ಗುಂಡ್ಲುಪೇಟೆ: ಪಟ್ಟಣದ ಪೊಲೀಸರ ವಸತಿಗೃಹಗಳ ಸುತ್ತಲಿನ ಚರಂಡಿಯ ಹೂಳೆತ್ತಿಸದ ಪರಿಣಾಮ ಇಡೀ ಬಡಾವಣೆ ಕೊಳೆತು ನಾರುತ್ತಿದೆ.
ಚರಂಡಿಯ ಕೊಳಚೆ ನೀರಿನಲ್ಲಿ ಸೊಳ್ಳೆಗಳು ಸಂತಾನ ವೃದ್ದಿಮಾಡಿಕೊಳ್ಳುತ್ತಾ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ.
ಈ ಬಗ್ಗೆ ಸಿಬ್ಬಂದಿ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಉಪಯೋಗ ಆಗಿಲ್ಲ. ಬಾಡಿಗೆ ಮನೆಗಳಲ್ಲಿ ವಾಸಿಸುವ ಅಧಿಕಾರಿಗಳಿಗೆ ಬಡ ಸಿಬ್ಬಂದಿ ಕಷ್ಟ ಅರ್ಥ ಆಗುವುದಿಲ್ಲ.
ಇನ್ನಾದರೂ ಅಧಿಕಾರಿಗಳು ಕಣ್ತರೆದು ಚರಂಡಿಯ ಕೊಳಚೆಯನ್ನು ತೆರವುಗೊಳಿಸುವರೇ ಕಾದುನೋಡಬೇಕಾಗಿದೆ.