ನ್ಯೂಸ್

ಚಿತ್ರದುರ್ಗದಲ್ಲಿ ನಾತಪಂಥ ಜೋಗಿ ಮಠ ಸ್ಥಾಪನೆಗೆ ಚಿಂತನೆ

ಚಿತ್ರದುರ್ಗ: ಜೋಗಿ ಸಮಾಜದ ಸಂಘಟಿಸಿ ಸಮುದಾಯವನ್ನು ಶೈಕ್ಷಣಿಕ,ರಾಜಕೀಯವಾಗಿ ಮುಖ್ಯವಾಹಿನಿ ತರುವ ಉದ್ದೇಶದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ನಾತಪಂಥ ಜೋಗಿ ಸಂಸ್ಥಾನ ಮಠ ಸ್ಥಾಪಿಸುವ ಚಿಂತನ ಇದೆ ಎಂದು ಅಖಿಲ ಕರ್ನಾಟಕ ಜೋಗಿ ಮಹಾಮಂಡಳದ ಅಧ್ಯಕ್ಷ ಶಿವಾಜಿ ಮಧುಕರ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ,ಶ್ರೀ ಮಠ ಸ್ಥಾಪನೆಯಿಂದ ಸಮಾಜದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಐಎಎಸ್,ಕೆಎಎಸ್‌ನಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನೆರ ವಾಗುತ್ತದೆ. ರಾಜ್ಯದ ಜೋಗಿ ಸಮಾಜದ 27ಉಪಜಾತಿಳನ್ನು ಒಗ್ಗೂಡಿಸಿ ಸಮಾಜದ ಕಟ್ಟಕಡೆ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಮಠ ಸ್ಥಾಪಿಸುವ ಅಗತ್ಯವಿದೆ ಎಂದರು.

ಜಿಲ್ಲಾಧ್ಯಕ್ಷ ಡಾ.ಜಗದೀಶ್ ಮಾತನಾಡಿ,ಶ್ರೀಮಠಕ್ಕಾಗಿ ತಾವು ಒಂದು ಎಕರೆ ಜಮೀನು ಕೊಡುವುದಾಗಿ ಹೇಳಿದರು.ಪ್ರೊ.ಚಂದ್ರಪ್ಪ, ವಕೀಲ ಪ್ರತಾಪ್‌ಜೋಗಿ,ಮಹಾಮಂಡಳದ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಕುಮಾರಸ್ವಾಮಿ ಮಾತನಾಡಿದರು. ಕುಂದಾಪುರ ರಮೇಶ್,ತು ಮಕೂರಿನ ಶಿವುಕುಮಾರ್,ತೋಟಪ್ಪ, ಹೊನ್ನಪ್ಪ, ಮಂಜುನಾಥ್,ಯರ‌್ರಿಸ್ವಾಮಿ,ರಾಮು ಹಾವೇರಿ,ಚಂದ್ರು ದಾವಣಗೆರೆ,ಮಂಜುನಾಥ್ ನೆರ‌್ಲಗಿ,ಮಂಜುನಾಥ್‌ಶಿವಪುರ, ಸಿದ್ದರಾಜು ಜೋಗಿ,ಶಿವುಕುಮಾರ್,ಗುರುಸ್ವಾಮಿ,ಯೋಗಿಶ್,ಕೃಷ್ಣಮೂರ್ತಿ,ರವಿಕಿರಣ್,ಶೋಭಾ,ವೇ ದಾವತಿ,ಕವಿತಾ,ಬಸವರಾಜ್‌ಭಂಡಾರಿ,ನಾಗರಾಜು,ರವಿ, ತ್ಯಾಗರಾಜು, ಪ್ರಖ್ಯಾತ್‌ಜೋಗಿ,ವಿಜಯ್‌ಕುಮಾರ್ ಬೆಂಗಳೂರು ಇತರರು ಇದ್ದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

-------------------