ಬಾಳೆಹೊನ್ನೂರು ಸಮೀಪದ ಸಂಗಮೇಶ್ವರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಿದರು. ಕೆ.ಎಲ್.ಚಂದ್ರೇಗೌಡ, ಬಿ.ಸಿ.ಗೀತಾ, ಎಸ್.ವಿ.ಮಂಜುನಾಥ್, ಗಾಯತ್ರಿ ಶಾಂತೇಗೌಡ, ಡಿ.ಎಸ್.ತೇಜಸ್ವಿನಿ, ಶಶಿರೇಖಾ, ತ್ರಿವೇಣಿ ರಾವ್ ಇತರರಿದ್ದರು. 
ನ್ಯೂಸ್

ಚಿಕ್ಕಮಗಳೂರಿಗೆ ಶೀಘ್ರ ಡೇರಿ

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಗೆ ಡೇರಿ ಕೊಡಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇದ್ದು ಚಿಕ್ಕಮಗಳೂರು ಜಿಲ್ಲೆ ಹಾಗೂ ಅರಸೀಕೆರೆ ತಾಲೂಕನ್ನು ಸೇರಿಸಿಕೊಂಡು ಡೇರಿ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬೇಡಿಕೆ ಸಾಕಾರಗೊಳ್ಳಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಸಂಗಮೇಶ್ವರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಭಾನುವಾರ ಆಯೋಜಿಸಿದ್ದ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು ಎಂಬುದು ಸರ್ಕಾರದ ಉದ್ದೇಶ. ಹಾಲಿನ ದರ 4 ರೂ. ಹೆಚ್ಚಿಸಿ ರೈತರಿಗೆ ನೀಡುವ ಕೆಲಸ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಅತ್ಯಂತ ಕಡಿಮೆ ದರಕ್ಕೆ ಹಾಲನ್ನು ಮಾರಾಟ ಮಾಡಲಾಗುತ್ತಿದ್ದು ಒಂದು ಲೀಟರ್ ಬಾಟಲಿ ನೀರಿಗೆ ನೀಡುವ ಹಣಕ್ಕಿಂತ ಕಡಿಮೆ ದರದಲ್ಲಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಆತ್ಮಸಾಕ್ಷಿಯಿಂದ ಯೋಚನೆ ಮಾಡಿದರೆ ಇದು ನಾವು ರೈತರನ್ನು ಶೋಷಣೆ ಮಾಡುತ್ತಿಲ್ಲವೇ ಎನಿಸುತ್ತದೆ. ಬೇರೆ ರಾಜ್ಯಗಳಲ್ಲಿ ಎಲ್ಲಕ್ಕಿಂತ ಹೆಚ್ಚು ದರದಲ್ಲಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ, ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಮಾಜಿ ಎಂಎಲ್ಸಿ ಎಸ್.ವಿ.ಮಂಜುನಾಥ್, ಗಾಯತ್ರಿ ಶಾಂತೇಗೌಡ, ಸಹಕಾರ ಸಂಘಗಳ ಉಪ ನಿಬಂಧಕಿ ಡಿ.ಎಸ್.ತೇಜಸ್ವಿನಿ, ಉಪ ನಿರ್ದೇಶಕಿ ಎಸ್.ಎಂ.ಶಶಿರೇಖಾ, ತ್ರಿವೇಣಿ ರಾವ್, ಪ್ರಮುಖರಾದ ಕೆ.ಕೆ.ವೆಂಕಟೇಶ್, ಯು.ಇ.ಜಯರಾಮ್, ಟಿ.ಇ.ಮಂಜುನಾಥ್, ಎಸ್.ಸುರೇಶ್‌ಗೌಡ, ಬಿ.ಎನ್.ಸೋಮೇಶ್, ಯು.ವಿ.ವಿನಯ್, ಚಂದ್ರಹಾಸ್, ಎಸ್.ಗೋಕುಲ್, ಎ.ಕೆ.ಸುಧಾಕರ, ಕೆ.ಎ.ಮಹಮ್ಮದ್, ಎಂ.ಎ.ಪಲ್ಲವಿ, ಬಿ.ಎನ್.ಸುಚಿತ್ರಾ, ಸುಂದರೇಶ್, ಬಿ.ಸಿ.ಕುಟ್ಟಿ, ರಮಣರೆಡ್ಡಿ, ಪ್ರತಾಪ್ ರೆಡ್ಡಿ, ಬಾಲಕೃಷ್ಣ, ಸ್ನೇಹ ನೀಲಪ್ಪಗೌಡ ಮತ್ತಿತರರಿದ್ದರು.