ನ್ಯೂಸ್

ಗ್ಯಾರೇಜ್ ಬಳಿ ನಿಲ್ಲಿಸಿದ ಲಾರಿ ಕಳವು

ಕುಂದಾಫುರ : ಬೀಜಾಡಿ ಗ್ರಾಮ ಗ್ಯಾರೇಜ್ ಬಳಿ ಸೋಮವಾರ ರಾತ್ರಿ ನಿಲ್ಲಿಸಿದ ಟಿಪ್ಪರ್ ಹಾಗೂ ಚಾಲಕ ನಾಪತ್ತೆ ಯಾಗಿರುವುದು ಮಂಗಳವಾರ ಬೆಳಕಿಗೆ ಬಂದಿದೆ
ಕೋಟೇಶ್ವರ ಗ್ರಾಮ ಬಡಾಕೆರೆ ಚಿಟಿಬೆಟ್ಟು ಉದಯ್‌ ಆಚಾರಿ ಎಂಬವರ ಪತ್ನಿ ಮಾಲತಿ ಎಂಬವರ ಮಾಲೀಕತ್ವದ ಟಿಪ್ಪರ್ ಲಾರಿ ಚಾಲಕನಾಗಿ ಗದಗ್‌ ನಿವಾಸಿ ಗುಲಾಮ್‌ ಹುಸೇನ್‌ ದಖನಿ ಎನ್ನುವವರು ಕಳೆದ 2 ವಾರಗಳಿಂದ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು.
ವಾಹನ ಚಾಲಕ ಗುಲಾಮ್‌ ಹುಸೇನ್‌ ದಖನಿ ಎಂಬವರು ಬೀಜಾಡಿ ಗ್ರಾಮ ಶ್ರೀ ಮಾತಾ ಆಟೋ ಡಿಸೇಲ್‌ ವರ್ಕ್ಸ್ ನಲ್ಲಿ ವಾಹನ ನಿಲ್ಲಿಸಿ ಹೋಗಿದ್ದು, ಬೆಳಗ್ಗೆ ಟಿಪ್ಪರ್ ಮಾಲೀಕರು ಬಂದು ನೋಡಿದಾಗ ಗ್ಯಾರೆಜ್‌ ಬಳಿ ನಿಲ್ಲಿಸಿದ ಲಾರಿ ಹಾಗೂ ಚಾಲಕ ಕಾಣೆಯಾಗಿದ್ದು, ಅದರ ಮೌಲ್ಯ ೪ ಲಕ್ಷ. ಕುಂದಾಫುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ