ನ್ಯೂಸ್

ಗಿರಿಜಿಲ್ಲೆ ನೂತನ ಡಿಸಿ‌ ಆಗಿ ಡಾ.ಸುಶೀಲಾ



ಯಾದಗಿರಿ: ಗಿರಿಜಿಲ್ಲೆ ನೂತನ ಜಿಲ್ಲಾಧಿಕಾರಿಯನ್ನಾಗಿ ಡಾ.ಸುಶೀಲಾ ಬಿ., ರನ್ನು ವರ್ಗಾಯಿಸಿ ರಾಜ್ಯ ಸರ್ಕಾದ ಸೋಮವಾರ ಆದೇಶಿಸಿದೆ.

ಗದಗ ಜಿಪಂ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಡಾ.ಸುಶೀಲಾ 2015ರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿದ್ದಾರೆ. ಈಗಿನ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಕಳೆದ 9 ತಿಂಗಳ‌‌ ಹಿಂದಷ್ಟೇ ಡಿಸಿ‌ ಆಗಿ ಅಧಿಕಾರ ವಹಿಸಿಕೊಂಡಿದ್ದರು.