ನ್ಯೂಸ್

ಚಾ.ನಗರದಲ್ಲಿ ಕರೊನಾ ಪಾಸಿಟಿವ್ ಎಂದು ಫೇಕ್ ಸುದ್ದಿ ಹರಡಿದವನ ಬಂಧನ

ಚಾಮರಾಜನಗರ: ಫೇಸ್ ಬುಕ್ ನಲ್ಲಿ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಸುಳ್ಳು ಸುದ್ದಿ‌ ಹರಡಿದ್ದವನನ್ನು‌ ಪೊಲೀಸರು ಬಂಧಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ವಿಜಯ್ ರುದ್ರೇಶ್ ಬಂಧಿತ. ಈತ ತನ್ನ ಫೇಸ್ ಬುಕ್ ಖಾತೆಯಲ್ಲಿ ಚಾಮರಾಜನಗರದಲ್ಲಿ ಮೊದಲ‌ ಕರೊನಾ‌ ಪಾಸಿಟಿವ್ ಕೇಸ್‌ ಜ್ಯುಬಿಲಿಂಟ್ ಉದ್ಯೋಗಿಯಿಂದ ಖಾತೆ ತೆರೆದಿದೆ ಎಂದು ಬರೆದುಕೊಂಡಿದ್ದ. ಈತನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಕರೊನಾ ವಿಚಾತದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು‌ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ ಆನಂದ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.