ನ್ಯೂಸ್

ಗ್ರಾಮಕ್ಕೊಂದು ಎಂಪಿಸಿಎಸ್, ೩ ಗ್ರಾಮಗಳಿಗೊಂದು ಎಸ್‌ಎಫ್‌ಸಿಎಸ್ ಸ್ಥಾಪನೆಗೆ ಚಿಂತನೆ / ರೈತರ ಸ್ವಾವಲಂಬನೆ ಸಹಕಾರ ರಂಗದಿAದ ಮಾತ್ರವೇ ಸಾಧ್ಯ / ಕೊತ್ತೂರು ಮಂಜುನಾಥ್

ವಿಜಯವಾಣಿ ಸುದ್ದಿಜಾಲ ಕೋಲಾರ

ರೈತರು, ಮಹಿಳೆಯರ ಸ್ವಾವಲಂಬನೆ ಸಹಕಾರ ರಂಗದಿAದ ಮಾತ್ರ ಸಾಧ್ಯವಿದ್ದು, ಪ್ರತಿ ಗ್ರಾಮದಲ್ಲೂ ಒಂದು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಮೂರು ಹಳ್ಳಿಗಳಿಗೊಂದು ರೈತರ ಹಾಗೂ ರೇಷ್ಮೆ ಬೆಳೆಗಾರರ ಸಹಕಾರ ಸಂಘ ಸ್ಥಾಪಿಸುವ ಅಗತ್ಯವಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ, ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ `ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು' ವಿಷಯದಡಿ ನಡೆದ ಸಹಕಾರ ಸಪ್ತಾಹದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ಬಂದಾಗ ಬದುಕು ಕಟ್ಟಿಕೊಳ್ಳುವುದೇ ಕಷ್ಟವಾಗಿತ್ತು, ಇಂತಹ ಸಂದರ್ಭದಲ್ಲಿ ರೈತರನ್ನು ಉಳಿಸಿದ್ದೇ ಹೈನುಗಾರಿಕೆ, ರೈತರಿಗಾಗಿಯೇ ಸಹಕಾರಿ ಸಂಸ್ಥೆಗಳನ್ನು ಕಟ್ಟಲಾಗಿದೆ ಎಂದು ತಿಳಿಸಿದರು.

ಸಹಕಾರ ರತ್ನ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಂತಸವಿದೆ, ನಷ್ಟದಲ್ಲಿದ್ದ ಮುಳಬಾಗಿಲು ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ ಟಿಎಪಿಸಿಎಂಎಸ್ ದುಸ್ಥಿತಿ ಸರಿಪಡಿಸಲು ಪಕ್ಷಬೇಧ ಮರೆತು ಎಲ್ಲರೂ ನನ್ನನ್ನು ಅಧ್ಯಕ್ಷöರನ್ನಾಗಿ ಮಾಡಿದರು. ಈ ಸಂಸ್ಥೆ ಮೂಲಕ ಗೊಬ್ಬರ, ಪಡಿತರ ಮಾರಾಟ ನಡೆಸುತ್ತಿದ್ದು, ಇದ್ನು ಉಳಿಸಿದ ಆತ್ಮತೃಪ್ತಿ ನನಗಿದೆ. ೩೦ ಸಾವಿರ ಇದ್ದ ವಹಿವಾಟು ಇಂದು ೨ ಲಕ್ಷ ದಾಟಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಯೂರಿಯಾ ಒಂದು ಮೂಟೆಗೆ ೧೨೦೦ ರೂ ಸಬ್ಸಿಡಿ ನೀಡುತ್ತಿದೆ. ಡಿಎಪಿ ಗೊಬ್ಬರಕ್ಕೆ ೧೨೦೦ ರೂ ನೀಡುತ್ತಿದೆ. ರೈತರ ಅಭ್ಯುದಯದಿಂದ ಮಾತ್ರವೇ ದೇಶ ಉಳಿಯಲು ಸಾಧ್ಯ. ಸಹಕಾರ ರಂಗ ಪಡಿತರ ಮಾರಾಟಕ್ಕೆ ಸೀಮಿತವಾಗದೇ ಶಾಲೆ, ವಾಹನ, ಆಸ್ಪತ್ರೆ ಎಲ್ಲವನ್ನು ಮಾಡಬಹುದು. ಆದರೆ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲವಾಗಿರುವುದು ವಿಷಾದದ ಸಂಗತಿಯಾಗಿದೆ ಎಂದರಲ್ಲದೆ ಸಹಕಾರ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಸಾಧನೆಯನ್ನು ಸ್ಮರಿಸಿದರು.

ಸಹಕಾರಿ ಕಾಯ್ದೆ ತಿದ್ದುಪಡಿ :

ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರ ಸಚಿವ ರಾಜಣ್ಣ ಸೇರಿ ಸಹಕಾರಿ ಕಾಯಿದೆ ತಿದ್ದುಪಡಿ ಮಾಡಿ, ಈ ರಂಗವನ್ನು ಬಲಗೊಳಿಸುವ ಯತ್ನ ನಡೆಸಿದ್ದಾರೆ. ಈ ಹೊಸಕಾಯಿದೆ ಜಾರಿಯಾದರೆ ೩ ವರ್ಷಗಳಿಗೊಮ್ಮೆ ಚುನಾವಣೆ, ಜಿಲ್ಲಾ ಮತ್ತು ರಾಜ್ಯ ಹಂತದಲ್ಲಿ ಮೀಸಲು ಸೌಲಭ್ಯ, ಎಲ್ಲಾ ವರ್ಗಗಳಿಗೂ ಅಧ್ಯಕ್ಷರಾಗುವ ಅವಕಾಶ ಇರುತ್ತದೆ ಎಂದರು.

ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಕೆ.ಶ್ರೀನಿವಾಸಗೌಡರ ನಂತರ ಅವರು ಅಭಿವೃದ್ದಿಪಡಿಸಿದ ಸಹಕಾರಿ ತೇರನ್ನು ಶಾಸಕ ಕೊತ್ತೂರು ಮಂಜುನಾಥ್ ಮುಂದುವರೆಸಲಿ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಭ್ರಷ್ಟಾಚಾರ ಮುಕ್ತ ಸಹಕಾರಿ ವ್ಯವಸ್ಥೆ ನಿರ್ಮಾಣ ಇಂದು ಅಗತ್ಯವಾಗಿದೆ. ಈ ಕ್ಷೇತ್ರದಲ್ಲಿ ಶ್ರೀನಿವಾಸಗೌಡರು ಮಾಡಿದ ಸಾಧನೆ ಮರೆಯಲು ಸಾಧ್ಯವಿಲ್ಲ, ನೇರವಾಗಿ ರೈತರು, ಮಹಿಳೆಯರಿಗೆ ನೆರವಾಗಲು ಈ ಕ್ಷೇತ್ರದಿಂದ ಮಾತ್ರವೇ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಯೂನಿಯನ್ ಅಧ್ಯಕ್ಷ ಪಾಕರಹಳ್ಳಿ ವೆಂಕಟೇಶ್, ನಗರದ ಇಟಿಸಿಎಂ ಆಸ್ಪತ್ರೆ ಮುಂಭಾಗ ಇರುವ ಸಹಕಾರಿ ಯೂನಿಯನ್ ನಿವೇಶನ ರಕ್ಷಣೆಗೆ ಕಾಂಪೌAಡ್ ನಿರ್ಮಿಸಿಕೊಡಲು ಶಾಸಕರಿಗೆ ಮನವಿ ಮಾಡಿದಾಗ ಕೊತ್ತೂರು ಮಂಜುನಾಥ್ ಈ ಕೆಲಸ ಮಾಡಿಕೊಡುವ ಭರವಸೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ವಿಕಸಿದ ಭಾರತ ಧ್ಯೇಯದ ಸಹಕಾರಿ ಸಪ್ತಾಹದ ಧ್ಯೇಯ ವಿಕಸಿತ ಕೋಲಾರವೂ ಆಗಿರಲಿ ಎಂದು ತಿಳಿಸಿ, ಜಿಲ್ಲೆಯ ಸಹಕಾರಿ ಕ್ಷೇತ್ರದ ಎರಡು ಕಣ್ಣುಗಳಾಗಿರುವ ಡಿಸಿಸಿ ಬ್ಯಾಂಕ್, ಕೋಚಿಮುಲ್ ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವುದು ವಿಷಾದದ ಸಂಗತಿಯಾಗಿದೆ. ಅದರ ತಾಯಂತಿರುವ ಸಹಕಾರಿ ಯೂನಿಯನ್ ಇದನ್ನು ಸರಿಪಡಿಸುವಪ್ರಯತ್ನ ನಡೆಸಲಿ. ಕೋಲಾರ ಪತ್ರಕರ್ತರ ಸಹಕಾರ ಸಂಘ ಈಗಾಗಲೇ ೫೦ ಸಾವಿರ ರೂ ಸಾಲ ಸೌಲಭ್ಯ ಒದಗಿಸುತ್ತಿದ್ದು, ಶೇ.೯೫ ವಸೂಲಾತಿ ಇದೆ. ಈ ನಿಟ್ಟಿನಲ್ಲಿ ಸಂಘದ ಸದಸ್ಯರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಸಹಕಾರ ಕೋರಿದರು.

ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಶಾಸಕ ಕೊತ್ತೂರು ಮಂಜುನಾಥ್‌ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಯೂನಿಯನ್ ಉಪಾಧ್ಯಕ್ಷ ಕಲ್ವಮಂಜಲಿ ಬೈರೇಗೌಡ, ಮಾಜಿ ಅಧ್ಯಕ್ಷರುಗಳಾದ ಮೂರಾಂಡಹಳ್ಳಿ ಡಾ.ಇ.ಗೋಪಾಲಪ್ಪ, ಪೆಮ್ಮಶೆಟ್ಟಿಹಳ್ಳಿ ಸುರೇಶ್, ನಿರ್ದೇಶಕರಾದ ಚೆಂಜಿಮಲೆ ರಮೇಶ್, ಕೆ.ಎಂ.ಮAಜುನಾಥ್, ಪತ್ರಕರ್ತ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಗ್ಯಾರೆಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶಿವಕುಮಾರ್, ನರಸಾಪುರ ಎಸ್‌ಎಫ್‌ಸಿಎಸ್ ಅಧ್ಯಕ್ಷ ಮುನಿರಾಜು, ಯೂನಿಯನ್ ಸಿಇಒ ಕೆ.ಎಂ.ಭಾರತಿ, ಸಿಬ್ಬಂದಿ ಲಕ್ಷಿö್ಮ ರವಿ ಮತ್ತಿತರರಿದ್ದರು.

ಚಿತ್ರ ೧೮ ಕೆ.ಎಲ್.ಆರ್. ೦೧ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ,ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸಹಕಾರ ಸಪ್ತಾಹದ ಕಾರ್ಯಕ್ರಮವನ್ನು ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟಿಸಿದರು.