ಚಾಮರಾಜನಗರ ತಾಲೂಕಿನ ಕಸಬಾ ಹೋಬಳಿ ಶಿವಪುರ ಗ್ರಾಮದ ಸರಹದ್ದಿನ ಯಡಪುರ ಗ್ರಾಮದ ಸರ್ವೇ ನಂ.64 ರಲ್ಲಿ ಘನ ತ್ಯಾಜ್ಯ ಘಟಕ ಸ್ಥಾಪನೆ ನಿರ್ಧಾರವನ್ನು ಕೈ ಬಿಡಬೇಕು ಎಂದು ವಕೀಲ ರವಿ ಬೆಳ್ಳಯ್ಯ ಒತ್ತಾಯಿಸಿದರು.
ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಆದ್ದರಿಂದ ತ್ಯಾಜ್ಯ ಘಟಕ ಸ್ಥಾಪನೆ ಮಾಡುವ ನಿರ್ಧಾರ ಕೈಬಿಡದಿದ್ದಲ್ಲಿ ಪ್ರಗತಿಪರ ಸಂಘಟನೆ, ಗ್ರಾಮಸ್ಥರು ಹಾಗೂ ಇನ್ನಿತರೊಡಗೂಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದು ಕೃಷಿ ಯೋಗ್ಯವಾದ ಖರಾಬು ಭೂಮಿಯಾಗಿದೆ. ಇತ್ತೀಚೆಗೆ ಪಿಡಿಒ ಮತ್ತು ಗ್ರಾಮದ ಆಡಳಿತಾಧಿಕಾರಿ ಸ್ಥಳಕ್ಕೆ ಬಂದು ಘನ ತ್ಯಾಜ್ಯ ಘಟಕ ಸ್ಥಾಪನೆಗಾಗಿ ಇಲ್ಲಿ ಜಾಗ ಗುರುತಿಸಿದ್ದಾರೆ. ಗ್ರಾಮದಲ್ಲಿ ಸುಮಾರು 70 ರಿಂದ 80 ಕುಟುಂಬಗಳು ಕೃಷಿ ಚಟುವಟಿಕೆಯಲ್ಲಿವೆ. ಕೃಷಿ ಪಂಪ್‌ಸೆಟ್‌ಗಳು ಸಹ ಇವೆ. ಹೀಗಾಗಿ ಈ ಘಟಕ ಸ್ಥಾಪಿಸಿದರೆ ಕುಡಿಯುವ ನೀರು, ಕೃಷಿಗಳು ಮಾಲಿನ್ಯಕ್ಕೆ ಒಳಗಾಗುತ್ತವೆ. ಇದರಿಂದಾಗಿ ಇವರು ಅನಿವಾರ್ಯವಾಗಿ ವಲಸೆ ಹೋಗಬೇಕಾದ ಪರಿಸ್ಥಿತಿಯುಂಟಾಗುತ್ತದೆ. ಈಗಾಗಲೇ ಈ ಬಗ್ಗೆ ಡಿಸಿ, ನಗರಸಭೆ ಆಡಳಿತ ವರ್ಗ, ಗ್ರಾಪಂಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು.
ವಕೀಲರಾದ ಭರತ್‌ರಾಜ್, ಮಹದೇವ ಸಾಗರ್ ಇದ್ದರು.