ಎಚ್.ಡಿ.ಕೋಟೆಯ ತಾಲೂಕು ಆಡಳಿತ ಸೌಧದ ಆವರಣದಲ್ಲಿ ದಸಂಸ ಅಂಬೇಡ್ಕರ್ ವಾದ ಸಂಘಟನೆ ಕಾರ್ಯಕರ್ತರು ಉಪ ತಹಸೀಲ್ದಾರ್ ಮಹೇಶ್ ಅವರಿಗೆ ಮನವಿ ಸಲ್ಲಿಸಿದರು. ಸಣ್ಣಕುಮಾರ್, ಮಟಕೆರೆ ಮಹೇಶ್, ಕಾಳಪ್ಪಾಜಿ, ರವಿ ಜಿ.ಜಿ ಕಾಲೋನಿ, ಸಮೀಉಲ್ಲಾ, ರಾಚಪ್ಪ, ಹೈರಿಗೆ ಕುಮಾರ, ಬೆಳ್ತೂರು ಮಂಜ ಇದ್ದರು. 
ನ್ಯೂಸ್

ಚಿತ್ರನಟ ಉಪೇಂದ್ರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಎಚ್.ಡಿ.ಕೋಟೆ: ಚಿತ್ರನಟ ಉಪೇಂದ್ರ ಅವರನ್ನು ಬಂಧಿಸುವಂತ್ತೆ ಒತ್ತಾಯಿಸಿ ದಸಂಸ ಅಂಬೇಡ್ಕರ್ ವಾದ ಸಂಘಟನೆಯ ಹೋರಾಟಗಾರರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಆಡಳಿತಸೌಧ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಉಪೇಂದ್ರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಅವರು ಶೋಷಿತ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ತಾಲೂಕು ಸಂಚಾಲಕ ಸಣ್ಣಕುಮಾರ್ ಮಾತನಾಡಿ, ಹೊಲೆಯ ಎಂಬ ಪದ ಬಳಸಬಾರದು ಎಂದು ಸಂವಿಧಾನದಲ್ಲಿ ಇದೆ. ಆದರೂ ಉಪೇಂದ್ರ ಬಳಕೆ ಮಾಡಿ ಶೋಷಿತ ಸಮುದಾಯಗಳ ಮನಸ್ಸಿಗೆ ಧಕ್ಕೆ ಉಂಟು ಮಾಡಿದ್ದಾರೆ. ಯಾವುದೇ ವ್ಯಕ್ತಿ ಇಂತಹ ಪದ ಬಳಸಿದರೆ ಅಂತಹವರ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ವರ್ಗದ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಬೇಕೆಂದು ಕಾನೂನು ಇದೆ. ಅಲ್ಲದೆ ಬೆಂಗಳೂರಿನ ಚೆನ್ನಮ್ಮ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಉಪೇಂದ್ರ ವಿರುದ್ಧ ದೂರು ದಾಖಲಾಗಿರುವ ಪ್ರಕರಣಕ್ಕೆ ನ್ಯಾಯಾಲಯವು ತಡೆ ನೀಡಿರುವುದು ಬಹುಸಂಖ್ಯಾತ ದಲಿತ ಸಮುದಾಯದಕ್ಕೆ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಫ್‌ಐಆರ್‌ಗೆ ಉಪೇಂದ್ರ ತಡೆಯಾಜ್ಞೆ ತಂದು ಅನ್ಯಾಯದ ಅನುಮಾನಕ್ಕೆ ಎಡೆ ಬಿಚ್ಚಿ ಬುಸುಗುಟ್ಟಿದ ಪಡೆ ಎಂದು ಟ್ವೀಟ್ ಮಾಡುವ ಮೂಲಕ ಮತ್ತೆ ಸಮುದಾಯವನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ. ಆದರಿಂದ ಸರ್ಕಾರ ಕೂಡಲೇ ಉಪೇಂದ್ರ ಅವರನ್ನು ಬಂಧಿಸಿ ಜೈಲಿಗೆ ಕಳಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದುಎಂದು ಎಚ್ಚರಿಕೆ ನೀಡಿದರು.

ನಂತರ ಉಪೇಂದ್ರ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ಉಪ ತಹಸೀಲ್ದಾರ್ ಮಹೇಶ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಸಂಘಟನಾ ಸಂಚಾಲಕರಾದ ಮಟಕೆರೆ ಮಹೇಶ್, ಕಾಳಪ್ಪಾಜಿ, ರವಿ ಜಿ.ಜಿ ಕಾಲೋನಿ, ಸಮೀಉಲ್ಲಾ, ರಾಚಪ್ಪ, ಹೈರಿಗೆ ಕುಮಾರ, ಬೆಳ್ತೂರು ಮಂಜ, ಟೌನ್ ಸಂಚಾಲಕ ದೊರೆಸ್ವಾಮಿ, ಸರಗೂರು ತಾಲೂಕು ಸಂಚಾಲಕ ಗೋವಿಂದರಾಜು, ಕೂಲ್ಯ ಮಹೇಶ್, ಮಟಕೆರೆ ಕೃಷ್ಣ, ಪ್ರಕಾಶ್ ಗ್ಯಾಸ್, ಶಿವಪ್ಪ ಶಿರಮಳ್ಳಿ, ಚಲುವರಾಜು, ಮಾದಮ್ಮ, ಮೀನಾಕ್ಷಿ, ಉದಯ, ಶಿವು, ತಿಮ್ಮರಾಜು, ಮಂಜೇಗೌಡ, ಉಮೇಶ್, ಕಾಳ, ಕುಳ್ಳ ಇದ್ದರು.