ಯಾಚೇನಹಳ್ಳಿ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷ ಶಿವಕುಮಾರ್ ಹಾಗೂ ಉಪಾಧ್ಯಕ್ಷೆ ಶ್ವೇತಾ ಅವರನ್ನು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅಭಿನಂದಿಸಿದರು. ವೈ.ಎಸ್.ರಾಮಸ್ವಾಮಿ, ಮಹೇಶ್‌ಕುಮಾರ್, ನವೀನ್, ನಾಗೇಂದ್ರ ಇದ್ದರು. 
ನ್ಯೂಸ್

ಗ್ರಾಮ ಮಟ್ಟದಿಂದಲೇ ಜೆಡಿಎಸ್ ಬಲಿಷ್ಠಗೊಳಿಸಿ

ಬನ್ನೂರು: ಸಮೀಪದ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಿವಕುಮಾರ್, ಉಪಾಧ್ಯಕ್ಷೆಯಾಗಿ ಶ್ವೇತಾ ಅವಿರೋಧವಾಗಿ ಆಯ್ಕೆಯಾದರು.

8 ಜೆಡಿಎಸ್ ಬೆಂಬಲಿತ ಸದಸ್ಯರಿರುವ ಪಂಚಾಯಿತಿಯಲ್ಲಿ 2ನೇ ಅವಧಿಗೆ ಅಧ್ಯಕ್ಷ ಸ್ಥಾನ 2ಎ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಶಿವಕುಮಾರ್ ಹಾಗೂ ಶ್ವೇತಾ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಮದ್ದಾನಪ್ಪ ಅವಿರೋಧ ಆಯ್ಕೆ ಪ್ರಕಟಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಯಾಚೇನಹಳ್ಳಿ ಗ್ರಾಮ ಅತ್ಯಂತ ವಿಶಿಷ್ಟವಾದದ್ದು. ಗ್ರಾಮದ ಜನರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯನಿರ್ವಹಿಸಬೇಕು. ಅಲ್ಲದೆ ಗ್ರಾಮ ಮಟ್ಟದಿಂದಲೇ ಜೆಡಿಎಸ್ ಪಕ್ಷವನ್ನು ಬಲಾಢ್ಯಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಶಿವಕುಮಾರ್, ಶೈಲಜಾ, ರೇಖಾ, ಮಹೇಶ್‌ಕುಮಾರ್, ವೈ.ಎಸ್. ಶೇಖರ್, ವೈ.ಜಿ. ಮಹೇಂದ್ರ, ಜೆಡಿಎಸ್ ಮುಖಂಡ ನಾಗೇಂದ್ರ, ನವೀನ್, ವೈ.ಎಂ. ಭೋಜರಾಜ್, ಕಿಟ್ಟಿ, ಪ್ರಕಾಶ್, ರವಿ ಇದ್ದರು.