. ಇಂತಹ ವಿಭಿನ್ನ ಕ್ಷಣಗಳಿಗೆ ಸಾಕ್ಷಿ ಆಗಿದ್ದು, ರಾಮನಗರದ ಶಾಂತಿನಿಕೇತನ ಶಾಲೆ ಆವರಣ.

ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಮಕ್ಕಳು ಅತ್ಯುತ್ಸಾಹದಲ್ಲಿ ಪಾಲ್ಗೊಂಡು ಇಡೀ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ನೂರಾರು ವಿದ್ಯಾರ್ಥಿಗಳು ಭಾಗಿ: ಎರಡು ವಿಭಾಗಗಳಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. 2-6ನೇ ತರಗತಿವರೆಗೆ ಜೂನಿಯರ್ ವಿಭಾಗದಲ್ಲಿ ಪರಿಸರ ಸಂರಕ್ಷಣೆ ಹಾಗೂ 7-9ನೇ ತರಗತಿ ವಿದ್ಯಾರ್ಥಿಗಳಿಗೆ ಸೀನಿಯರ್ ವಿಭಾಗದಲ್ಲಿ ಜಾಗತಿಕ ತಾಪಮಾನ ವಿಷಯವಾಗಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗೆ ಕೇವಲ ನಗರ ಪ್ರದೇಶದ ಮಕ್ಕಳ ಶಾಲೆಗಳ ಹೊರತಾಗಿ, ಮಾಗಡಿ ಮತ್ತು ಕನಕಪುರ ತಾಲೂಕಿನ ಗಡಿ ಭಾಗದ ಹಳ್ಳಿಗಳ ಸರ್ಕಾರಿ ಶಾಲೆಗಳ ಮಕ್ಕಳೂ ಸ್ಪರ್ಧೆಯಲ್ಲಿ ಪಾಲ್ಗೊಂಡು ಇಡೀ ಕಾರ್ಯಕ್ರಮಕ್ಕೆ ಮೆರುಗು ತಂದರು. ಎರಡೂ ವಿಭಾಗಗಳಲ್ಲಿ ಒಟ್ಟು 400 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ನೆರವು ನೀಡಿದವರು: ಇಡೀ ಕಾರ್ಯಕ್ರಮದ ಯಶಸ್ಸಿಗೆ ಅರಣ್ಯ ಇಲಾಖೆ ಪ್ರಾದೇಶಿಕ ವಿಭಾಗ, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಕೈಜೋಡಿಸಿತ್ತು. ಇದರ ಜತೆಗೆ ಶಾಂತಿನಿಕೇತನ ಸಂಸ್ಥೆಯ ರೋಟರ‌್ಯಾಕ್ಟ್ ಸಂಸ್ಥೆ ಸದಸ್ಯರು, ಆರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ನೇತೃತ್ವದ ಸಿಬ್ಬಂದಿ ಕಾರ್ಯಕ್ರಮದುದ್ದಕ್ಕೂ ಇದ್ದು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು ಕಾರ್ಯಕ್ರಮ ಯಶಸ್ವಿಗೆ ಕಾರಣವಾಯಿತು. ಇದರ ಜತೆಗೆ ಗಣೇಶ್ ಜೂವೆಲರ್ಸ್‌ ಸಹ ಮಕ್ಕಳಿಗೆ ಬಿಸ್ಕೆಟ್ ಕೊಡಿಸುವ ಮೂಲಕ ವಿಜಯವಾಣಿ ಕಾರ್ಯದಲ್ಲಿ ಕೈಜೋಡಿಸಿದರು.