ನ್ಯೂಸ್

ಚಿತ್ರದುರ್ಗ :ಕರೊನಾ ಜಾಗೃತಿ ಕಾರ್ಯಾಗಾರ

ಚಿತ್ರದುರ್ಗ: ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಸರ್ಕಾರಿ ಮತ್ತು ಖಾಸಗಿ ವ್ಯೆದ್ಯರಿಗೆ ಕಾರ್ಯಾಗಾರವನ್ನು ಆರೋಗ್ಯ ಇಲಾಖೆ ಆಯೋಜಿಸಿತ್ತು.

ಸ್ಯಾನಟರಿ ಬಳಸಿ ಕೈ ಸ್ವಚ್ಛಗೊಳಿಸಿಕೊಳ್ಳುವ ಮೂಲಕ ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅವರು ,ಶೇ.ನೂರು ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಜಿಲ್ಲೆಯಲ್ಲಿ ಯಾವುದೇ ಪಾಸಿಟವ್ ಪ್ರಕರಣ ಕಂಡು ಬಂದಿಲ್ಲ. ಆದರೂ ಕಟ್ಟೆಚ್ಷರ ಅಗತ್ಯ ವೆಂದರು.

ಡಿಎಚ್ಒ ಡಾ.ಸಿ.ಎಲ್. ಪಾಲಾಕ್ಷ ಮಾತನಾಡಿ ಇದು ವಿಶ್ವ ಆರೋಗ್ಯ ತುರ್ತು ಪರಿಸ್ಥಿತಿಯಾಗಿದೆ.

ಜಿಲ್ಲೆಯಲ್ಲಿ ಯಾವುದೇ ಸೋಂಕು ಪ್ರಕರಣ ಕಂಡು ಬಂದಿಲ್ಲ ಎಂದರು.

ಎಸ್ಪಿ ಜಿ.ರಾಧಿಕಾ, ಜಿಲ್ಲಾ ಸರ್ಜನ್ ಡಾ.ಬಸವರಾಜಪ್ಪ, ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ‌ನಟರಾಜ್, ಸ್ಥಾತಿ ಸಮಿತಿ ಅಧ್ಯಕ್ಷ ಕೆ.ಅನಂತ ಹಾಗೂ ಇತರೆ ವೈದ್ಯಕಾರಿಗಳು, ಖಾಸಗಿ ವೈದ್ಯರ ಹಾಗೂ ಐಎಂಎ ಪ್ರಮುಖರು ಮತ್ತಿತರ ಇಲಾಖೆ‌ ಪ್ರಮುಖ‌ ಅಧಿಕಾರಿಗಳು ಇದ್ದರು.