</p><p>ಹಿರೇಕೆರೂರ: ನಿಂತಿದ್ದ ಚಕ್ಕಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕೋಡ ಗ್ರಾಮದ ಮಾರುತಿ ಶಾಲೆ ಬಳಿ ಗುರುವಾರ ಸಂಜೆ ಸಂಭವಿಸಿದೆ.</p><p>ಹಾನಗಲ್ಲ ತಾಲೂಕಿನ ಕಿರವಾಡಿ ಗ್ರಾಮದ ಕುಮಾರ ಶೇಖಪ್ಪ ತಿರಕಣ್ಣನವರ(33) ಹಾಗೂ ಈತನ ತಾಯಿ ಕುಸುಮಾ ಶೇಖಪ್ಪ ತಿರಕಪ್ಪನವರ(54) ಮೃತ ದುರ್ದೈವಿಗಳು. ಹಂಸಭಾವಿಯಿಂದ ಕೋಡ ಮಾರ್ಗವಾಗಿ ಕುಮಾರ ತನ್ನ ತಾಯಿ ಕುಸುಮಾ ಅವರನ್ನು ಬೈಕ್ ಹಿಂಬದಿ ಕುರಿಸಿಕೊಂಡು ಬರುವಾಗ ಕೋಡ ಗ್ರಾಮದ ಮಾರುತಿ ಶಾಲೆ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಚಕ್ಕಡಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</