ನ್ಯೂಸ್

ಗಿಡ‌ ನೆಟ್ಟು ಸಂಭ್ರಮಿಸಿ ವಿಶ್ವ‌ ಪರಿಸರ ದಿನ ಆಚರಣೆ

ಚಾಮರಾಜನಗರ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ವಿಶ್ವಪರಿಸರ ಅಂಗವಾಗಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ವಿ.ಪಾಟೀಲ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಸಿ.ಜೆ.ವಿಶಾಲಾಕ್ಷಿ, ಎಂ.ರಮೇಶ್, ಮಹಮ್ಮದ್ ರೋಷನ್ ಷಾ,‌ ಉಮ್ಮತ್ತೂರು ಇಂದುಶೇಖರ್, ಪಿ.ಆರ್.ಅಮೃತ, ಎಂ.ಬಿ.ರಘುರಾಮ್,‌ಹರವೆ ಮಂಜು ಇದ್ದರು.
ಚಾಮರಾಜನಗರದ ಜಿಲ್ಲಾಸ್ಪತ್ರೆ ಮುಂಭಾಗ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಡಾ.ಎಂ.ಆರ್.ರವಿ ಸಸಿ ನೆಟ್ಟು ನೀರೆರೆದರು. ಎಸ್ಪಿ ಎಚ್.ಡಿ.ಆನಂದಕುಮಾರ್, ಡಿಎಚ್‌ಒ ಡಾ.ಎಂ.ಸಿ.ರವಿ, ವೈದ್ಯಕೀಯ ಕಾಲೇಜು ಡೀನ್ ಡಾ.ಎಂ. ಸಂಜೀವ್ ಇದ್ದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಿಪಂ ಸಭಾಂಗಣದ ಮುಂಭಾಗ ಶುಕ್ರವಾರ ಜಿಪಂ ಅಧ್ಯಕ್ಷೆ ಎಂ.ಅಶ್ವಿನಿ ಸಸಿಯನ್ನು ನೆಟ್ಟು ನೀರೆರೆದರು. ಜಿಪಂ ಉಪಕಾರ್ಯದರ್ಶಿ ಧರಣೇಶ್, ಸಹಾಯಕ ನಿರ್ದೇಶಕ ಬಸವರಾಜ್, ಸಾಮಾಜಿಕ ಅರಣ್ಯ ವಲಯ ಅರಣ್ಯಾಕಾರಿ ಟಿ.ಆರ್.ಅಮೃತ, ಉಪ ಅರಣ್ಯ ಸಂರಕ್ಷಣಾಕಾರಿ ಜಿ.ವೈ.ರಾಜು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್, ಯೋಜನಾ ನಿರ್ಣಾಯಕ ಮತ್ತು ಮೌಲ್ಯಮಾಪನ ಅಧಿಕಾರಿ ದೀಪಾ ಇದ್ದರು.
ಚಾಮರಾಜನಗರದ ಹೊರ ವಲಯದಲ್ಲಿರುವ ಬದನಗುಪ್ಪೆ, ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಎಚ್.ಎಂ.ಮಹದೇವಶೆಟ್ಟಿ, ಬಸವಣ್ಣ, ಪ್ರೇಮ್ ಕುಮಾರ್, ಡಿಸಿಎಫ್ ರಾಜು ಹಾಜರಿದ್ದರು.
ಚಾಮರಾಜನಗರ ಕೋಡಿಮೋಳೆ ಗ್ರಾಮದ ಶಾಲಾ ಆವರಣದಲ್ಲಿ ಭಗತ್ ಯುವ ಸೇನೆ ಕಾರ್ಯಕರ್ತರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. ಸೇನೆಯ ಕಾರ್ಯದರ್ಶಿ ನಾಗೇಶ್, ಕಾರ್ಯಕರ್ತರಾದ ಮಣಿ, ಸೋಮೇಶ್, ಶಶಿ,‌ಮಹೇಂದ್ರ, ಬಾಬು,‌ಲೋಕೇಶ್, ಮಂಜು ಉಪಸ್ಥಿತರಿದ್ದರು.
ಚಾಮರಾಜನಗರದ ನ್ಯಾಯಾಲಯ ರಸ್ತೆಯಲ್ಲಿರುವ ಶ್ರೀರಾಮಚಂದ್ರ ಪ್ರೌಢಶಾಲೆಯಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. ಅಧ್ಯಕ್ಷ ಎಂ.ಎಸ್ ಮಾದಯ್ಯ, ಕಾರ್ಯದರ್ಶಿ ರುದ್ರಮೂರ್ತಿ, ಮುಖ್ಯ ಶಿಕ್ಷಕ ರಂಗಸ್ವಾಮಿ ಇದ್ದರು.
ಸುವರ್ಣಾವತಿ ತೋಟಗಾರಿಕೆ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕ ಎಚ್.ನಾಗರಾಜ್ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ತೋಟಗಾರಿಕೆ ಸಹಾಯಕ ಕೆ.ಎಸ್.ನಾಗರಾಜು, ರೈತರಾದ ಆನಂದ್,‌ ಗಿರಿ ಇದ್ದರು.
ಚಾಮರಾಜನಗರದ ಹರದನಹಳ್ಳಿ ಜ್ಞಾನದೀಪ ಪಬ್ಲಿಕ್ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಜ್ಞಾನದೀಪ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಆರ್.ಪಿ.ನಂಜುಂಡಸ್ವಾಮಿ, ಗ್ರಾಪಂ ಅಧ್ಯಕ್ಷ ಕೃಷ್ಣ ಹಾಜರಿದ್ದರು.
ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಕೆರೆ ಸುತ್ತ ಸಸಿಗಳನ್ನು ನೆಡಲಾಯಿತು. ಗ್ರಾಪಂ ಅಧ್ಯಕ್ಷೆ ಮಮತಾರಾಣಿ, ಸದಸ್ಯ ಕೃಷ್ಣಮೂರ್ತಿ, ಪಿಡಿಒ ಮರಿಸ್ವಾಮಿ, ಮುಖಂಡರಾದ ಪುಟ್ಟಸ್ವಾಮಿ, ಬಸವಲಿಂಗಶೆಟ್ಟಿ, ಕುಮಾರ, ರಾಜಮ್ಮ,‌ಲಕ್ಷ್ಮಮ್ಮ ಹಾಗೂ ಗ್ರಾಪಂ ಸಿಬ್ಬಂದಿ ಭಾಗವಹಿಸಿದ್ದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಗಿಡ ನೆಡಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನಂದೀಶ್ ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರಾದ ಮಂಜಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಕಾರ್ಯದರ್ಶಿ ನಾಗೇಶ್ ಭಾರತ್ ಸ್ಕೌಟ್ ಗೈಡ್ ತಾಲೂಕು ಸಂಚಾಲಕಿ ಇತರರು ಹಾಜರಿದ್ದರು.
ಚಾಮರಾಜನಗರ ತಾಲೂಕಿನ ಕೆ.ಗುಡಿ ಅರಣ್ಯ ಪ್ರದೇಶ ವ್ಯಾಪ್ತಿಯ ಅಟ್ಟುಗುಳಿಪುರ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಸಸಿ ವಿತರಿಸಲಾಯಿತು. ಡಿಆರ್ ಎಫ್ ಒ ಮಂಜುನಾಥ್, ಗ್ರಾಪಂ ಸದಸ್ಯೆ ಕುಮಾರಿ, ಇಡಿಸಿ ಅಧ್ಯಕ್ಷ ಶಿವಬಸಪ್ಪ,‌‌ ಪರಿಸರ ಪ್ರೇಮಿ ಕ್ರಿಸ್ಟಿ ಸಾಮುವೇಲ್ ಹಾಗೂ ಇತರರಿದ್ದರು.
ಚಾಮರಾಜನಗರದ ಪ್ರಶಾಂತ್ ನಗರದಲ್ಲಿ‌ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಜನ್ಮದಿನ ಮತ್ತು ಪರಿಸರ ದಿನಾಚರಣೆ ಪ್ರಯುಕ್ತ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಇಂದುಶೇಖರ್ ಗಿಡ ನೆಟ್ಟರು. ಎಸ್.ಪಿ.ಬಿ ಅಭಿಮಾನಿಗಳ ಬಳಗದ ಅಧ್ಯಕ್ಷ ಶಿವು, ಯುವನಟ ಮಂಜು‌ ಗಾಳಿಪುರ, ಆಲೂರು ಮಲ್ಲು, ಸಾಧನ‌‌ ಸಂಸ್ಥೆ ನಿರ್ದೇಶಕ ಟಿ.ಜೆ.ಸುರೇಶ್, ಶಿಕ್ಷಕ ಮಹದೇವಯ್ಯ ಮತ್ತು ಇತರರು ಉಪಸ್ಥಿತರಿದ್ದರು.