ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ತೆರಿಗೆ ಪಾವತಿ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೋಲಾರ ಜಿಲ್ಲಾ ಪಂಚಾಯ್ತಿ ವಿನೂತನ ಪ್ರಯತ್ನಗಳನ್ನು ಕೈಗೊಳ್ಳುವ ಮೂಲಕ ತೆರಿಗೆ ಸಂಗ್ರಹ ಕುರಿತು ವಿಶೇಷ ಅಭಿಯಾನ ನಡೆಸಿ, ತೆರಿಗೆ ಪಾವತಿಗೆ ಕ್ರಮಕ್ಕೆ ಮುಂದಾಗಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಹಾಗೂ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ನೇತೃತ್ವದಲ್ಲಿ ವಿಶೇಷ ಅಭಿಯಾನ ಹಾಗೂ ವೈಜ್ಞಾನಿಕ ವಿಧಾನದಲ್ಲಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ೧೫೪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೧,೭೫೦ ಗ್ರಾಮಗಳಿದ್ದು, ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ತೆರಿಗೆ ಪಾವತಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೂ ತೆರಿಗೆ ಹಣವನ್ನು ತಮ್ಮದೇ ಗ್ರಾಮ ಪಂಚಾಯತಿಯ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಾಲ್ಲೂಕು ಪಂಚಾಯತಿ ಇಓ ಹಾಗೂ ಗ್ರಾಮ ಪಂಚಾಯ್ತಿ ಪಿಡಿಓಗಳು ಗ್ರಾಮೀಣ ಭಾಗದ ಮನೆ ಬಾಗಿಲಿಗೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ಸಮೇತ ಭೇಟಿ ನೀಡಿ, ತೆರಿಗೆ ಸಂಗ್ರಹ ಕುರಿತು ವಿಶೇಷ ಅಭಿಯಾನ ಕೈಗೊಂಡು ತೆರಿಗೆ ಪಾವತಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಯಾವ ಉದ್ದೇಶಗಳಿಗೆ ತೆರಿಗೆ ಹಣ ಉಪಯೋಗಿಸಬಹುದು :
ತೆರಿಗೆ ಹಣದಿಂದ ಗ್ರಾಮ ಪಂಚಾಯಿತಿಗಳು ಕ್ರಿಯಾ ಯೋಜನೆ ರೂಪಿಸಿ ಗ್ರಾಮ ಪಂಚಾಯತಿಯ ಎಲ್ಲಾ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನುಒದಗಿಸಲು ಈ ತೆರಿಗೆ ಹಣವನ್ನು ಬಳಸಲಾಗುತ್ತದೆ. ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ ಕಾಪಾಡಲು, ಬೀದಿ ದೀಪ ಅಳವಡಿಕೆ, ಸ್ವಚ್ಚತೆ, ಗ್ರಾಮೀಣ ಭಾಗದಲ್ಲಿ ಉತ್ತಮ ಗ್ರಂಥಾಲಯ ಹಾಗೂ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಹಣದ ಸಹಾಯ ಮಾಡಲು ಬಳಸಬಹುದು.
ಅಷ್ಟೇ ಅಲ್ಲದೇ ತುರ್ತು ಸಂಧರ್ಭಗಳಲ್ಲಿ ಸರ್ಕಾರಗಳ ಅನುಧಾನಕ್ಕೆ ಕಾಯದೆ ಗ್ರಾಮ ಪಂಚಾಯತಿಯಿAದ ಇದೇ ತೆರಿಗೆ ಹಣವನ್ನು ಬಳಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು. ಗ್ರಾಮ ಪಂಚಾಯತಿ ಸಿಬ್ಬಂದಿ ವೇತನಕ್ಕೆ ಬಳಸಲು ಮುಕ್ತ ಅವಕಾಶವಿದೆ.
೨೦೨೪-೨೦೨೫ನೇ ಸಾಲಿನಲ್ಲಿ ಸುಮಾರು ಜಿಲ್ಲೆಯಾದ್ಯಂತ ೪೨.೭೫ ಕೋಟಿ ತೆರಿಗೆ ಸಂಗ್ರಹವಾಗಿದ್ದು ಶೇ ೮೭.೫೭ ರಷ್ಟು ಗುರಿ ಸಾಧಿಸಿದೆ. ಹಾಗೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಸಹ ಕೈಗೊಳ್ಳಲಾಗಿದೆ. ಅದೇ ರೀತಿ ಈ ಬಾರಿಯೂ ಅಂದರೆ ೨೦೨೫-೨೬ನೇ ಸಾಲಿನಲ್ಲಿ ಸುಮಾರು ೫೦.೪೫ ಕೋಟಿ ರೂ ಗುರಿ ಹೊಂದಿದ್ದು, ಈಗಾಗಲೇ ೧೬.೭೦ ಕೋಟಿ ತೆರಿಗೆ ಸಂಗ್ರಹವಾಗಿದೆ. ಇನ್ನು ಸಾರ್ವಜನಿಕರಿಗಾಗಿ ತೆರಿಗೆ ಪಾವತಿ ಮಾಡಲು ಡಿಜಿಟಲ್ ಮಿಷನ್ ನೀಡಲಾಗಿದೆ.
ತೆರಿಗೆ ಪಾವತಿ ಮಾಡಲು ಸರಳ ಮಾರ್ಗಗಳು !
ಗ್ರಾಮಪಂಚಾಯ್ತಿಯಲ್ಲಿ ವಿವಿಧ ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರು ಗ್ರಾಮ ಪಂಚಾಯತಿಗಳಿಗೆ ಅಲೆದಾಡುವ ಅವಶ್ಯಕತೆಯಿಲ್ಲ. ೨೦೨೧ ರಿಂದಲೂ ಬಾಪೂಜಿ ಸೇವಾಕೆಂದ್ರ ಆನ್ ಲೈನ್ ಪೋರ್ಟಲ್ ನಲ್ಲಿ ತೆರಿಗೆ ಸಂಗ್ರಹ ಮಾಡಲಾಗುತ್ತಿತ್ತು. ಈ ಬಾರಿಯ ಗ್ರಾಮ ಪಂಚಾಯಿತಿ ತೆರಿಗೆಯನ್ನುಪರಿಷ್ಕರಣೆ ಮಾಡಿ ವೈಜ್ಞಾನಿಕವಾಗಿ ತೆರಿಗೆ ವಿಧಿಸಲಾಗಿದೆ. ಗ್ರಾಮ ಪಂಚಾಯತಿಯ ಮೀಸಲಾದ ಸಿಬ್ಬಂಧಿ ಪಿ.ಓ.ಎಸ್.ಯಂತ್ರದೊAದಿಗೆ ಮನೆಮನೆಗೆ ಬಂದು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್, ಯು.ಪಿ.ಐ. ಮೂಲಕ ಪಾವತಿ ಪಡೆದು ಸ್ಥಳದಲ್ಲಿಯೇ ಕಂಪ್ಯೂಟರೀಕೃತ ರಶೀದಿ ನೀಡಲಿದ್ದಾರೆ.
ಗ್ರಾಹಕರೆ ನೇರವಾಗಿ ತೆರಿಗೆ ಪಾವತಿ ಮಾಡಲು ಕಟ್ಟಡ ತೆರಿಗೆ. ನಿವೇಶನ ತೆರಿಗೆ, ವಾಣಿಜ್ಯ ತೆರಿಗೆ, ಕೈಗಾರಿಕಾ ತೆರಿಗೆ, ಕುಡಿಯುವ ನೀರಿನ ತೆರಿಗೆ ಸೇರಿದಂತೆ ಪ್ರಪಂಚದ ಯಾವುದೇ ಮೂಲೆಯಿಂದಲೂ ತಮ್ಮ ಆಸ್ತಿ ಸಂಖ್ಯೆಯನ್ನು ಬಳಸಿ ಡಿಜಿಟಲ್ ಪೇಮೆಂಟ್ ವೇದಿಕೆಗಳಾದ ಭಾರತ್‌ಪೇ, ಫೋನ್ ಪೇ, ಗೂಗಲ್‌ಪೇ ಸೇರಿದಂತೆ ಪೇಟಿಎಂ ಸೇರಿದಂತೆ ಇತರೆ ಮಾಧ್ಯಮಗಳ ಮೂಲಕವೂ ನಾಗರೀಕರು ತಮ್ಮ ಆಸ್ತಿ ತೆರಿಗೆಗಳನ್ನು ಪಾವತಿ ಮಾಡಿ ಆನ್‌ಲೈನ್ ಮೂಲಕ ರಶೀದಿ ಪಡೆಯಬಹುದಾಗಿದೆ.
ಕೋಟ್
ತೆರಿಗೆ ಪಾವತಿ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ. ತೆರಿಗೆ ಹಣ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು. ಮನೆ ಬಾಗಿಲಲ್ಲಿಯೇ ಕಂದಾಯ ಪಾವತಿ ಮಾಡಿ ರಸೀದಿ ಪಡೆಯಬಹುದು. ಪ್ರತಿ ಗ್ರಾಮದಲ್ಲಿ ಈ ಬಗ್ಗೆ ಗ್ರಾಮಪಂಚಾಯ್ತಿ ಅಧಿಕಾರಿಗಳು ವಿನೂತನ ಮಾದರಿಯ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಗುರಿ ಸಾಧಿಸುವ ನಿರೀಕ್ಷೆ ಇದೆ.
-ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಕೋಟ್
ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ತೆರಿಗೆ ಸಂಗ್ರಹ ನಿರ್ಣಾಯಕವಾಗಿದೆ. ತುರ್ತು ಸಂದರ್ಭಗಳಲ್ಲಿ ನಾಗರೀಕರಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಎಲ್ಲಾ ನಾಗರೀಕರು ತಮ್ಮ ತೆರಿಗೆಯನ್ನು ಸಕಾಲದಲ್ಲಿ ಪಾವತಿ ಮಾಡುವುದು ತಮ್ಮ ಜವಾಬ್ಧಾರಿ ಎಂದು ತಿಳಿದು ಅಭಿವೃದ್ಧಿಗೆ ಸಹಕರಿಸಬೇಕು.
-ಟಿ.ಕೆ.ರಮೇಶ್, ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್.
ಚಿತ್ರ ೧೧ ಕೆ.ಎಲ್.ಆರ್. ೦೬ : ಜಿಲ್ಲಾ ಪಂಚಾಯ್ತಿ ಕಛೇರಿ
ಚಿತ್ರ ೧೧ ಕೆ.ಎಲ್.ಆರ್. ೦೬ಎ : ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವರ ಭಾವಚಿತ್ರ
ಚಿತ್ರ ೧೧ ಕೆ.ಎಲ್.ಆರ್. ೦೬ಬಿ : ಟಿ.ಕೆ.ರಮೇಶ್, ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ರವರ ಭಾವಚಿತ್ರ