ನ್ಯೂಸ್

ಗೌರಿ-ಗಣೇಶ ಹಬ್ಬಕ್ಕೆ ಹೂವು, ಹಣ್ಣು, ಕಾಯಿ ಬೆಲೆ ಸ್ವಲ್ಪಮಟ್ಟಿಗೆ ಇಳಿಮುಖ / ಗ್ರಾಹಕರಿಗೆ ತೃಪ್ತಿ / ವ್ಯಾಪಾರಸ್ಥರಿಗಿಲ್ಲ ವ್ಯಾಪಾರ

ವಿಜಯವಾಣಿ ಸುದ್ದಿಜಾಲ ಕೋಲಾರ

ವರಮಹಾಲಕ್ಷಿö್ಮÃ ಹಬ್ಬಕ್ಕೆ ಹೋಲಿಕೆ ಮಾಡಿದರೆ ಗೌರಿ-ಗಣೇಶ ಹಬ್ಬಕ್ಕೆ ಹೂವು, ಹಣ್ಣು, ಕಾಯಿ ಬೆಲೆ ಸ್ವಲ್ಪ ಕಡಿಮೆಯಾಗಿದ್ದು, ಗ್ರಾಹಕರಿಗೆ ಹೆಚ್ಚು ಹೊರೆ ಆಗದಿದ್ದರೂ ಹೂವು ಬೆಳೆಗಾರರಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ ಎನ್ನುವಂತಾಗಿದೆ.

ಕಳೆದ ತಿಂಗಳು ವರಲಕ್ಷಿö್ಮÃ ಹಬ್ಬಕ್ಕೆ ಹೂವು, ಹಣ್ಣು, ಕಾಯಿ ಬೆಲೆ ಗಗನಕ್ಕೇರಿತ್ತು. ಗೌರಿ-ಗಣೇಶ ಹಬ್ಬಕ್ಕೆ ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆಗಳು ಕಡಿಮೆಯಾಗಿರುವುದರಿಂದ ಗ್ರಾಹಕರು ನೆಟ್ಟುಸಿರು ಬಿಡುವಂತಾಗಿದೆ. ವ್ಯಾಪಾರಸ್ಥರಿಗೆ ಮಾತ್ರ ವ್ಯಾಪಾರ ಕಡಿಮೆಯಾಗುತ್ತಿರುವುದರಿಂದ ಅಷ್ಟೇನು ಲಾಭ ಸಿಗದಂತಾಗಿದೆ.

ವರಮಹಾಲಕ್ಷಿö್ಮÃ ಹಬ್ಬಕ್ಕೆ ಹೂವು ಸೇವಂತಿಗೆ ಸೇರಿದಂತೆ ಚಂಡು ಹೂವು, ಮಲ್ಲಿಗೆ, ಕನಕಾಂಬರ ದುಬಾರಿಯಾಗಿತ್ತು. ಸೋಮವಾರ ಮಾರುಕಟ್ಟೆಯಲ್ಲಿ ಸೇವಂತಿಗೆ, ಬಟನ್ ರೋಸ್, ೩೦೦ ರೂ.ಗಳಿಗೆ ಮಾರಾಟವಾಗುತ್ತಿತ್ತು. ಚಂಡು ಹೂವು ೧೨೦ ರೂ.ಗಳಿಗೆ ಮಾರಾಟವಾಗುತ್ತಿತ್ತು. ಹಣ್ಣುಗಳು ಬೆಲೆಯು ಕಡಿಮೆಯಾಗಿತ್ತು. ದಾಳಿಂಬೆ, ಆಪಲ್ ಕೆ.ಜಿ. ಒಂದಕ್ಕೆ ೧೫೦ ರೂ.ಗಳಿಗೆ ಮಾರಾಟವಾಗುತ್ತಿತ್ತು. ಮೂಸಂಬಿ, ಕಿತ್ತಲೆ, ಬಾಳೆಯಹಣ್ಣು ೧೦೦ ರೂ.ಗಳಿಗೆ ಮಾರಾಟವಾಗುತ್ತಿತ್ತು.

ವರಲಕ್ಷಿö್ಮÃ ಹಬ್ಬಕ್ಕೆ ಸೇವಂತಿಗೆ ೫೦೦ ರೂ.ಗಳ ಗಡಿ ದಾಟಿತ್ತು. ಕನಕಾಂಬರ ೩೦೦೦ ರೂ.ಗಳ ಗಡಿ ದಾಟಿತ್ತು. ಗೌರಿ-ಗಣೇಶ ಹಬ್ಬಕ್ಕೆ ಕನಕಾಂಬರ ಮತ್ತು ಮಲ್ಲಿಗೆ ಹೂವಿಗೆ ಅಷ್ಟೇನೂ ಬೇಡಿಕೆ ಇಲ್ಲ. ಸೇವಂತಿಗೆ ಚೆಂಡುಹೂವಿಗೆ ಮಾತ್ರ ಬೇಡಿಕೆ ಇರುವುದರಿಂದ ಇವುಗಳ ಬೆಲೆಯೂ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿವೆ.

ತೆಂಗಿನಕಾಯಿ ಬೆಲೆಯು ಸ್ವಲ್ಪ ಮಟ್ಟಿಗೆ ಕುಸಿದಿದ್ದು, ೩೦ ರೂ.ಗಳಿಂದ ೬೦ ರೂ.ಗಳ ತನಕ ಕಾಯಿ ಗಾತ್ರದ ಮೇಲೆ ಬೆಲೆ ನಿಗಧಿಯಾಗಿದೆ. ಗೌರಿ-ಗಣೇಶ ಹಬ್ಬಕ್ಕೆ ತೆಂಗಿನ ಕಾಯಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಹೆಣ್ಣುಮಕ್ಕಳಿಗೆ ಅರಿಶಿನ-ಕುಂಕುಮ ನೀಡುವವರು ಹಾಗೂ ಗ್ರಾಮೀಣ ಭಾಗದಲ್ಲಿ ಈ ಹಬ್ಬದ ದಿನ ಎಲ್ಲಾ ದೇವಸ್ಥಾನಗಳಲ್ಲಿಯೂ ಪೂಜೆ ಮತ್ತು ಹಿರಿಯರ ಹಾಗೂ ಪೂರ್ವಿಕರ ಸಮಾಧಿಗಳಿಗೆ ಪೂಜೆ ಮಾಡುವುದರಿಂದ ತೆಂಗಿನಕಾಯಿಗೆ ಬೇಡಿಕೆ ಇದೆ. ವರಮಹಾಲಕ್ಷಿö್ಮÃ ಹಬ್ಬಕ್ಕೆ ಹೋಲಿಕೆ ಮಾಡಿದರೆ ತೆಂಗಿನಕಾಯಿ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ದುಬಾರಿಯಾದ ಗೌರಿ-ಗಣೇಶನ ಮೂರ್ತಿಗಳು :

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಗೌರಿ-ಗೌಣೇಶನ ಮೂರ್ತಿಗಳ ಬೆಲೆ ಏರಿಕೆಯಾಗಿದೆ. ಒಂದು ಅಡಿ ಗಣೇಶನ ಮೂರ್ತಿ ೧೦೦೦ ರೂ.ಗಳಿಂದ ೧೫೦೦ ರೂ.ಗಳ ತನಕ ಮಾರಾಟವಾಗುತ್ತಿದೆ. ದೊಡ್ಡ ಮೂರ್ತಿಗಳಿಗೆ ಬೆಲೆ ಮತ್ತಷ್ಟು ದುಬಾರಿಯಾಗಿದೆ. ಈ ವರ್ಷ ಯಾವುದೇ ಸಾರ್ವತ್ರಿಕ ಚುನಾವಣೆಗಳು ಇಲ್ಲದೇ ಇರುವುದರಿಂದ ರಾಜಕಾರಣಿಗಳು ಮತ್ತು ಮುಖಂಡರು ಗಣೇಶ ಮೂರ್ತಿಗಳನ್ನು ಉಚಿತವಾಗಿ ನೀಡುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ಮತ್ತು ಯುವಕರು ಗಣೇಶನ ಮೂರ್ತಿಗಳ ಖರೀದಿಗೆ ಮುಂದಾಗಿದ್ದಾರೆ.

ಬಾಳೆಕಂಬಳ ಬೆಲೆಯು ದುಬಾರಿ :

ಜೋಡಿ ಬಾಳೆ ಕಂಬಗಳು ೫೦ ರೂ.ಗಳಿಂದ ೧೦೦ ರೂ.ಗಳ ತನಕ ಮಾರಾಟವಾಗುತ್ತಿದೆ. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವವರಿಗೆ ಬಾಳೆ ಕಂಬಗಳು ಅತಿಮುಖ್ಯ. ಆದ್ದರಿಂದ ದಿಢೀರನೆ ಬಾಳೆಕಂಬಗಳು ಬೆಲೆ ಏರಿಕೆಯಾಗಿವೆ. ಕಳೆದ ೬ ತಿಂಗಳಿAದ ಚೆಂಡುಹೂವಿಗೆ ಬೆಲೆ ಇರಲಿಲ್ಲ. ಈ ಹಬ್ಬಕ್ಕೆ ಚೆಂಡುಹೂವು ಬೆಲೆ ಏರಿಕೆಯಾಗಿರುವುದರಿಂದ ರೈತರಲ್ಲಿ ಸಂತಸ ಮೂಡುವಂತಾಗಿದೆ.

ಚಿತ್ರ ಕೆ.ಎಲ್.ಆರ್. ೦೩ : ಕೋಲಾರ ಮಾರುಕಟ್ಟೆಯಲ್ಲಿ ಹೂವು ಮಾರಾಟವಾಗುತ್ತಿರುವುದು

ಚಿತ್ರ ಕೆ.ಎಲ್.ಆರ್. ೦೩ಎ : ಬಾಳೆಕಂಬಗಳ ಖರೀದಿಗೆ ಮುಗಿಬಿದ್ದಿರುವ ಜನರು

ಚಿತ್ರ ಕೆ.ಎಲ್.ಆರ್. ೦೩ಬಿ : ಹಣ್ಣು ಬೆಲೆ ಕಡಿಮಯಾಗಿದ್ದರೂ ವ್ಯಾಪಾರ ಇಲ್ಲದೆ ಕಾಯುತ್ತಿರುವ ವ್ಯಾಪಾರಸ್ಥರು