ಬೆಟ್ಟದಪುರ: ಸಮೀಪದ ಚಿಕ್ಕನೇರಳೆ ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಜೋರು ಮಳೆಗೆ ರುಕ್ಮಿಣಿಮ್ಮ-ವೆಂಕಟೇಗೌಡ ಎಂಬುವರಿಗೆ ಸೇರಿದ ಮನೆಗೆ ಹಾನಿ ಊಂಟಾಗಿದೆ.
ಬೆಟ್ಟದಪುರ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚಿನ ಕಾಲ ಮಳೆ ಸುರಿಯಿತು. ಈ ವೇಳೆ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಅಲ್ಲದೇ ಚಿಕ್ಕನೇರಳೆ ಗ್ರಾಮದಲ್ಲಿ ಮನೆಯ ಶೀಟುಗಳು ಹಾರಿಹೋಗಿವೆ. ಮನೆಯಲ್ಲಿನ ಸಾಮಗ್ರಿಗಳಿಗೂ ಹಾನಿ ಊಂಟಾಗಿದೆ.