ನ್ಯೂಸ್

ಗೋಶಾಲೆಯ ಹುಲ್ಲಿನ ಮೆದೆಗೆ ಬೆಂಕಿ

ಕಾಮಸಮುದ್ರ: ಕಾಡಿಗೆ ಹಚ್ಚಿದ ಬೆಂಕಿಯ ಕಿಡಿ ಸಮೀಪದಲ್ಲಿದ್ದ ಗೋಶಾಲೆಗೆ ತಗುಲಿದ್ದರಿಂದ ಗೋಶಾಲೆಯಲ್ಲಿದ್ದ ಹುಲ್ಲಿನ ಮೆದೆ, ಪೈಪು, ವೈರ್ ಮತ್ತು ಮರದ ದಿಮ್ಮಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಹೋಬಳಿಯ ತೊಪ್ಪನಹಳ್ಳಿಯ ಆಂಜನೇಯ ಗೋಶಾಲೆಗೆ ಬುಧವಾರ ಸಂಜೆ 4.30ರ ವೇಳೆ ಬೆಂಕಿ ತಗುಲಿದ್ದು, ಗೋಶಾಲೆ ಸಂಪೂರ್ಣ ಸುಟ್ಟು ಹೋಗಿದೆ.

ಬೋಡೇನಹಳ್ಳಿ ಲಕ್ಷ್ಮೀನಾರಾಯಣಪ್ರಸಾದ್ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದು, ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.