ನ್ಯೂಸ್

ಚಿತ್ರದುರ್ಗ :ಮಾಸ್ಕ್ ಧರಿಸದೇ ಇರುವವರಿಗೆ ಬಿತ್ತು ದಂಡ

ಚಿತ್ರದುರ್ಗ: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದಿದ್ದರೇ 100 ರೂ.ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವಿನೋತ್‌ಪ್ರಿಯಾ ಹೇಳಿಕೆ ನೀಡಿದ ಮಾರನೇ ದಿನದಿಂದಲೇ ಕಾರ‌್ಯಾಚರಣೆಗೆ ಇಳಿದ ಅಧಿಕಾರಿಗಳು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸಲಾಗುವುದು.

ಪಿಎಸ್‌ಐ, ಪಿಡಿಒ ದರ್ಜೆ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರಿಗೆ ದಂಡ ವಿಧಿಸುವ ಅಧಿಕಾರ ಕೊಡಲಾಗಿದೆ. ಹಸಿರು ವಲಯ ದಲ್ಲಿರುವ ಚಿತ್ರದುರ್ಗವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಡಿಸಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಬೆಳಗ್ಗೆ ನಗರಸಭೆ ಆಯುಕ್ತ ಜೆ.ಟಿ.ಹನುಂತರಾಜು ನೇತೃತ್ವದಲ್ಲಿ ಕಾರ‌್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಬೈಕ್ ಸವಾರ ಸಹಿತ ಮಾಸ್ಕ್ ಧರಿಸದೇ ಇರುವಂಥವರಿಗೆ ದಂಡ ವಿಧಿಸಿತು.

-