ಚಿಕ್ಕಮಗಳೂರಿನ ಬಸ್‌ನಿಲ್ದಾಣದ ಸಮೀಪ ಕಾರು, ಸ್ಕೂಟಿ ನಡುವೆ ಅಪಘಾತ ಸಂಭವಿಸಿರುವುದು. 
ನ್ಯೂಸ್

ಕಾರು, ಬೈಕ್ ಅಪಘಾತ ಇಬ್ಬರಿಗೆ ಗಾಯ

ಚಿಕ್ಕಮಗಳೂರು: ನಗರದ ಬಸ್ ನಿಲ್ದಾಣದ ಸಮೀಪ ಶನಿವಾರ ಮುಂಜಾನೆ ಕಾರು ಹಾಗೂ ಸ್ಕೂಟಿ ಡಿಕ್ಕಿಯಾಗಿ ಸ್ಕೂಟಿ ಸವಾರರ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಕೂಟಿ ಸವಾರ ತಾಲೂಕಿನ ಜೋಳದಾಳ್ ನಿವಾಸಿ ಶಾದಬ್ (24) ಸ್ಥಿತಿ ಗಂಭೀರವಾಗಿದ್ದು, ಮತ್ತೊಬ್ಬ ಯುವಕ ಶಕೀಲ್‌ನಿಗೂ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಾದಬ್‌ನನ್ನು ಹಾಸನ ಆಸ್ಪತ್ರೆಗೆ ಸೇರಿಸಲಾಗಿದೆ. ಉಪ್ಪಳ್ಳಿ ನಿವಾಸಿ ಶಕೀಲ್ ಎಂಬಾತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಯುವಕರು ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಡೆಕೋರೇಟ್ ಕೆಲಸಕ್ಕೆ ಹೋಗಿದ್ದರು. ಮುಂಜಾನೆ ಬಸ್‌ನಲ್ಲಿ ಬಂದ ಪಾರ್ಸೆಲ್ ತೆಗೆದುಕೊಂಡು ಬರಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.