ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಸುಳಿವು ಕೊಟ್ಟವರಿಗೆ ಸಿಐಡಿ ಬಹುಮಾನ ೋಷಣೆ ಮಾಡಿದೆ.
ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಆರೋಪಿ ಕೆ. ರಾಮಕೃಷ್ಣ, ಈತನ ಪುತ್ರ ಮತ್ತು ನಿರ್ದೇಶಕ ಕೆ.ಆರ್. ವೇಣುಗೋಪಾಲ್ ಮತ್ತು ಸಾಲಗಾರ ಜಿ.ರಘುನಾಥ್ ತಲೆಮರೆಸಿಕೊಂಡವರು. ಇವರ ಕುರಿತು ಸುಳಿವು ಅಥವಾ ಹಿಡಿದು ಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಸಿಐಡಿ ಎಸ್‌ಪಿ (ಡಿಟಿಕ್ವಿವ್) ರಾಘವೇಂದ್ರ ಕೆ. ಹೆಗಡೆ ತಿಳಿಸಿದ್ದಾರೆ.
ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 1400 ಕೋಟಿ ರೂ. ಅವ್ಯವಹಾರದ ಆರೋಪ ಕೇಳಿಬಂದಿತ್ತು. ಹೆಚ್ಚಿನ ತನಿಖೆ ಸಲುವಾಗಿ ಸಿಐಡಿಗೆ ವಹಿಸಿ ಸರ್ಕಾರ ಆದೇಶಿಸಿತ್ತು. ಪ್ರಕರಣ ದಾಖಲಾಗುತ್ತಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಕುರಿತು 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ೋಷಿತ ಅಪರಾಧಿಗಳು ಎಂದು ೋಷಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಆರೋಪಿಗಳ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಸಿಐಡಿ ಪೊಲೀಸರು ಮನವಿ ಮಾಡಿದ್ದಾರೆ.
ಸುಳಿವು ಕೊಡಿ :
ಸಿಐಡಿ ಆರ್ಥಿಕ ಅಪರಾಧ ಗುಪ್ತದಳ ಡಿವೈಎಸ್‌ಪಿ ಮೊಬೈಲ್ ಸಂಖ್ಯೆ 94808 00181 ಮತ್ತು ದೂರವಾಣಿ ಸಂಖ್ಯೆ 080-22094485/22094498ಗೆ ಕರೆ ಮಾಡುವಂತೆ ಕೋರಿದ್ದಾರೆ.